Pravasi Gujarati Parv 2022: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾರತ ದಿಟ್ಟತನದ ನಿರ್ಧಾರ ತಳೆದಿದೆ; ಟಿವಿ9 ಸಿಇಒ ಬರುಣ್ ದಾಸ್

Barun Das Speech in Gujarati Utsav 2022: ರಷ್ಯಾ- ಉಕ್ರೇನ್ ನಡುವಿನ ಸಂಘರ್ಷದಲ್ಲಿ ಜಗತ್ತು ಯಾವುದಾದರೂ ಒಂದು ದೇಶದ ಪರವಾಗಿ ನಿಲ್ಲುವಂತೆ ಒತ್ತಾಯಿಸಿದಾಗ ಭಾರತವು ಧೈರ್ಯದಿಂದ ತನ್ನ ತಟಸ್ಥ ನೀತಿಯನ್ನು ತಳೆದಿದೆ ಎಂದು ಟಿವಿ9 ಸಿಇಓ ಬರುಣ್ ದಾಸ್ ಹೇಳಿದ್ದಾರೆ.

Pravasi Gujarati Parv 2022: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾರತ ದಿಟ್ಟತನದ ನಿರ್ಧಾರ ತಳೆದಿದೆ; ಟಿವಿ9 ಸಿಇಒ ಬರುಣ್ ದಾಸ್
ಟಿವಿ9 ಸಿಇಒ ಬರುಣ್ ದಾಸ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 15, 2022 | 12:55 PM

ಅಹಮದಾಬಾದ್: 75ನೇ ವರ್ಷದ (ಅಮೃತ ಮಹೋತ್ಸವದ) ಸಂಭ್ರಮದಲ್ಲಿರುವ ಭಾರತ ಇಷ್ಟು ವರ್ಷಗಳ ಬಳಿಕ ಇದೀಗ ತನ್ನ ಜಾಗತಿಕ ಧ್ವನಿಯನ್ನು ಮರುಶೋಧಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ಭಾರತದ ಅಭಿವೃದ್ಧಿಗಾಗಿ ಮಾಡಿರುವ ಕೆಲಸಗಳೇ ಇದಕ್ಕೆ ಮುಖ್ಯ ಕಾರಣ ಎಂದು ಟಿವಿ9 ಸಿಇಒ ಬರುಣ್ ದಾಸ್ (TV9 CEO Barun Das) ಗುಜರಾತಿನ ಅತಿದೊಡ್ಡ ಸಮಾವೇಶವಾದ ಪ್ರವಾಸಿ ಗುಜರಾತಿ ಪರ್ವದಲ್ಲಿ (Pravasi Gujarati Parv) ಶ್ಲಾಘಿಸಿದ್ದಾರೆ.

ಇದೇ ವೇಳೆ ರಷ್ಯಾ-ಉಕ್ರೇನ್ ಯುದ್ಧದ ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಟಿವಿ9 ಸಿಇಓ ಬರುಣ್ ದಾಸ್, “ರಷ್ಯಾ- ಉಕ್ರೇನ್ ನಡುವಿನ ಸಂಘರ್ಷದಲ್ಲಿ ಜಗತ್ತು ಯಾವುದಾದರೂ ಒಂದು ದೇಶದ ಪರವಾಗಿ ನಿಲ್ಲುವಂತೆ ಒತ್ತಾಯಿಸಿದಾಗ ಭಾರತವು ಧೈರ್ಯದಿಂದ ತನ್ನ ತಟಸ್ಥ ನೀತಿಯನ್ನು ತಳೆಯಿತು” ಎಂದಿದ್ದಾರೆ.

