ಯೂಟ್ಯೂಬ್ ನೋಡಿ ಆಪರೇಷನ್ ಮಾಡಿದ ನಕಲಿ ವೈದ್ಯ, ಬಾಲಕ ಸಾವು

|

Updated on: Sep 08, 2024 | 3:21 PM

ಯೂಟ್ಯೂಬ್​ ನೋಡಿ ಆಪರೇಷನ್ ಮಾಡಲು ಹೋಗಿ ನಕಲಿ ವೈದ್ಯನೊಬ್ಬ ಬಾಲಕನ ಜೀವವನ್ನೇ ತೆಗೆದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಾಲಕನಿಗೆ ಪಿತ್ತಕೋಶದಲ್ಲಿ ಕಲ್ಲಾಗಿ ತುಂಬಾ ದಿನಗಳಿಂದ ನೋವು ಅನುಭವಿಸುತ್ತಿದ್ದ. ತಾನು ಶಸ್ತ್ರಚಿಕಿತ್ಸೆ ನಡೆಸುವುದಾಗಿ ನಕಲಿ ವೈದ್ಯನೊಬ್ಬ ಭರವಸೆ ಕೊಟ್ಟು, ಯೂಟ್ಯೂಬ್​ ನೋಡಿ ಆಪರೇಷನ್​ ಮಾಡಲು ಹೋಗಿ ಬಾಲಕನ ಪ್ರಾಣವನ್ನೇ ತೆಗೆದಿದ್ದಾನೆ.

ಯೂಟ್ಯೂಬ್ ನೋಡಿ ಆಪರೇಷನ್ ಮಾಡಿದ ನಕಲಿ ವೈದ್ಯ, ಬಾಲಕ ಸಾವು
ಶಸ್ತ್ರಚಿಕಿತ್ಸೆ
Image Credit source: India Today
Follow us on

ನಕಲಿ ವೈದ್ಯನೊಬ್ಬ ಯೂಟ್ಯೂಬ್​ ನೋಡಿ ಆಪರೇಷನ್ ಮಾಡಿದ್ದಕ್ಕೆ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಾಲಕನಿಗೆ ಪಿತ್ತಕೋಶದಲ್ಲಿ ಕಲ್ಲಾಗಿ ತುಂಬಾ ದಿನಗಳಿಂದ ನೋವು ಅನುಭವಿಸುತ್ತಿದ್ದ. ತಾನು ಶಸ್ತ್ರಚಿಕಿತ್ಸೆ ನಡೆಸುವುದಾಗಿ ನಕಲಿ ವೈದ್ಯನೊಬ್ಬ ಭರವಸೆ ಕೊಟ್ಟು, ಯೂಟ್ಯೂಬ್​ ನೋಡಿ ಆಪರೇಷನ್​ ಮಾಡಲು ಹೋಗಿ ಬಾಲಕನ ಜೀವವನ್ನೇ ತೆಗೆದಿದ್ದಾನೆ.

ಶುಕ್ರವಾರ ರಾತ್ರಿ ಅಜಿತ್ ಕುಮಾರ್ ಪುರಿ ನಡೆಸುತ್ತಿದ್ದ ಕ್ಲಿನಿಕ್‌ಗೆ ಅವರ ಕುಟುಂಬದವರು ಸೇರಿಸಿದ್ದಾರೆ, ಬಾಲಕನಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕುಟುಂಬ ಸದಸ್ಯರು ಹೇಳುವ ಪ್ರಕಾರ, ತಮ್ಮ ಅರಿವಿಗೆ ಬಾರದೆ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರು. ತಮ್ಮ ಮೊಬೈಲ್ ಫೋನ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ನೋಡುವ ಮೂಲಕ ಅವರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಚಿಕಿತ್ಸೆ ವೇಳೆ ಬಾಲಕನ ಸ್ಥಿತಿ ಹದಗೆಟ್ಟಿತ್ತು. ಪೋಷಕರು ಗಲಾಟೆ ಮಾಡಿದಾಗ ತಾನು ವೈದ್ಯನೇ ಅಲ್ಲ ಎಂಬುದನ್ನು ಬಾಯ್ಬಿಟ್ಟಿದ್ದಾನೆ. ನಕಲಿ ವೈದ್ಯ ಅಂತಿಮವಾಗಿ ಬಾಲಕನನ್ನು ಪಾಟ್ನಾದ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದ, ಆದರೆ ಅವರು ಮಾರ್ಗಮಧ್ಯೆ ಬಾಲಕ ಸಾವನ್ನಪ್ಪಿದ್ದಾರೆ. ನಂತರ ನಕಲಿ ವೈದ್ಯ ಬಾಲಕನ ಶವವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಮತ್ತಷ್ಟು ಓದಿ: ಬೆಳಗಾವಿ: ನಕಲಿ ವೈದ್ಯರ ಹಾವಳಿ, ಪಿಯುಸಿ ಕಲಿತು ಆಸ್ಪತ್ರೆ ನಡೆಸುತ್ತಿದ್ದ ರಿಯಾಜ್​ ಮುಲ್ಲಾ ಜೈಲು, 3 ಆಸ್ಪತ್ರೆ ಸೀಜ್​

ನಕಲಿ ವೈದ್ಯನ ನಿರ್ಲಕ್ಷ್ಯ ಮತ್ತು ದುಷ್ಕೃತ್ಯ ಕುರಿತು ಕುಟುಂಬ ಸ್ಥಳೀಯ ಪೊಲೀಸರಿಗೆ ದೂರು ನೀಡಿದೆ.
ನಕಲಿ ವೈದ್ಯ ಹಾಗೂ ಆತನ ಕ್ಲಿನಿಕ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೊಲೀಸರು ಪುರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಮತ್ತು ಕ್ಲಿನಿಕ್‌ನ ನೌಕರರನ್ನು ಬಂಧಿಸಲು ಮುಂದಾಗಿದ್ದಾರೆ. ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