ಗುಜರಾತ್ನ ಪಂಚಮಹಲ್ ಜಿಲ್ಲೆಯಲ್ಲಿರುವ ಗೋಘಾಂಬಾದಲ್ಲಿರುವ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ (GFL)ನಲ್ಲಿ ಸ್ಫೋಟವುಂಟಾಗಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರ್ಘಟನೆ ನಡೆದಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಫೋಟವಾಗಿ, ಬೆಂಕಿ ಹೊತ್ತಿ ಉರಿದಿದೆ ಎಂದು ಜಿಲ್ಲಾ ಪೊಲೀಸರು ಹೇಳಿದ್ದಾರೆ. ಫ್ಯಾಕ್ಟರಿಯಲ್ಲಿ ಉಂಟಾದ ಸ್ಫೋಟದ ಶಬ್ದ ಅನೇಕ ಕಿಲೋಮೀಟರ್ಗಳವರೆಗೆ ಕೇಳಿದೆ ಎನ್ನಲಾಗಿದೆ.
ಇಡೀ ಕಾರ್ಖಾನೆಯಿಂದ ದಟ್ಟವಾಗಿ ಹೊಗೆ ಏಳುತ್ತಿರುವ ದೃಶ್ಯ ವೈರಲ್ ಆಗಿದೆ. ಜಿಲ್ಲಾಧ್ಯಂತ ಇರುವ ಎಲ್ಲ ಅಗ್ನಿಶಾಮಕದಳಗಳೂ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ. ಈ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿದೆ. ಈ ಗುಜರಾತ್ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ ಕಂಪನಿ ಕಳೆದ 30ವರ್ಷಗಳಿಂದಲೂ ಫ್ಲೋರಿನ್ ರಾಸಾಯನನಿಕ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಯಾಗಿದೆ. ಈ ಕಾರ್ಖಾನೆಯ ಶೀತಲೀಕರಣ ಘಟಕದಲ್ಲಿ ಸ್ಫೋಟವಾಗಿದೆ. ಭಾರತದ ಅತಿದೊಡ್ಡ ಶೀತಲೀಕರಣ ಘಟಕದಲ್ಲಿ ಇದೂ ಒಂದಾಗಿತ್ತು.
Published On - 1:20 pm, Thu, 16 December 21