ಮಧ್ಯಪ್ರದೇಶ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 6 ಮಂದಿ ಸಾವು

|

Updated on: Feb 06, 2024 | 1:43 PM

ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಬೈರಾಗರ್ ಗ್ರಾಮದ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಹಲವು ಜನರು ಒಳಗೆ ಸಿಲುಕಿರುವ ಶಂಕೆ ಇದೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಸುತ್ತಿದೆ.

ಮಧ್ಯಪ್ರದೇಶ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 6 ಮಂದಿ ಸಾವು
ಸ್ಫೋಟ-ಸಾಂದರ್ಭಿಕ ಚಿತ್ರ
Image Credit source: India Today
Follow us on

ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಬೈರಾಗರ್ ಗ್ರಾಮದ ಪಟಾಕಿ ಕಾರ್ಖಾನೆ(Firecracker Factory)ಯಲ್ಲಿ ಮಂಗಳವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಹಲವು ಜನರು ಒಳಗೆ ಸಿಲುಕಿರುವ ಶಂಕೆ ಇದೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಸುತ್ತಿದೆ. ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಒಂದರ ಹಿಂದೆ ಒಂದರಂತೆ ಸ್ಫೋಟ ಸಂಭವಿಸಿದೆ. ಆರು ಮಂದಿ ಸಾವನ್ನಪ್ಪಿದ್ದು, 60 ಮನೆಗಳಿಗೆ ಬೆಂಕಿ ತಗುಲಿದೆ.

ಕಾರ್ಖಾನೆಯಿಂದ ಬೆಂಕಿಯ ಜ್ವಾಲೆ ತೀವ್ರಗೊಳ್ಳುತ್ತಿದೆ, ಬೆಂಕಿ ನಂದಿಸಲು ಹಲವು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಅಗಮಿಸಿದೆ. ಕಾರ್ಖಾನೆಯೊಳಗೆ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಸ್ಫೋಟವು ಎಷ್ಟು ತೀವ್ರವಾಗಿತ್ತೆಂದರೆ ಬೆಂಕಿಯ ಜ್ವಾಲೆ ಭುಗಿಲೇಳುತ್ತಿತ್ತು, ಇದರಿಂದ ಸುತ್ತಮುತ್ತಲಿನಲ್ಲಿರುವ ಜನರು ಭಯಭೀತರಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಸಮೀಪದ ಕಟ್ಟಡಗಳಿಂದ ಜನರನ್ನು ದೂರ ಕಳುಹಿಸಲಾಗಿದೆ.

ಮತ್ತಷ್ಟು ಓದಿ:  West Bengal: ಪಶ್ಚಿಮ ಬಂಗಾಳದ ಪಟಾಕಿ ಕಾರ್ಖಾನೆ ಸ್ಫೋಟ, ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಮಾಹಿತಿ ಪ್ರಕಾರ, ಕಾರ್ಖಾನೆಯಲ್ಲಿ ಪಟಾಕಿಗಾಗಿ ಇರಿಸಲಾಗಿದ್ದ ಗನ್​ಪೌಡರ್​ಗೆ ಬೆಂಕಿ ತಗುಲಿದ ನಂತರ ಶೀಘ್ರದಲ್ಲಿ ಬೆಂಕಿ ಗಂಭೀರ ಸ್ವರೂಪವನ್ನು ತಾಳಿತ್ತು. ಜನರು ತಕ್ಷಣ ಸ್ಥಳಕ್ಕೆ ದೌಡಾಯಿಸಿತ್ತು. ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿದೆ ಎನ್ನಲಾಗುತ್ತಿದೆ, ಆಡಳಿತ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:30 pm, Tue, 6 February 24