Ashish Shelar: ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್ಗೆ ಜೀವ ಬೆದರಿಕೆ; ಬಾಂದ್ರಾದಲ್ಲಿರುವ ಕಚೇರಿಗೆ ಬಂತು ಬೆದರಿಕೆ ಪತ್ರ
ಮಾಹಿತಿ ಪ್ರಕಾರ, ಆಶಿಶ್ ಶೆಲಾರ್ ಅವರ ಕಚೇರಿಯಲ್ಲಿ ಬಂದಿರುವ ಪತ್ರದಲ್ಲಿ ಬಿಜೆಪಿ ಮತ್ತು ಶಿಂಧೆ ಬಣದ ವಿರುದ್ಧವೂ ಅವಾಚ್ಯ ಶಬ್ದಗಳನ್ನು ಬಳಸಲಾಗಿದೆ. ಅಧ್ಯಕ್ಷರ ಕಚೇರಿಯ ಲೆಟರ್ ಬಾಕ್ಸ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಈ ಪತ್ರ ಸಿಕ್ಕಿದೆ.
ಮುಂಬೈ: ಬಿಜೆಪಿ (BJP) ಮುಂಬೈ (Mumbai) ಘಟಕದ ಅಧ್ಯಕ್ಷ ಆಶಿಶ್ ಶೆಲಾರ್ (Ashish Shelar)ಅವರಿಗೆ ಕೊಲೆ ಬೆದರಿಕೆ ಬಂದಿದೆ. ಮಾಹಿತಿ ಪ್ರಕಾರ ಬಾಂದ್ರಾದಲ್ಲಿರುವ ಅವರ ಕಚೇರಿಗೆ ಬೆದರಿಕೆ ಪತ್ರ ಬಂದಿದೆ. ಆಶಿಶ್ ಶೆಲಾರ್ ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಲಾಗಿದೆ. ಮಾಹಿತಿ ಪ್ರಕಾರ, ಆಶಿಶ್ ಶೆಲಾರ್ ಅವರ ಕಚೇರಿಯಲ್ಲಿ ಬಂದಿರುವ ಪತ್ರದಲ್ಲಿ ಬಿಜೆಪಿ ಮತ್ತು ಶಿಂಧೆ ಬಣದ ವಿರುದ್ಧವೂ ಅವಾಚ್ಯ ಶಬ್ದಗಳನ್ನು ಬಳಸಲಾಗಿದೆ. ಬಿಜೆಪಿ ಅಧ್ಯಕ್ಷರ ಕಚೇರಿಯ ಲೆಟರ್ ಬಾಕ್ಸ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಈ ಪತ್ರ ಸಿಕ್ಕಿದೆ. ಈ ಪ್ರಕರಣದಲ್ಲಿ ಆಶಿಶ್ ಶೆಲಾರ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
Mumbai BJP pres Ashish Shelar received death threat in a letter sent to his office in Bandra by an unknown person. Indecent language was also used against BJP & Shiv Sena’s Shinde faction in the letter. Ashish Shelar lodged a complaint about it at Bandra PS:Ashish Shelar’s Office
— ANI (@ANI) January 27, 2023
ವರದಿಗಳ ಪ್ರಕಾರ, ಬಿಜೆಪಿ ನಾಯಕ ಆಶಿಶ್ ಶೆಲಾರ್ ಅವರಿಗೆ ಒಂದು ವರ್ಷದ ಹಿಂದೆಯೇ ಜೀವ ಬೆದರಿಕೆ ಹಾಕಲಾಗಿತ್ತು. ಕಳೆದ ಕೆಲವು ದಿನಗಳಿಂದ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಹೇಳಿದ್ದರು. ಆಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆಶಿಶ್ ಶೆಲಾರ್ ಅವರಿಗೂ ಮುನ್ನ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಬಂದಿತ್ತು. ಆರೋಪಿಗಳು ನಾಗ್ಪುರದ ಕಚೇರಿಯಲ್ಲಿರುವ ಸ್ಥಿರ ದೂರವಾಣಿಯಲ್ಲಿ ಕೊಲೆ ಬೆದರಿಕೆ ಹಾಕಿದ್ದರು. ನಿತಿನ್ ಗಡ್ಕರಿ ಅವರ ಕಚೇರಿಯ ಪರವಾಗಿ ನಾಗ್ಪುರ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳು ಗಡ್ಕರಿ ಅವರ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ: 84ನೇ ವಯಸ್ಸಲ್ಲಿ ಒಲಿದು ಬಂತು ಪದ್ಮಶ್ರೀ; ಮೋದಿ ಭರವಸೆ ನೀಡಿದ್ದರೂ ಬೈಗಾ ಕಲೆಯ ಈ ಅಮ್ಮನಿಗೆ ಸಿಕ್ಕಿಲ್ಲ ಮನೆ
ಪೊಲೀಸರ ಪ್ರಕಾರ, ಕರ್ನಾಟಕದ ಬೆಳಗಾವಿ ಜೈಲಿನಲ್ಲಿರುವ ಕ್ರಿಮಿನಲ್ ಮತ್ತು ದರೋಡೆಕೋರ ಜಯೇಶ್ ಕಾಂತಾ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿ 100 ಕೋಟಿ ರೂ ಕೇಳಿದ್ದ. ಇಷ್ಟೇ ಅಲ್ಲ, ಇತ್ತೀಚೆಗೆ ಜಯೇಶ್ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯ ಮರಣದಂಡನೆ ವಿಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:59 pm, Fri, 27 January 23