DNA Test: ಅತ್ಯಾಚಾರ ಪ್ರಕರಣದಲ್ಲಿ ಡಿಎನ್​ಎ ಪರೀಕ್ಷೆ ನಿರ್ಣಾಯಕ ಸಾಕ್ಷ್ಯವಲ್ಲ: ಬಾಂಬೆ ಹೈಕೋರ್ಟ್​

| Updated By: ನಯನಾ ರಾಜೀವ್

Updated on: Jul 31, 2022 | 10:41 AM

ಅತ್ಯಾಚಾರ ಪ್ರಕರಣದಲ್ಲಿ ಡಿಎನ್​ಎ ಪರೀಕ್ಷೆಯನ್ನು ನಿರ್ಣಾಯಕ ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ ದೃಢೀಕರಣಕ್ಕಾಗಿ ಮಾತ್ರ ಬಳಸಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

DNA Test: ಅತ್ಯಾಚಾರ ಪ್ರಕರಣದಲ್ಲಿ ಡಿಎನ್​ಎ ಪರೀಕ್ಷೆ ನಿರ್ಣಾಯಕ ಸಾಕ್ಷ್ಯವಲ್ಲ: ಬಾಂಬೆ ಹೈಕೋರ್ಟ್​
Bombay Highcourt
Follow us on

ಅತ್ಯಾಚಾರ ಪ್ರಕರಣದಲ್ಲಿ ಡಿಎನ್​ಎ ಪರೀಕ್ಷೆಯನ್ನು ನಿರ್ಣಾಯಕ ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ ದೃಢೀಕರಣಕ್ಕಾಗಿ ಮಾತ್ರ ಬಳಸಬಹುದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಜುಲೈ 26 ರಂದು ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು ಮತ್ತು ವಿವರವಾದ ಆದೇಶದ ಪ್ರತಿಯು ಶುಕ್ರವಾರ ಲಭ್ಯವಾಯಿತು. ಈ ಪ್ರಕರಣದ ಆರೋಪಿಯನ್ನು ಸೆಪ್ಟೆಂಬರ್ 2020 ರಲ್ಲಿ ಬಂಧಿಸಲಾಗಿತ್ತು.

ಆರೋಪಿಯು ತನ್ನ ಊರಿನಲ್ಲಿಯೇ ವಾಸಿಸುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಂಧನಕ್ಕೊಳಲಾಗಿದ್ದ. ಆತನ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ ನ್ಯಾ. ಭಾರತಿ ಡಾಂಗ್ರೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರೋಪಿಗಳು ಬಾಲಕಿಯ ಮೇಲೆ 10 ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆಯ ಡಿಎನ್‌ಎ ಪರೀಕ್ಷೆ ನೆಗೆಟಿವ್ ಬಂದಿದೆ.
ಆರೋಪದ ಪ್ರಕಾರ, ಹುಡುಗಿ ಆರೋಪಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಆಗ ಆಕೆಯ ಮೇಲೆ ಬಲಾತ್ಕಾರವೆಸಗಿದ್ದಾನೆ. ಡಿಎನ್‌ಎ ಪರೀಕ್ಷೆಯು ನೆಗೆಟಿವ್ ಆಗಿದೆ ಆದರೆ ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಗಳನ್ನು ನೀಡಿರುವ ಸಂತ್ರಸ್ತೆಯ ಹೇಳಿಕೆಯನ್ನು ಸುಳ್ಳು ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅತ್ಯಾಚಾರ ಪ್ರಕರಣದಲ್ಲಿ ಡಿಎನ್‌ಎ ಪರೀಕ್ಷೆಯನ್ನು ನಿರ್ಣಾಯಕ ಸಾಕ್ಷ್ಯ ಎಂದು ಕರೆಯಲಾಗುವುದಿಲ್ಲ ಮತ್ತು ಅದನ್ನು ದೃಢೀಕರಿಸುವ ಸಾಕ್ಷ್ಯವಾಗಿ ಮಾತ್ರ ಬಳಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

“ಡಿಎನ್ಎ ವಿಶ್ಲೇಷಣೆಯ ಪುರಾವೆಗಳನ್ನು ದೃಢೀಕರಣಕ್ಕಾಗಿ ಬಳಸಬಹುದು ಎಂಬುದರಲ್ಲಿ ಯಾವುದೇ ವಿವಾದವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿಯ ಹೇಳಿಕೆಯನ್ನು ಸೆಕ್ಷನ್ 164 ರ ಅಡಿಯಲ್ಲಿ ದಾಖಲಿಸಲಾಗಿದೆ. ಸಂತ್ರಸ್ತೆ ತನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ಮಾಹಿತಿ ನೀಡಿದ್ದಾಳೆ, ಅದರ ಪ್ರಕಾರವೇ ದೂರು ದಾಖಲಾಗಿದೆ.

ಆರೋಪಿಗಳು ತನಗೆ ಹಣದ ಆಮಿಷವೊಡ್ಡಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು, ಹಾಗೂ ಘಟನೆ ಬಗ್ಗೆ ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದರು.

ಬಾಲಕಿಯು ಗರ್ಭಿಣಿಯಾಗಿದ್ದಾಳೆ, ಆದರೆ ಮಗುವಿನ ತಂದೆ ಆತನೇ ಎಂದು ಸಾಬೀತಾಗಿಲ್ಲ, ಹಾಗೆಂದ ಮಾತ್ರಕ್ಕೆ ಅರ್ಜಿದಾರರು ನೀಡಿರುವ ದೂರು ಸುಳ್ಳು ಎಂದೂ ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

Published On - 10:40 am, Sun, 31 July 22