ಮೋದಿ ದೇವರಿಗೂ ವಿವರಿಸಬಲ್ಲರು ಎಂದ ರಾಹುಲ್; ಕಾಂಗ್ರೆಸ್ ನಾಯಕನಿಗೆ ಪ್ರಧಾನಿಯ ಜನಪ್ರಿಯತೆ ಅರಗಿಸಿಕೊಳ್ಳಲಾಗುತ್ತಿಲ್ಲ: ಬಿಜೆಪಿ ತಿರುಗೇಟು

ಜಗತ್ತು ತುಂಬಾ ದೊಡ್ಡದಾಗಿದೆ ಮತ್ತು ಜಟಿಲವಾಗಿದೆ. ಯಾವುದೇ ವ್ಯಕ್ತಿಗೆ ಎಲ್ಲವನ್ನೂ ತಿಳಿಯಲು ಸಾಧ್ಯವಿಲ್ಲ. ಅದು ರೋಗ. ಭಾರತದಲ್ಲಿ ಒಂದು ಗುಂಪು ಇದೆ, ಅವರು ಎಲ್ಲವನ್ನೂ ತಿಳಿದಿದ್ದಾರೆ ಎಂದು ಭಾವಿಸುತ್ತಾರೆ. ಅವರು ದೇವರಿಗಿಂತ ಹೆಚ್ಚು ತಿಳಿದಿದ್ದಾರೆ ಎಂದು ಅವರು ಭಾವಿಸುತ್ತಾರೆ.

ಮೋದಿ ದೇವರಿಗೂ ವಿವರಿಸಬಲ್ಲರು ಎಂದ ರಾಹುಲ್; ಕಾಂಗ್ರೆಸ್ ನಾಯಕನಿಗೆ ಪ್ರಧಾನಿಯ ಜನಪ್ರಿಯತೆ ಅರಗಿಸಿಕೊಳ್ಳಲಾಗುತ್ತಿಲ್ಲ: ಬಿಜೆಪಿ ತಿರುಗೇಟು
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:May 31, 2023 | 4:08 PM

ದೆಹಲಿ: ಅಮೆರಿಕದಲ್ಲಿರುವ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಆಡಳಿತಾರೂಢ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ರಾಹುಲ್ ಅಮೆರಿಕದಲ್ಲಿ ಆರು ದಿನಗಳ ಪ್ರವಾಸದಲ್ಲಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತದಲ್ಲಿ ದೇವರಿಗಿಂತ ಹೆಚ್ಚು ತಿಳಿದಿದೆ ಎಂದು ಭಾವಿಸುವ ಜನರಿದ್ದಾರೆ. ಅಂಥವರಲ್ಲಿ ಪ್ರಧಾನಿ ಮೋದಿ ಒಬ್ಬರು ಎಂದು ಹೇಳಿದ್ದರು. ಇದನ್ನು ಖಂಡಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur), ಇತ್ತೀಚಿನ ವಿದೇಶಿ ಭೇಟಿಗಳಲ್ಲಿ ಪ್ರಧಾನ ಮಂತ್ರಿಯ ಬಗ್ಗೆ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ ನಾಯಕನಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಯುಎಸ್ಎ ಆಯೋಜಿಸಿದ್ದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೆಲವರು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ. ಅವರು ಇತಿಹಾಸವನ್ನು ಇತಿಹಾಸಕಾರರಿಗೆ, ವಿಜ್ಞಾನವನ್ನು ವಿಜ್ಞಾನಿಗಳಿಗೆ ಮತ್ತು ಸೈನ್ಯಕ್ಕೆ ಯುದ್ಧವನ್ನು ವಿವರಿಸುತ್ತಾರೆ.

