ಕಾರಿನಲ್ಲಿ ಹಣದ ಜತೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ 3 ಕಾಂಗ್ರೆಸ್ ಶಾಸಕರ ಅಮಾನತು
ಹಣದೊಂದಿಗೆ ಕಾರಿನಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ 3 ಜಾರ್ಖಂಡ್ ಶಾಸಕರನ್ನು ಕಾಂಗ್ರೆಸ್ ಅಮಾನತು ಮಾಡಿದೆ.
ಹಣದೊಂದಿಗೆ ಕಾರಿನಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ 3 ಜಾರ್ಖಂಡ್ ಶಾಸಕರನ್ನು ಕಾಂಗ್ರೆಸ್ ಅಮಾನತು ಮಾಡಿದೆ. ಶನಿವಾರ ಪಶ್ಚಿಮ ಬಂಗಾಳದಲ್ಲಿ ಜಾರ್ಖಂಡ್ನ 3 ಸಚಿವರು ನಗದಿನೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಮೂವರು ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷ ಅಮಾನತುಗೊಳಿಸಿದೆ.
ಮುಂದಿನ ದಿನಗಳಲ್ಲಿ ಯಾವುದೇ ಸಾರ್ವಜನಿಕ ಪ್ರತಿನಿಧಿಯಾಗಲಿ, ಪಕ್ಷದ ಪದಾಧಿಕಾರಿಯಾಗಲಿ, ಕಾರ್ಯಕರ್ತರಾಗಲಿ ಎಲ್ಲರ ಮಾಹಿತಿಯೂ ನಮ್ಮ ಬಳಿ ಇದೆ, ಯಾರೇ ಈ ಸಂಬಂಧ ಅಥವಾ ಶಾಮೀಲಾಗಿದ್ದರೂ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಜನರಲ್ ಅವಿನಾಶ್ ಪಾಂಡೆ ತಿಳಿಸಿದ್ದಾರೆ.
ಶಾಸಕರಾದ ಜಮ್ತಾರಾದಿಂದ ಇರ್ಫಾನ್ ಅನ್ಸಾರಿ, ಖಿಜ್ರಿಯಿಂದ ರಾಜೇಶ್ ಕಚ್ಚಪ್ ಮತ್ತು ಕೊಲೆಬೀರಾದಿಂದ ನಮನ್ ಬಿಕ್ಸಲ್ ಕೊಂಗರಿ ಅವರನ್ನು ಹೌರಾ ಗ್ರಾಮಾಂತರ ಪೊಲೀಸರು ಹಣದ ಮೂಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಕಾರಿನಲ್ಲಿದ್ದ ನಗದು ಅಪಾರ ಪ್ರಮಾಣದಲ್ಲಿದ್ದ ಕಾರಣ ಹಣ ಎಣಿಸುವ ಯಂತ್ರಗಳ ನೆರವಿನಿಂದ ಎಣಿಸಲಾಯಿತು. ಈ ಹಣ ಎಲ್ಲಿಂದ ಬಂತು ಮತ್ತು ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಶಾಸಕರನ್ನು ಪ್ರಶ್ನಿಸಲಾಯಿತು. ಶಾಸಕರೊಂದಿಗೆ ಇಬ್ಬರು ಇತರ ವ್ಯಕ್ತಿಗಳೂ ಕಾರಿನಲ್ಲಿದ್ದರು. ಈ ಕಾರಿನ ಮೇಲೆ ‘MLA Jamtara Jharkhand’ (ಶಾಸಕರು, ಜಮ್ತಾರಾ, ಜಾರ್ಖಂಡ್) ಎನ್ನುವ ಫಲಕವಿತ್ತು. ಕಾಂಗ್ರೆಸ್ನ ಚುನಾವಣಾ ಚಿಹ್ನೆಯೂ ಎದ್ದು ಕಾಣಿಸುವಂತಿತ್ತು ಎಂದು ಪೊಲೀಸರು ತಿಳಿಸಿದರು.
ಜಮ್ತಾರಾ ಶಾಸಕ ಅನ್ಸಾರಿ, ರಾಂಚಿ ಜಿಲ್ಲೆ ಖಿರ್ಜಿ ಕ್ಷೇತ್ರದ ಶಾಸಕ ಕಚ್ಚಪ್ ಮತ್ತು ಸಿಮ್ಡೆಗಾ ಜಿಲ್ಲೆ ಕೊಲೆಬಿರಾ ಶಾಸಕ ಕೊನ್ಗಾರಿ ಪ್ರಸ್ತುತ ಪೊಲೀಸರ ವಶದಲ್ಲಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಾರ್ಖಂಡ್ನ ಕಾಂಗ್ರೆಸ್ ವಕ್ತಾರ ರಾಜೀವ್ ರಂಜನ್ ಪ್ರಸಾದ್, ಪ್ರಕರಣದ ಬಗ್ಗೆ ಪಕ್ಷವು ಮಾಹಿತಿ ಕಲೆಹಾಕುತ್ತಿದೆ ಎಂದು ಹೇಳಿದರು.
ಜಾರ್ಖಂಡ್ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ವಕ್ತಾ ಸುಪ್ರಿಯೊ ಭಟ್ಟಾಚಾರ್ಯ ಮಾತನಾಡಿ, ‘ಈ ಪ್ರಕರಣದ ಬಗ್ಗೆ ಪಕ್ಷದ ಪ್ರತಿಕ್ರಿಯೆಯನ್ನು ನಾಳೆ ನೀಡಲಾಗುವುದು’ ಎಂದರು. ‘ಹಣದ ಮೂಲದ ಬಗ್ಗೆ ಶಾಸಕರು ವಿವರ ನೀಡಬೇಕು’ ಎಂದು ಬಿಜೆಪಿ ವಕ್ತಾರ ದೀಪಕ್ ಪ್ರಕಾಶ್ ಆಗ್ರಹಿಸಿದ್ದಾರೆ.
Published On - 12:47 pm, Sun, 31 July 22