ಇದನ್ನೂ ಓದಿ: Pravasi Gujarati Parv 2022: 2024ರೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ; ಪ್ರವಾಸಿ ಗುಜರಾತಿ ಪರ್ವದಲ್ಲಿ ಅಮಿತ್ ಶಾ ಭರವಸೆ

ಅಹಮದಾಬಾದ್​ನಲ್ಲಿ ಇಂದಿನಿಂದ 3 ದಿನಗಳ ಕಾಲ ನಡೆಯುವ ಪ್ರವಾಸಿ ಗುಜರಾತಿ ಪರ್ವ 2022ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ಅ. 17ರವರೆಗೆ ‘ಪ್ರವಾಸಿ ಗುಜರಾತಿ ಪರ್ವ 2022’ ಎಂಬ ಶೀರ್ಷಿಕೆಯ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ದೇಶಗಳಿಂದ ಮತ್ತು ಭಾರತದ 18 ರಾಜ್ಯಗಳಿಂದ 2,500 ಗುಜರಾತಿಗಳು ಪಾಲ್ಗೊಳ್ಳಲಿದ್ದಾರೆ. ‘ಪ್ರವಾಸಿ ಗುಜರಾತಿ ಪರ್ವ’ದಲ್ಲಿ 200ಕ್ಕೂ ಹೆಚ್ಚು ಸೆಲೆಬ್ರಿಟಿಗಳು, 30 ಉದ್ಯಮಿಗಳು ಮತ್ತು 80ಕ್ಕೂ ಹೆಚ್ಚು ಭಾಷಣಕಾರರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದಲ್ಲಿ 30 ಮೆಗಾ ಕಾನ್‌ಕ್ಲೇವ್‌ಗಳು ಮತ್ತು ಸಮ್ಮೇಳನಗಳು ಮತ್ತು ಸುಮಾರು 50 ಕಲಾವಿದರೊಂದಿಗೆ ಮಲ್ಟಿಮೀಡಿಯಾ ಶೋಗಳನ್ನು ಸಹ ಆಯೋಜಿಸಲಾಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ಪ್ರವಾಸಿ ಗುಜರಾತಿ ಪರ್ವ 2022 ಅನ್ನು ಉದ್ಘಾಟಿಸಿದ್ದಾರೆ. ಇದು ಪ್ರಪಂಚದಾದ್ಯಂತದ ಗುಜರಾತಿ ಸಾಧಕರನ್ನು ಒಟ್ಟುಗೂಡಿಸಿ ಮತ್ತು ಆಚರಿಸುವ ವರ್ಷದ ಅತಿದೊಡ್ಡ ಕಾರ್ಯಕ್ರಮವಾಗಿದೆ.

ಇದನ್ನೂ ಓದಿ: Pravasi Gujarati Parv 2022 Live: ಪ್ರವಾಸಿ ಗುಜರಾತಿ ಪರ್ವ ಲೈವ್ ಇವೆಂಟ್

3 ದಿನಗಳ ಈ ಕಾರ್ಯಕ್ರಮ ಟಿವಿ9 ನೆಟ್‌ವರ್ಕ್ ಚಾನೆಲ್‌ಗಳಲ್ಲಿ, ಟಿವಿ ಮತ್ತು ಡಿಜಿಟಲ್‌ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ. ಕ್ರೀಡೆಯಿಂದ ವ್ಯಾಪಾರದಿಂದ ಮನರಂಜನೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗುಜರಾತಿಗಳನ್ನು ಆಚರಿಸಿ, ಜಾಗತಿಕ ವೇದಿಕೆಯಲ್ಲಿ ಗುಜರಾತ್‌ನ ಧ್ವನಿಯಾಗಿ, ಗುಜರಾತ್‌ಗೆ ಹೆಮ್ಮೆ ತರುವ ಯುವ ಸಾಧಕರಿಗೆ ವೇದಿಕೆಯನ್ನು ಒದಗಿಸುತ್ತದೆ. ಗುಜರಾತಿ ಸಂಪ್ರದಾಯಗಳನ್ನು ಪ್ರದರ್ಶಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ.

ಪ್ರವಾಸಿ ಗುಜರಾತಿ ಪರ್ವ್‌ನಲ್ಲಿ ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್, AIANA ಅಧ್ಯಕ್ಷರಾದ ಪ್ರಫುಲ್ ನಾಯಕ್, ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮುಂತಾದವರು ಪಾಲ್ಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Sat, 15 October 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