ಗುಜರಾತ್ನ ಬರೂಚ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸ್ಫೋಟವುಂಟಾಗಿ ಆರು ಮಂದಿ ಕಾರ್ಮಿಕರು ಮೃತಪಟ್ಟ ದುರ್ಘಟನೆ ನಡೆದಿದೆ. ಅಹ್ಮದಾಬಾದ್ನಿಂದ 235 ಕಿಮೀ ದೂರದಲ್ಲಿರುವ ದಹೇಜ್ ಕೈಗಾರಿಕಾ ಪ್ರದೇಶದಲ್ಲಿ ಈ ಫ್ಯಾಕ್ಟರಿಯಿದ್ದು ಮುಂಜಾನೆ 3 ಗಂಟೆ ಹೊತ್ತಿಗೆ ಸ್ಫೋಟ ಸಂಭವಿಸಿದೆ. ಕಾರ್ಖಾನೆಯಲ್ಲಿ ದ್ರಾವಕವನ್ನು ಭಟ್ಟಿ ಇಳಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಆಗ ಒಮ್ಮೆಲೇ ರಿಯಾಕ್ಟರ್ ಸ್ಫೋಟಗೊಂಡಿದೆ. ಅದರ ಬಳಿ ಇದ್ದ ಆರೂ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಬರೂಚ್ ಎಸ್ಪಿ ಲೀನಾ ಪಾಟೀಲ್ ತಿಳಿಸಿದ್ದಾರೆ.
ರಾಸಾಯನಿಕ ರಿಯಾಕ್ಟರ್ನಿಂದಾಗಿಯೇ ಸ್ಫೋಟ ಉಂಟಾಗಿದೆ. ಮೃತ ಕಾರ್ಮಿಕರ ಮೃತದೇಹಗಳನ್ನು ಕಾರ್ಖಾನೆಯಿಂದ ಹೊರಗೆ ತೆಗೆದು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ. ಸ್ಫೋಟದಿಂದಾಗಿ ಬೆಂಕಿ ಉಂಟಾಗಿತ್ತು. ಅದನ್ನೂ ನಂದಿಸಲಾಗಿದೆ ಎಂದೂ ಲೀನಾ ಪಾಟೀಲ್ ಮಾಹಿತಿ ನೀಡಿದ್ದಾರೆ. ಈ ಆರು ಮಂದಿ ಮೃತಪಟ್ಟಿದ್ದು ಬಿಟ್ಟರೆ ಇನ್ಯಾರೂ ಗಾಯಗೊಂಡಿಲ್ಲ. ಪೊಲೀ್ ಕೇಸ್ ದಾಖಲಾಗಿದೆ ಎಂದೂ ಅವರು ಹೇಳಿದ್ದಾರೆ.
ದಹೇಜ್ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಕಾರ್ಖಾನೆಗಳಿದ್ದು, ಆಗಾಗ ಸ್ಫೋಟ, ಬೆಂಕಿ ದುರಂತ ನಡೆಯುತ್ತಿರುತ್ತದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ರಾಸಾಯನಿಕ ಉತ್ಪಾದನಾ ಘಟಕವೊಂದರಲ್ಲಿ ಸ್ಫೋಟವುಂಟಾಗಿತ್ತು. ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೊಬ್ಬ ಕೆಲಸಗಾರ ಮೃತಪಟ್ಟಿದ್ದರು.
ಇದನ್ನೂ ಓದಿ: ‘ಇಂಥವರ ಜತೆ, ಅಂಥವರ ಜತೆ ಕೆಲಸ ಮಾಡ್ಬೇಕು ಅಂತ ನಾನು ಕನಸು ಕಂಡಿಲ್ಲ’: ಯಶ್ ನೇರ ಮಾತು