ಜಗತ್ತು ತುಂಬಾ ದೊಡ್ಡದಾಗಿದೆ ಮತ್ತು ಜಟಿಲವಾಗಿದೆ. ಯಾವುದೇ ವ್ಯಕ್ತಿಗೆ ಎಲ್ಲವನ್ನೂ ತಿಳಿಯಲು ಸಾಧ್ಯವಿಲ್ಲ. ಅದು ರೋಗ. ಭಾರತದಲ್ಲಿ ಒಂದು ಗುಂಪು ಇದೆ, ಅವರು ಎಲ್ಲವನ್ನೂ ತಿಳಿದಿದ್ದಾರೆ ಎಂದು ಭಾವಿಸುತ್ತಾರೆ. ಅವರು ದೇವರಿಗಿಂತ ಹೆಚ್ಚು ತಿಳಿದಿದ್ದಾರೆ ಎಂದು ಅವರು ಭಾವಿಸುತ್ತಾರೆ. ನಮ್ಮ ಪ್ರಧಾನಿ ಅಂಥವರಲ್ಲಿ ಒಬ್ಬರು. ಅವರು ದೇವರೊಂದಿಗೆ ಕುಳಿತು ಬ್ರಹ್ಮಾಂಡ ಹೇಗೆ ನಡೆಯುತ್ತದೆ ಎಂದು ದೇವರಿಗೆ ವಿವರಿಸುತ್ತಾರೆ. ಇದನ್ನು ನೋಡಿ ದೇವರಿಗೆ ಗೊಂದಲವಾಗುತ್ತದೆ, ನಾನು ಎಂಥಾ ಜಗತ್ತು ಸೃಷ್ಟಿಸಿದೆ ಎಂದು!

ಅವರು ಇತಿಹಾಸಕಾರರಿಗೆ ಇತಿಹಾಸವನ್ನು ವಿವರಿಸಬಹುದು, ವಿಜ್ಞಾನಿಗಳಿಗೆ ವಿಜ್ಞಾನ ಮತ್ತು ಸೈನ್ಯಕ್ಕೆ ಯುದ್ಧವನ್ನು ವಿವರಿಸಬಹುದು ಎಂದು ಭಾವಿಸುತ್ತಾರೆ. ಆದರೆ ಅದರ ಮಧ್ಯಭಾಗದಲ್ಲಿರುವ ಸಾಮಾನ್ಯ ವಿಷಯಗಳನ್ನು ಅವರು ಕೇಳಲು ಸಿದ್ಧರಿಲ್ಲ ಎಂದು ರಾಹುಲ್ ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಆಡಳಿತ ಪಕ್ಷದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಾಂಗ್ರೆಸ್ ನಾಯಕ ವಿದೇಶ ಪ್ರವಾಸದ ವೇಳೆ ಭಾರತವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ತಮ್ಮ ವಿದೇಶಿ ಭೇಟಿಗಳ ಸಮಯದಲ್ಲಿ, ರಾಹುಲ್ ಗಾಂಧಿಯವರು ಭಾರತವನ್ನು ಅವಮಾನಿಸುತ್ತಾರೆ, ಇದು ಸ್ವೀಕಾರಾರ್ಹವಲ್ಲ. ಅವರು ಪ್ರಧಾನಿ ಮೋದಿಯನ್ನು ಅವಮಾನಿಸಲು ಬಯಸುತ್ತಾರೆ. ಆದರೆ ಕೊನೆಗೆ ಭಾರತವನ್ನು ಅವಮಾನಿಸುತ್ತಾರೆ. ಭಾರತದ ಪ್ರಗತಿಯನ್ನು ಪ್ರಶ್ನಿಸುತ್ತಾರೆ. ನಮ್ಮ ಬೆಳೆಯುತ್ತಿರುವ ಸ್ಥಾನವನ್ನು ಜಗತ್ತು ಒಪ್ಪಿಕೊಳ್ಳುತ್ತಿರುವ ಸಮಯದಲ್ಲಿ ಅವರು ಭಾರತವನ್ನು ಕಳಂಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi US Tour: ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಸರ್ಕಾರ ಪ್ರಯತ್ನಿಸಿತ್ತು: ರಾಹುಲ್ ಗಾಂಧಿ

ಪ್ರಧಾನಿ ಮೋದಿ ಅವರು ಇತ್ತೀಚೆಗೆ ತಮ್ಮ ವಿದೇಶ ಪ್ರವಾಸದ ಸಮಯದಲ್ಲಿ ವಿಶ್ವದ ಸುಮಾರು 24 ಪ್ರಧಾನಿಗಳು ಮತ್ತು ಅಧ್ಯಕ್ಷರನ್ನು ಭೇಟಿ ಮಾಡಿದರು ಮತ್ತು 50 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದರು. ಹಲವಾರು ವಿಶ್ವ ನಾಯಕರು ಮೋದಿ ಅತ್ಯಂತ ಜನಪ್ರಿಯ ನಾಯಕ ಎಂದು ಹೇಳುತ್ತಾರೆ. ಆಸ್ಟ್ರೇಲಿಯಾದ ಪ್ರಧಾನಿ ‘ಪಿಎಂ ಮೋದಿ ಬಾಸ್’ ಎಂದು ಹೇಳಿದಾಗ, ರಾಹುಲ್ ಗಾಂಧಿಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Wed, 31 May 23