84ನೇ ವಯಸ್ಸಲ್ಲಿ ಒಲಿದು ಬಂತು ಪದ್ಮಶ್ರೀ; ಮೋದಿ ಭರವಸೆ ನೀಡಿದ್ದರೂ ಬೈಗಾ ಕಲೆಯ ಈ ಅಮ್ಮನಿಗೆ ಸಿಕ್ಕಿಲ್ಲ ಮನೆ

ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಲೋರ್ಹಾ ಗ್ರಾಮದ ಮಣ್ಣು ಮತ್ತು ಅಸ್ಬೆಸ್ಟೋಸ್ ಮನೆಯಲ್ಲಿ ವಾಸಿಸುವ ಬೈಗಾ ಆರ್ಟ್ ಮ್ಯೂರಲ್ ಪೇಂಟರ್, "ನನಗೆ ಪಕ್ಕಾ ಮನೆ ನೀಡುವಂತೆ ನಾನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಇಬ್ಬರಿಗೂ ಕೈ ಜೋಡಿಸಿ ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ

84ನೇ ವಯಸ್ಸಲ್ಲಿ ಒಲಿದು ಬಂತು ಪದ್ಮಶ್ರೀ; ಮೋದಿ ಭರವಸೆ ನೀಡಿದ್ದರೂ ಬೈಗಾ ಕಲೆಯ ಈ ಅಮ್ಮನಿಗೆ ಸಿಕ್ಕಿಲ್ಲ ಮನೆ
ಜೋಧಯ್ಯ ಬಾಯಿ ಬೈಗಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 27, 2023 | 6:42 PM

ಲೋರ್ಹಾ (ಮಧ್ಯಪ್ರದೇಶ): 84 ನೇ ವಯಸ್ಸಿನಲ್ಲಿ, ಕೂಲಿ-ಪೇಂಟರ್ ಜೋಧಯ್ಯ ಬಾಯಿ (Jodhaiya Bai) ಬೈಗಾ ‘ಅಮ್ಮ’ ಅವರಿಗೆ ಈ ವರ್ಷ ಪದ್ಮಶ್ರೀ (Padma Shri) ಪ್ರಶಸ್ತಿ ಒಲಿದು ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಭರವಸೆಯ ಹೊರತಾಗಿಯೂ  ಕಾಂಕ್ರೀಟ್ ಮನೆಗಾಗಿ ಅವರ ಕಾಯುವಿಕೆ ಮುಂದುವರೆದಿದೆ. ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಲೋರ್ಹಾ ಗ್ರಾಮದ ಮಣ್ಣು ಮತ್ತು ಅಸ್ಬೆಸ್ಟೋಸ್ ಮನೆಯಲ್ಲಿ ವಾಸಿಸುವ ಬೈಗಾ ಆರ್ಟ್ ಮ್ಯೂರಲ್ ಪೇಂಟರ್, “ನನಗೆ ಪಕ್ಕಾ ಮನೆ ನೀಡುವಂತೆ ನಾನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಇಬ್ಬರಿಗೂ ಕೈ ಜೋಡಿಸಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ. 10 ತಿಂಗಳ ಹಿಂದೆ ದೆಹಲಿಯಲ್ಲಿ ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಿದಾಗ ಮನೆಯ ಭರವಸೆ ನೀಡಲಾಗಿತ್ತು. ನಾನು ಮೋದಿಜಿಯನ್ನು ತಬ್ಬಿಕೊಂಡೆ ಮತ್ತು ಪಕ್ಕಾ ಮನೆ ಇಲ್ಲದಿರುವ ಬಗ್ಗೆ ನನ್ನ ನೋವನ್ನು ಹಂಚಿಕೊಂಡಿದ್ದೇನೆ.ಅವರು ನನಗೆ ಮನೆ ನೀಡುವುದಾಗಿ ಭರವಸೆ ನೀಡಿದರು” ಅಂತಾರೆ ಜೋಧಯ್ಯ ಬಾಯಿ.

“ನಾನು ಅಂದಿನಿಂದ ಉಮಾರಿಯಾ ಮತ್ತು ರಾಜ್ಯದ ರಾಜಧಾನಿ ಭೋಪಾಲ್‌ನಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ್ದೇನೆ. ಆದರೆ ಪ್ರಯೋಜನವಾಗಲಿಲ್ಲ ಎಂದಿದ್ದಾರೆ ಅವರು. ಈ ವರ್ಷ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀಗೆ ಆಯ್ಕೆಯಾದ 91 ವ್ಯಕ್ತಿಗಳ ಪೈಕಿ ಇವರೂ ಒಬ್ಬರಾಗಿದ್ದಾರೆ.

ಇದನ್ನೂ ಓದಿ:ಸದನದಲ್ಲಿ ChatGPT ಬಳಸಿ ಬರೆದ ಭಾಷಣ ಓದಿದ ಅಮೆರಿಕದ ಶಾಸಕ ಜೇಕ್ ಆಚಿನ್‌ಕ್ಲೋಸ್

ಇವರ ಇಬ್ಬರು ಪುತ್ರರು ಕಾರ್ಮಿಕರಾಗಿದ್ದಾರೆ. ಇವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಭಾಗವಾಗಿ ಮನೆಗಳನ್ನು ಹೊಂದಿದ್ದು, ಜೋಧಯ್ಯ ಬಾಯಿ ಅಲ್ಲೇ ಪಕ್ಕದಲ್ಲಿ ವಾಸಿಸುತ್ತಿದ್ದಾರೆ.

ಪ್ರಧಾನ ಮಂತ್ರಿ ಆವಾಜ್ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರು ಇಲ್ಲ, ಆದರೆ ಅವರ ಪುತ್ರರು ಪ್ರಯೋಜನ ಪಡೆದಿದ್ದಾರೆ. ಸಬ್ಸಿಡಿ ಸಹಿತ LPG ಮತ್ತು ಇತರ ಯೋಜನೆಗಳ ಅಡಿಯಲ್ಲಿ ಪಿಂಚಣಿಯ ಪ್ರಯೋಜನಗಳನ್ನು ಅವರು ಪಡೆದುಕೊಂಡಿದ್ದಾರೆ. ಆದರೆ ಪ್ರಧಾನ ಮಂತ್ರಿ ಆವಾಸ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೀತಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಪಂಚಾಯತ್ ಹಿರಿಯ ಅಧಿಕಾರಿ ಕೆಕೆ ರೈಕ್ವಾರ್ ಹೇಳಿದ್ದಾರೆ.

ಅವರು 2019 ರಲ್ಲಿ ವರ್ಣಚಿತ್ರಕಾರರಾಗುವ ಮೊದಲು ಅವರು ತಮ್ಮ ಜೀವನದ ದಶಕಗಳನ್ನು ಕಟ್ಟಡ ಕಾರ್ಮಿಕರಾಗಿ ಕಳೆದರು. ಇದರ ನಡುವೆ ದೇಸೀ ಮದ್ಯವನ್ನು ಸಹ ಮಾರಾಟ ಮಾಡುತ್ತಿದ್ದರು. ಅವರು 70 ವರ್ಷದವರಾಗಿದ್ದಾಗ ಅವರಿಗಿಂತ 20 ವರ್ಷ ಕಿರಿಯ ಆಶಿಶ್ ಸ್ವಾಮಿ ಅವರಿಂದ ಈ ಕಲೆ ಕಲಿತಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Fri, 27 January 23

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