ಕೊರೊನಾ ನಿಯಂತ್ರಿಸುವಲ್ಲಿ ದೇಶಕ್ಕೇ ಮಾದರಿಯಾದ ಧಾರಾವಿ ಸ್ಲಂ!

| Updated By: ಸಾಧು ಶ್ರೀನಾಥ್​

Updated on: Jun 23, 2020 | 1:37 PM

ಮುಂಬೈ: ಎಲ್ಲೆಡೆ ಕೊರೊನಾ ಹೆಮ್ಮಾರಿ ದಿನೇ ದಿನೇ ತನ್ನ ಪ್ರತಾಪವನ್ನ ಹೆಚ್ತಿಸಿಕೊಳ್ತಿದೆಯೇ ಹೊರತು ಕಡಿಮೆಯಾಗ್ತಿಲ್ಲ. ಆದ್ರೆ ಇದಕ್ಕೆ ತದ್ವಿರುದ್ಧವಾಗಿ, ಎಲ್ಲರಲ್ಲೂ ಆತಂಕ ಮೂಡಿಸಿದ್ದ ಮುಂಬೈನ ಧಾರಾವಿ ಸ್ಲಮ್‌ ಪದೇಶದಲ್ಲಿ ಕೊರೊನಾ ಪ್ರಮಾಣ ಕಡಿಮೆಯಾಗ್ತಿದೆ. ಇದು ಕೊಂಚ ಅಚ್ಚರಿಯಾದ್ರೂ ಸತ್ಯ. ಹೌದು, ಮುಂಬೈನ ಸ್ಲಮ್‌ ಪ್ರದೇಶ ಧಾರಾವಿ ಏಷ್ಯಾದಲ್ಲಿಯೇ ಅತಿದೊಡ್ಡ ಕೊಳೆಗೇರಿ. ಇಲ್ಲಿ ಒಂದು ಚದರ ಕಿ.ಮೀ. ಸುತ್ತಳತೆಯಲ್ಲಿ 2,27,136 ಜನ ವಾಸಿಸುತ್ತಾರೆ. ಇಷ್ಟೊಂದು ಜನದಟ್ಟಣೆಯ ಪ್ರದೇಶದಲ್ಲಿ ಶೇ.  80ರಷ್ಟು ಜನ ಸಮುದಾಯ ಟಾಯ್ಲೆಟ್‌ ಬಳಸುತ್ತಾರೆ. ಹೀಗಾಗಿ ಧಾರಾವಿಯಲ್ಲಿ […]

ಕೊರೊನಾ ನಿಯಂತ್ರಿಸುವಲ್ಲಿ ದೇಶಕ್ಕೇ ಮಾದರಿಯಾದ ಧಾರಾವಿ ಸ್ಲಂ!
ಅತ್ಯಧಿಕ ಕೊರೊನಾ ಪ್ರಕರಣಗಳನ್ನು ಕಂಡಿದ್ದ ಕೊಳೆಗೇರಿ ಧಾರಾವಿಯಲ್ಲಿ ಈಗ ಮೂರೇ ಮೂರು ಪ್ರಕರಣ ಪತ್ತೆ! ಏನಿದರ ಮಹಾತ್ಮೆ?
Follow us on

ಮುಂಬೈ: ಎಲ್ಲೆಡೆ ಕೊರೊನಾ ಹೆಮ್ಮಾರಿ ದಿನೇ ದಿನೇ ತನ್ನ ಪ್ರತಾಪವನ್ನ ಹೆಚ್ತಿಸಿಕೊಳ್ತಿದೆಯೇ ಹೊರತು ಕಡಿಮೆಯಾಗ್ತಿಲ್ಲ. ಆದ್ರೆ ಇದಕ್ಕೆ ತದ್ವಿರುದ್ಧವಾಗಿ, ಎಲ್ಲರಲ್ಲೂ ಆತಂಕ ಮೂಡಿಸಿದ್ದ ಮುಂಬೈನ ಧಾರಾವಿ ಸ್ಲಮ್‌ ಪದೇಶದಲ್ಲಿ ಕೊರೊನಾ ಪ್ರಮಾಣ ಕಡಿಮೆಯಾಗ್ತಿದೆ. ಇದು ಕೊಂಚ ಅಚ್ಚರಿಯಾದ್ರೂ ಸತ್ಯ.

