ವಿಧಾನಸಭಾ ಚುನಾವಣೆಯಲ್ಲಿ ಬಜೆಟ್ ಘೋಷಣೆಗಳನ್ನೇ ಅಸ್ತ್ರ ಬಳಸಲಿರುವ ಕಮಲ ಪಡೆ

|

Updated on: Feb 02, 2020 | 7:03 AM

ದೆಹಲಿ: ವಿಧಾನಸಭಾ ಚುನಾವಣೆಗೆ ಇನ್ನು ಆರೇ ದಿನ ಬಾಕಿ ಇದೆ. ದೆಹಲಿಯಲ್ಲಿ ಗದ್ದುಗೆ ಏರಲೇಬೇಕು ಅಂತಾ ಪಟ್ಟು ಹಿಡಿದಿರೋ ಕೇಸರಿ ಪಡೆ, ಲೆಕ್ಕಾಚಾರದಲ್ಲೇ ಬಜೆಟ್ ಮಂಡನೆ ಮಾಡಿದೆ. ಬಜೆಟ್ ಘೋಷಣೆಗಳನ್ನೇ ಅಸ್ತ್ರವಾಗಿಸಿಕೊಂಡು ಪ್ರಚಾರದ ಅಖಾಡಕ್ಕಿಳಿದ್ರೆ, ಕೇಜ್ರಿವಾಲ್ ಮತ್ತು ಕಾಂಗ್ರೆಸ್​ ಕೌಂಟರ್ ಅಟ್ಯಾಕ್​ಗೆ ರೆಡಿಯಾಗಿವೆ. ಮೋದಿ ಮನಿ ಮಂತ್ರ. ನಿರ್ಮಲಾ ಸೀತಾರಾಮನ್ ಆಯವ್ಯಯ. ಕೊನೆಗೂ ಮೋದಿ 2.0 ಕೇಂದ್ರ ಬಜೆಟ್ ಮಂಡನೆಯಾಗಿದೆ. ಬಜೆಟ್ ಬಗ್ಗೆ ಪರ ವಿರೋಧದ ಚರ್ಚೆಗಳು ನಡೀತಾನೇ ಇವೆ. ಆದ್ರೆ, ಈ ಬಜೆಟ್​ ಬಗ್ಗೆ ಮಾತ್ರ […]

ವಿಧಾನಸಭಾ ಚುನಾವಣೆಯಲ್ಲಿ ಬಜೆಟ್ ಘೋಷಣೆಗಳನ್ನೇ ಅಸ್ತ್ರ ಬಳಸಲಿರುವ ಕಮಲ ಪಡೆ
Follow us on

ದೆಹಲಿ: ವಿಧಾನಸಭಾ ಚುನಾವಣೆಗೆ ಇನ್ನು ಆರೇ ದಿನ ಬಾಕಿ ಇದೆ. ದೆಹಲಿಯಲ್ಲಿ ಗದ್ದುಗೆ ಏರಲೇಬೇಕು ಅಂತಾ ಪಟ್ಟು ಹಿಡಿದಿರೋ ಕೇಸರಿ ಪಡೆ, ಲೆಕ್ಕಾಚಾರದಲ್ಲೇ ಬಜೆಟ್ ಮಂಡನೆ ಮಾಡಿದೆ. ಬಜೆಟ್ ಘೋಷಣೆಗಳನ್ನೇ ಅಸ್ತ್ರವಾಗಿಸಿಕೊಂಡು ಪ್ರಚಾರದ ಅಖಾಡಕ್ಕಿಳಿದ್ರೆ, ಕೇಜ್ರಿವಾಲ್ ಮತ್ತು ಕಾಂಗ್ರೆಸ್​ ಕೌಂಟರ್ ಅಟ್ಯಾಕ್​ಗೆ ರೆಡಿಯಾಗಿವೆ.

