ಚಂಡಿಗಢ: ಹರಿಯಾಣದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಮನೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಸರ್ಕಾರಿ ಶಿಕ್ಷಕ, ಆತನ ಪತ್ನಿ ಹಾಗೂ ಮಗಳ ಶವ ಪತ್ತೆಯಾಗಿದೆ. ಶಿಕ್ಷಕ ಜಿತೇಂದ್ರ, ಪತ್ನಿ ಸುಶೀಲಾ, ಮಗಳು ಹಿಮಾನಿ ಮೃತರು.
ಸರ್ಕಾರಿ ಶಿಕ್ಷಕ, ಅವರ ಪತ್ನಿ ಮತ್ತು ಮಗಳ ಶವಗಳು ಹರಿಯಾಣದ ಭಿವಾನಿಯ ಅವರ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿರುವ ಸ್ಥಿತಿಯಲ್ಲೇ ಪತ್ತೆಯಾಗಿವೆ. ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಸಿಂಗ್ ತಿಳಿಸಿದ್ದಾರೆ.
Haryana | Bodies of a govt teacher Jitendra, his wife Sushila & their daughter Himani were found on bed in their house in suspicious condition. Prima facie cause of death seems to be suffocation due to fire that was lit in room. No signs of any wounds or crime:SP, Bhiwani (27.01) pic.twitter.com/sbR1TEyVrc
— ANI (@ANI) January 28, 2023
‘ಸರ್ಕಾರಿ ಶಿಕ್ಷಕ ಜಿತೇಂದ್ರ, ಅವರ ಪತ್ನಿ ಸುಶೀಲಾ ಹಾಗೂ ಅವರ ಪುತ್ರಿ ಹಿಮಾನಿ ಅವರ ಶವಗಳು ಅವರ ಮನೆಯ ಹಾಸಿಗೆಯ ಮೇಲೆ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಾಥಮಿಕ ಹಂತದಲ್ಲಿ ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಉಸಿರುಗಟ್ಟಿ ಸಾವು ಸಂಭವಿಸಿರಬೇಕು ಎಂದು ತೋರುತ್ತದೆ. ಯಾವುದೇ ಗಾಯಗಳು ಅಥವಾ ದೇಹದ ಮೇಲೆ ಯಾವುದೇ ರೀತಿಯ ಮಾರ್ಕ್ಗಳು ಪತ್ತೆಯಾಗಿಲ್ಲ” ಎಂದು ಭಿವಾನಿ ಎಸ್ಪಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:47 am, Sat, 28 January 23