Breaking News: ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಉಗ್ರರ ದಾಳಿ, ಓರ್ವ ಕಾಶ್ಮೀರಿ ಪಂಡಿತನಿಗೆ ಗಂಭೀರ ಗಾಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 15, 2022 | 6:04 PM

ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಮತ್ತೊಂದು ಭಯೋತ್ಪಾದಕ ದಾಳಿಯಲ್ಲಿ ಶನಿವಾರ ಶೋಪಿಯಾನ್‌ನಲ್ಲಿ ಕಾಶ್ಮೀರಿ ಪಂಡಿತನೊಬ್ಬನ ಮೇಲೆ ಗುಂಡು ಹಾರಿಸಲಾಯಿತು.

Breaking News: ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಉಗ್ರರ ದಾಳಿ, ಓರ್ವ ಕಾಶ್ಮೀರಿ ಪಂಡಿತನಿಗೆ ಗಂಭೀರ ಗಾಯ
Follow us on

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಮತ್ತೊಂದು ಭಯೋತ್ಪಾದಕ ದಾಳಿಯಲ್ಲಿ ಶನಿವಾರ ಶೋಪಿಯಾನ್‌ನಲ್ಲಿ ಕಾಶ್ಮೀರಿ ಪಂಡಿತನಿಗೆ ಗಂಭೀರ ಗಾಯಗಳಲಾಗಿದೆ ಎಂದು ಹೇಳಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಮತ್ತೆ ದಾಳಿ ನಡೆದಿದೆ. ಶೋಪಿಯಾನ್​​ನಲ್ಲಿ ಹಿಂದೂಗಳ ಮೇಲೆ ಉಗ್ರರು ಫೈರಿಂಗ್ ನಡೆಸಿದ್ದಾರೆ. ಉಗ್ರರು ನಡೆಸಿದ ಫೈರಿಂಗ್​​ನಲ್ಲಿ ಓರ್ವನಿಗೆ ಗಂಭೀರ ಗಾಯಗೊಂಡಿದ್ದು, ಗಾಯಾಳು ಪಂಡಿತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದಲ್ಲಿ ನಿವಾಸದ ಬಳಿ ಪುರನ್ ಕ್ರಿಶನ್ ಭಟ್ ಮೇಲೆ ದಾಳಿ ನಡೆಸಲಾಯಿತು. ಅವರು ಕ್ರಿಶನ್ ಭಟ್ ಅವರನ್ನು ಶೋಪಿಯಾನ್ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇದೀಗ ಕಾಶ್ಮೀರದ ಪೊಲೀಸರು ಆ ಪ್ರದೇಶದಲ್ಲಿ ಸುತ್ತುವರಿದಿದ್ದು ಮತ್ತು ಅಪರಾಧಿಗಳನ್ನು ಹಿಡಿಯಲು ಕಾರ್ಯಚಾರಣೆ ನಡೆಸಲಾಗಿದೆ. ಕ್ರಿಶನ್ ಭಟ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬಳು 7ನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ಮತ್ತೊಬ್ಬ 5ನೇ ತರಗತಿಯಲ್ಲಿರುವ ಹುಡುಗ. ಯಾರು ಕೂಡ ಅಲ್ಲಿಂದ ಹೊರಗೆ ಬರಲಿಲ್ಲ ಆದರೆ ನಮ್ಮ ತಂದೆ ನಮ್ಮ ಮುಂದೆ ತಂದೆಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಶೋಪಿಯಾನ್ ಜಿಲ್ಲೆಯ ಸೇಬಿನ ತೋಟದಲ್ಲಿ ಕಾಶ್ಮೀರಿ ಪಂಡಿತನೊಬ್ಬರು ಭಯೋತ್ಪಾದಕರ ಗುಂಡಿಗೆ ಬಲಿಯಾದ ಒಂದೆರಡು ತಿಂಗಳ ನಂತರ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಆತನ ಸಹೋದರನೂ ಗಾಯಗೊಂಡಿದ್ದಾನೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಆಗಸ್ಟ್ 16 ರಂದು ನಡೆದ ದಾಳಿಯಲ್ಲಿ ಅವರ ಸಹೋದರ ಪಿಂಟು ಕುಮಾರ್ ಗಾಯಗೊಂಡಿದ್ದರು.

ಮೇ ತಿಂಗಳಲ್ಲಿ, ಭಯೋತ್ಪಾದಕರು ಬುದ್ಗಾಮ್‌ನಲ್ಲಿನ ತಹಸೀಲ್ದಾರ್ ಕಚೇರಿಗೆ ನುಗ್ಗಿ 36 ವರ್ಷದ ರಾಹುಲ್ ಭಟ್ ಎಂಬ ಕಾಶ್ಮೀರಿ ಪಂಡಿತರನ್ನು ಗುಂಡಿಕ್ಕಿ ಕೊಂದಿದ್ದಿರು. ಅವರು ಕಾಶ್ಮೀರಿ ಪಂಡಿತರಾಗಿದ್ದರು, ಈ ಹತ್ಯೆ ಕಾಶ್ಮೀರಿ ಪಂಡಿತರ ಪ್ರತಿಭಟನೆಗೆ ಕಾರಣವಾಗಿತ್ತು. ಈ ಮೂಲಕ ಕೇಂದ್ರದ ವಿರುದ್ಧ ಘೋಷಣೆ ಹಾಕಿದ್ದಾರೆ. ನಮ್ಮನ್ನು ಕೊಲ್ಲಲು ಕಣಿವೆಗೆ ಮರಳಿ ಕರೆತಂದರೆ ಎಂದು ಪ್ರಶ್ನಿಸಿದರು.

 

Published On - 1:29 pm, Sat, 15 October 22