ಮೋದಿ ಮನಿ ಮಂತ್ರ. ನಿರ್ಮಲಾ ಸೀತಾರಾಮನ್ ಆಯವ್ಯಯ. ಕೊನೆಗೂ ಮೋದಿ 2.0 ಕೇಂದ್ರ ಬಜೆಟ್ ಮಂಡನೆಯಾಗಿದೆ. ಬಜೆಟ್ ಬಗ್ಗೆ ಪರ ವಿರೋಧದ ಚರ್ಚೆಗಳು ನಡೀತಾನೇ ಇವೆ. ಆದ್ರೆ, ಈ ಬಜೆಟ್​ ಬಗ್ಗೆ ಮಾತ್ರ ಬಿಜೆಪಿ ಲೆಕ್ಕಾಚಾರ ಇದ್ದೇ ಇದೆ. ಅದು ದೆಹಲಿಯಲ್ಲಿ ಗದ್ದುಗೆ ಹಿಡಿಯಲು ಬಿಜೆಪಿ ಬಜೆಟ್ ಮಂಡನೆಯನ್ನೇ ಅಸ್ತ್ರವಾಗಿಸಿಕೊಂಡಿದೆ.

ಬಜೆಟ್ ಘೋಷಣೆಗಳೇ ದೆಹಲಿಯಲ್ಲಿ ಬಿಜೆಪಿ ಅಸ್ತ್ರ!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರಿರುವ2020-21ರ ಬಜೆಟ್‌ನಲ್ಲಿ ದೆಹಲಿಗೂ ಭರ್ಜರಿ ಕೊಡುಗೆ ನೀಡಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡೇ, ಬಜೆಟ್ ಮಂಡಿಸಿರೋದು ಸ್ಪಷ್ಟವಾಗ್ತಿದೆ. ಈ ಮೊದಲು ಸಂಬಳ ಗಳಿಸುವ ವರ್ಗಕ್ಕೆ ಹೆಚ್ಚಿನ ಆದಾಯ ತೆರಿಗೆ ವಿಧಿಸಲಾಗುತ್ತಿತ್ತು.

ಆದರೆ, ಶನಿವಾರದ ಬಜೆಟ್​ನಲ್ಲಿ ಆದಾಯ ತೆರಿಗೆ ದರಗಳನ್ನು ಇಳಿಕೆ ಮಾಡಿದ್ದಾರೆ. ಈ ಮೂಲಕ ಮಧ್ಯಮ ವರ್ಗ, ಮೇಲ್ಪರ್ಗ ಹಾಗೂ ಸಂಬಳ ಗಳಿಸುವ ವರ್ಗಕ್ಕೆ ಕೊಡುಗೆ ನೀಡಿದ್ದಾರೆ. ಇದನ್ನೇ ಈಗ ಬಿಜೆಪಿಯು ದೆಹಲಿಯ ಚುನಾವಣಾ ಪ್ರಚಾರ ಸಭೆಗಳಲ್ಲಿ ಬಳಸಿಕೊಳ್ಳಲಿದೆ. ಮುಂದಿನ ವಾರ ಪ್ರಧಾನಿ ಮೋದಿ ದೆಹಲಿಯಲ್ಲಿ ಎರಡು ಚುನಾವಣಾ ಱಲಿಗಳನ್ನು ನಡೆಸಲಿದ್ದಾರೆ.

ಬಜೆಟ್ ಅಸ್ತ್ರ:
ಸಣ್ಣ ವ್ಯಾಪಾರಿಗಳಿಗೆ ಆಡಿಟ್​ನಿಂದ ವಿನಾಯಿತಿ ನೀಡಲಾಗಿದೆ. ದೆಹಲಿ ರಾಷ್ಟ್ರ ರಾಜಧಾನಿ. ಹಾಗೆಯೇ, ವಾಣಿಜ್ಯ ಚಟುವಟಿಕೆ ಕೂಡ ಜೋರಾಗಿ ನಡೆಯುತ್ತಿದೆ. ದೆಹಲಿ ಸಣ್ಣ ವ್ಯಾಪಾರಿಗಳಿಗೆ ಇದರಿಂದ ಲಾಭವಾಗಲಿದೆ. ವಾಯು ಮಾಲಿನ್ಯ ಹೆಚ್ಚಾಗಿರುವ 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರೋ ನಗರಗಳಲ್ಲಿ ವಾಯು ಮಾಲಿನ್ಯ ನಿರ್ಮೂಲನೆಗಾಗಿ 4,400 ಕೋಟಿ ರೂ ಹಣವನ್ನ ಬಜೆಟ್​ನಲ್ಲಿ ಘೋಷಿಸಲಾಗಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಹಣ ನೀಡಿದೆ.

