PUBG ಆಡಬೇಡ ಅಂತಾ ತಾಯಿ ಬೈದಿದ್ದಕ್ಕೆ ಮನನೊಂದ ಬಾಲಕ ನೇಣಿಗೆ ಶರಣು

|

Updated on: Aug 16, 2020 | 5:36 PM

ಹೈದರಾಬಾದ್: PUBG ಆಡಬೇಡ ಎಂದು ತಾಯಿ ಬೈದಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​​ನ​​ ತಿರುಮಲಗಿರಿ ನಗರದಲ್ಲಿ ನಡೆದಿದೆ. ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ 9ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಕೊರೊನಾ ಲಾಕ್​ಡೌನ್​ನಿಂದ ಶಾಲೆಗಳು ಬಂದಾಗಿದ್ದ ಹಿನ್ನೆಲೆಯಲ್ಲಿ ಮೃತ ಬಾಲಕನ ಶಾಲೆಯವರು ಆನ್​ಲೈನ್​ ಕ್ಲಾಸ್​ಗಳನ್ನ ಪ್ರಾರಂಭಿಸಿದ್ದರು. ಹೀಗಾಗಿ, ಆತನ ತಾಯಿ ಆನ್​ಲೈನ್​ ಕ್ಲಾಸ್​ಗಾಗಿ ಅವನಿಗೆ ಮೊಬೈಲ್​​ ಕೊಡಿಸಿದ್ದರು. ಆದರೆ, ಹುಡುಗ ಮೊಬೈಲ್​ನಲ್ಲಿ ದಿನವಿಡಿ PUBG ಗೇಮ್​ ಆಡುತ್ತಿದ್ದನಂತೆ. ಇದನ್ನು ಕಂಡು ಸಿಟ್ಟಾದ ತಾಯಿ‌ ಆತನನ್ನ […]

PUBG ಆಡಬೇಡ ಅಂತಾ ತಾಯಿ ಬೈದಿದ್ದಕ್ಕೆ ಮನನೊಂದ ಬಾಲಕ ನೇಣಿಗೆ ಶರಣು
Follow us on

ಹೈದರಾಬಾದ್: PUBG ಆಡಬೇಡ ಎಂದು ತಾಯಿ ಬೈದಿದ್ದಕ್ಕೆ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​​ನ​​ ತಿರುಮಲಗಿರಿ ನಗರದಲ್ಲಿ ನಡೆದಿದೆ. ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ 9ನೇ ತರಗತಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಕೊರೊನಾ ಲಾಕ್​ಡೌನ್​ನಿಂದ ಶಾಲೆಗಳು ಬಂದಾಗಿದ್ದ ಹಿನ್ನೆಲೆಯಲ್ಲಿ ಮೃತ ಬಾಲಕನ ಶಾಲೆಯವರು ಆನ್​ಲೈನ್​ ಕ್ಲಾಸ್​ಗಳನ್ನ ಪ್ರಾರಂಭಿಸಿದ್ದರು. ಹೀಗಾಗಿ, ಆತನ ತಾಯಿ ಆನ್​ಲೈನ್​ ಕ್ಲಾಸ್​ಗಾಗಿ ಅವನಿಗೆ ಮೊಬೈಲ್​​ ಕೊಡಿಸಿದ್ದರು.

ಆದರೆ, ಹುಡುಗ ಮೊಬೈಲ್​ನಲ್ಲಿ ದಿನವಿಡಿ PUBG ಗೇಮ್​ ಆಡುತ್ತಿದ್ದನಂತೆ. ಇದನ್ನು ಕಂಡು ಸಿಟ್ಟಾದ ತಾಯಿ‌ ಆತನನ್ನ ಬೈದಿದ್ದಾರೆ. ಇದರಿಂದ ಮನನೊಂದ ಬಾಲಕ‌ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಾಲಕನ ತಂದೆ ಸೇನೆಯಲ್ಲಿ ಸುಬೇದಾರ ಆಗಿ ಕೆಲಸ ಮಾಡುತ್ತಿದ್ದು ಸದ್ಯ ಉತ್ತರಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.