AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಧಾನ‘ಕರ’ವಾಯಿತೇ ಆದಾಯ ತೆರಿಗೆ!?

ದೆಹಲಿ: 2020-21ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಈ ಬಾರಿ ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಈ ಬಾರಿ ವೈಯಕ್ತಿಕ ಆದಾಯ ತೆರಿಗೆ ಲೆಕ್ಕಾಚಾರದಲ್ಲಿ..  2.5 ಲಕ್ಷ ರೂ. ಒಳಗಿರುವ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವಂತಿಲ್ಲ 2.5 ಲಕ್ಷದಿಂದ 5 ಲಕ್ಷ ರೂ. ಒಳಗಿನ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಪಾವತಿಸಬೇಕು 5 ಲಕ್ಷದಿಂದ 7.5 ಲಕ್ಷ ರೂ. ಆದಾಯಕ್ಕೆ ಶೇ. 10ರಷ್ಟು ತೆರಿಗೆ 7.5 ಲಕ್ಷದಿಂದ 10 […]

ಸಮಾಧಾನ‘ಕರ’ವಾಯಿತೇ ಆದಾಯ ತೆರಿಗೆ!?
ಸಾಧು ಶ್ರೀನಾಥ್​
|

Updated on:Feb 01, 2020 | 2:32 PM

Share

ದೆಹಲಿ: 2020-21ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಈ ಬಾರಿ ತೆರಿಗೆ ಪಾವತಿದಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ.

ಈ ಬಾರಿ ವೈಯಕ್ತಿಕ ಆದಾಯ ತೆರಿಗೆ ಲೆಕ್ಕಾಚಾರದಲ್ಲಿ..  2.5 ಲಕ್ಷ ರೂ. ಒಳಗಿರುವ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವಂತಿಲ್ಲ 2.5 ಲಕ್ಷದಿಂದ 5 ಲಕ್ಷ ರೂ. ಒಳಗಿನ ಆದಾಯಕ್ಕೆ ಶೇ. 5ರಷ್ಟು ತೆರಿಗೆ ಪಾವತಿಸಬೇಕು 5 ಲಕ್ಷದಿಂದ 7.5 ಲಕ್ಷ ರೂ. ಆದಾಯಕ್ಕೆ ಶೇ. 10ರಷ್ಟು ತೆರಿಗೆ 7.5 ಲಕ್ಷದಿಂದ 10 ಲಕ್ಷ ರೂ. ಆದಾಯಕ್ಕೆ ಶೇ. 15ರಷ್ಟು ತೆರಿಗೆ 10 ಲಕ್ಷದಿಂದ 12.5 ಲಕ್ಷ ರೂ. ಆದಾಯಕ್ಕೆ ಶೇ. 20ರಷ್ಟು ತೆರಿಗೆ 12.5 ಲಕ್ಷದಿಂದ 15 ಲಕ್ಷ ರೂ. ಆದಾಯಕ್ಕೆ ಶೇ. 25ರಷ್ಟು ತೆರಿಗೆ 15 ಲಕ್ಷ ರೂ. ಮೇಲ್ಪಟ್ಟು ಆದಾಯಕ್ಕೆ ಶೇ.30ರಷ್ಟು ತೆರಿಗೆ ಪಾವತಿಸಬೇಕು.

ವೈಯಕ್ತಿಕವಾಗಿ ವಾರ್ಷಿಕ ಆದಾಯ 5 ಲಕ್ಷ ಮಾತ್ರ ಇದ್ರೆ ತೆರಿಗೆ ವಿನಾಯಿತಿ: ವೈಯಕ್ತಿಕ ಆದಾಯ ತೆರಿಗೆ ಮಿತಿ ಇಳಿಕೆ ವಿಚಾರಕ್ಕೆ ಸಂಬಂಧಿಸಿ 2.5ಲಕ್ಷದವರೆಗೂ ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. 2.5ರಿಂದ 5ಲಕ್ಷದವರೆಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ ಪಾವತಿಸಬೇಕಿದೆ. ಆದ್ರೆ ವೈಯಕ್ತಿಕವಾಗಿ ವಾರ್ಷಿಕ ಆದಾಯ 5ಲಕ್ಷ ಮಾತ್ರ ಇದ್ರೆ ತೆರಿಗೆ ಕಟ್ಟಬೇಕಿಲ್ಲ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 87ಎ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. ವಾರ್ಷಿಕ ಆದಾಯ 5ಲಕ್ಷ ಮಾತ್ರ ಇದ್ರೆ 12,500 ರೂ. ತೆರಿಗೆ ವಿನಾಯಿತಿ ಇದೆ. 5ಲಕ್ಷ ಮಾತ್ರ ಆದಾಯ ಇರುವವರು ತೆರಿಗೆ ವಿನಾಯಿತಿಗೆ ಅರ್ಹರಾಗಿದ್ದಾರೆ. ಆದಾಯ 5ಲಕ್ಷದ 1 ರೂ. ಆದ್ರೂ ತೆರಿಗೆ ವಿನಾಯಿತಿ ಇರುವುದಿಲ್ಲ. 2.5ರಿಂದ 5ಲಕ್ಷದವರೆಗಿನ ಆದಾಯಕ್ಕಿದ್ದ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 87ಎ ಅನ್ವಯ ಆಗಲ್ಲ.

ವೈಯಕ್ತಿಕ ಆದಾಯ ತೆರಿಗೆಯಿಂದ ಕೇಂದ್ರ ಸರ್ಕಾರಕ್ಕೆ 40 ಸಾವಿರ ಕೋಟಿ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ ಎಂದು ಬಜೆಟ್ ಮಂಡನೆ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

Published On - 1:46 pm, Sat, 1 February 20