ಈಗಾಗಲೇ ಅನಧಿಕೃತ ಕಾಲೋನಿಗಳನ್ನ ಸಕ್ರಮಗೊಳಿಸುವ ಮೂಲಕ, ದೆಹಲಿಯ ಅನಧಿಕೃತ ಕಾಲೋನಿಗಳ 40 ಲಕ್ಷ ಜನರ ವೋಟ್‌ ಮೇಲೂ ಬಿಜೆಪಿ ಕಣ್ಣಿಟ್ಟಿದೆ. ಕೇಂದ್ರದ ಬಜೆಟ್‌ ದೆಹಲಿ ಜನರನ್ನು ಖುಷಿಗೊಳಿಸಲು ಬಳಸಿರುವುದು ಸ್ಪಷ್ಟ.
ಇದು ಬಿಜೆಪಿಗೆ ಎಷ್ಟರ ಮಟ್ಟಿಗೆ ಲಾಭವಾಗುತ್ತೆ ಅನ್ನೋದು ಚುನಾವಣಾ ಫಲಿತಾಂಶ ಬಂದಾಗ ಸ್ಪಷ್ಟವಾಗಲಿದೆ.

ಪ್ರಚಾರದಲ್ಲಿ ಹಿಂದೆ ಬಿದ್ದ ಕಾಂಗ್ರೆಸ್‌:
ದೆಹಲಿ ಚುನಾವಣಾ ಅಬ್ಬರದಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿಗಳು ಪರಸ್ಪರ ಪೈಪೋಟಿಗಿಳಿದಿವೆ. ಆದ್ರೆ, ಪ್ರಚಾರದಲ್ಲಿ ಹಿಂದೆ ಬಿದ್ದಿರೋದು ಕಾಂಗ್ರೆಸ್ ಪಕ್ಷ. ದೆಹಲಿ ಕಾಂಗ್ರೆಸ್​ನ ಹಿರಿಯ ಕೈ ನಾಯಕ ಸುಭಾಷ್ ಚೋಪ್ರಾ ಸೇರಿ ಹಲವರು ಅಷ್ಟಾಗಿ ಪ್ರಚಾರಕ್ಕಿಳಿದಿಲ್ಲ. ಹೀಗಾಗಿ, ಫೆಬ್ರವರಿ 3ರಂದು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ. ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಹೋರಾಡುತ್ತಿದೆ.

ಇನ್ನು ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷವು ಬಹುಮತ ಪಡೆಯುವ ವಿಶ್ವಾಸದೊಂದಿಗೆ ಹೋರಾಟ ನಡೆಸ್ತಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅಭಿವೃದ್ಧಿ ಕಾರ್ಯಗಳ ಅಸ್ತ್ರದೊಂದಿಗೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ದೆಹಲಿ ಅಸೆಂಬ್ಲಿ ಚುನಾವಣೆಯು ಬಿಜೆಪಿಯ ಅಮಿತ್ ಶಾ ವರ್ಸಸ್ ಅರವಿಂದ್ ಕೇಜ್ರಿವಾಲ್ ಎನ್ನುವಂತಾಗಿದೆ. ಈ ಇಬ್ಬರ ನಡುವೆ ಯಾರು ಗೆಲ್ಲುತ್ತಾರೆ ಅನ್ನೋದೇ ಈಗಿರುವ ಕುತೂಹಲ.

Published On - 6:59 am, Sun, 2 February 20