ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ತನ್ನೆಲ್ಲಾ ತನುಮನ ಹಾಗೂ ಧನವನ್ನ ವೆಚ್ಚ ಮಾಡುತ್ತಿರುವ ಪಾಕಿಸ್ತಾನದ ಮತ್ತೊಂದು ಕುತಂಂತ್ರ ಈಗ ಬಯಲಾಗಿದೆ. ಭಾರತ ಮತ್ತು ಪಾಕಿಸ್ತಾನ ಗಡಿಯ ಸಾಂಬಾ ಪ್ರದೇಶದಲ್ಲಿ ಪಾಕಿಸ್ತಾನ ರಹಸ್ಯವಾಗಿ ಕೊರೆದಿರುವ ಸುರಂಗ ಮಾರ್ಗ ಪತ್ತೆಯಾಗಿದೆ.
ಪಾಕಿಸ್ತಾನದ ಸಿಯಾಲ್‌ಕೋಟ್‌ನಿಂದ ಆರಂಭವಾಗಿ ಸಾಂಬಾದ ವರೆಗೂ ಈ ಸುರಂಗ ಮಾರ್ಗವನ್ನು ಕೊರೆಯಲಾಗಿದೆ. ಈ ಸುರಂಗ ಸುರಕ್ಷಿತವಾಗಿರಲಿ ಎಂದು ಇದಕ್ಕೆ ಸಿಮೆಂಟ್‌ನ್ನು ಬಳಸಲಾಗಿದೆ. ಹೀಗೆ ಇದಕ್ಕೆ ಬಳಸಿದ ಸಿಮೆಂಟ್‌ನ ಬ್ಯಾಗ್ ಅನ್ನು ಸಿಯಾಲ್‌ಕೋಟ್‌ನಿಂದ ತರಲಾಗಿದೆ. ಈ ಸಂಬಂಧ ಬಳಸಿದ ಸಿಮೆಂಟ್ ಚೀಲ ಕೂಡಾ ಸ್ಥಳದಲ್ಲಿ ಪತ್ತೆಯಾಗಿದೆ.
ಪಾಕಿಸ್ತಾನ ಈ ಸುರಂಗದ ಮೂಲಕ ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳಿಸುತ್ತಿತ್ತು ಎಂದು ತಿಳಿದು ಬಂದಿದೆ. ಆದ್ರೆ ಸಿಕ್ಕ ಖಚಿತ ಗುಪ್ತಚರ ಮಾಹಿತಿಯನ್ನಾಧರಿಸಿ ತಪಾಸಣೆ ನಡೆಸಿದಾಗ ಈ ರಹಸ್ಯ ಸುರಂಗ ಮಾರ್ಗ ಪತ್ತೆಯಾಗಿದೆ ಎಂದು ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನ ಐಜಿ ಎನ್ ಎಸ್ ಜಮವಾಲ್ ತಿಳಿಸಿದ್ದಾರೆ.
ಈ ಸಂಬಂಧ ಪಾಕಿಸ್ತಾನದಿಂದ ವಿವರಣೆ ಕೇಳಿ ಪತ್ರ ಬರೆಯಲು ಈಗ ಬಿಎಸ್‌ಎಫ್ ತಯಾರಿ ನಡೆಸುತ್ತಿದೆ. ಹಾಗೇನೆ ಸುರಂಗ ಸಿಕ್ಕ ಸ್ಥಳದಲ್ಲಿ ಭದ್ರತಾ ತುಕಡಿಯನ್ನು ನಿಯೋಜಿಸಲಾಗಿದೆ.
Jammu & Kashmir: Security forces deployed at the site where a tunnel has been found in Samba by Border Security Force (BSF).
The tunnel starts in Pakistan along the border and ends in Samba, according to Jammu BSF IG NS Jamwal. pic.twitter.com/4NAxvYfsjB
— ANI (@ANI) August 29, 2020