ಹೌದು, ಮುಂಬೈನ ಸ್ಲಮ್‌ ಪ್ರದೇಶ ಧಾರಾವಿ ಏಷ್ಯಾದಲ್ಲಿಯೇ ಅತಿದೊಡ್ಡ ಕೊಳೆಗೇರಿ. ಇಲ್ಲಿ ಒಂದು ಚದರ ಕಿ.ಮೀ. ಸುತ್ತಳತೆಯಲ್ಲಿ 2,27,136 ಜನ ವಾಸಿಸುತ್ತಾರೆ. ಇಷ್ಟೊಂದು ಜನದಟ್ಟಣೆಯ ಪ್ರದೇಶದಲ್ಲಿ ಶೇ.  80ರಷ್ಟು ಜನ ಸಮುದಾಯ ಟಾಯ್ಲೆಟ್‌ ಬಳಸುತ್ತಾರೆ. ಹೀಗಾಗಿ ಧಾರಾವಿಯಲ್ಲಿ ಮೊದಲ ಕೊರೊನಾ ಕೇಸ್‌ ಪತ್ತೆಯಾದಾಗ ದೇಶಾದ್ಯಂತ ಜನ ಕಳವಳಗೊಂಡಿದ್ದರು.

ಅಚ್ಚರಿ ಮೂಡಿಸಿದ ಸಾಧನೆ
ಆದ್ರೆ ಎಲ್ಲರ ಆತಂಕ ದೂರವಾಗುವಂತೆ ದಿನೇ ದಿನೇ ಇಲ್ಲಿನ ಕೊರೊನಾದ ಪ್ರಮಾಣ ಕಡಿಮೆಯಾಗ್ತಿದೆ. ಏಪ್ರಿಲ್ ತಿಂಗಳಲ್ಲಿ ಧಾರಾವಿಯಲ್ಲಿ ಕೊರಾನಾ ಪ್ರಮಾಣ ಶೇ. 12ರಷ್ಟಿತ್ತು. ನಂತರ ಇದರ ಪ್ರಮಾಣ ಮೇ ತಿಂಗಳಲ್ಲಿ ಶೇ. 4.3 ರಷ್ಟಕ್ಕೆ ಇಳಿದಿತ್ತು. ಇದು ಜೂನ್‌ ತಿಂಗಳಲ್ಲಿ ಮತ್ತಷ್ಟು ಕಡಿಮೆಯಾಗಿದೆ. ಜೂನ್‌ ತಿಂಗಳ ಇತ್ತೀಚಿನ ವರದಿ ಪ್ರಕಾರ ಧಾರಾವಿ ಸ್ಲಂನಲ್ಲಿ ಕೊರೊನಾ ಬೆಳವಣಿಗೆ ದರ ಶೇ‌. 1 ಕ್ಕೆ ಕುಸಿತ‌‌ವಾಗಿದೆ.

ಇದನ್ನ ನೋಡಿದ್ರೆ ಮುಂಬೈ ಮಹಾನಗರ ಪಾಲಿಕೆ ಧಾರಾವಿಯಲ್ಲಿ ಕೊರೊನಾ ಹತ್ತಿಕ್ಕುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಬಿಎಂಸಿ ಹಾಗೂ ಮಹಾರಾಷ್ಟ್ರ ಸರ್ಕಾರದ ಈ ಸಾಧನೆಗೆ ಕೇಂದ್ರ ಆರೋಗ್ಯ ಇಲಾಖೆಯೂ ಕೂಡಾ ಈಗ ಮೆಚ್ಚುಗೆ ವ್ಯಕ್ತಪಡಿಸಿದೆ.