AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pravasi Gujarati Parv 2022: 2024ರೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ; ಪ್ರವಾಸಿ ಗುಜರಾತಿ ಪರ್ವದಲ್ಲಿ ಅಮಿತ್ ಶಾ ಭರವಸೆ

Amit Shah Speech in Gujarati Utsav 2022: ‘ಪ್ರವಾಸಿ ಗುಜರಾತಿ ಪರ್ವ’ದಲ್ಲಿ 200ಕ್ಕೂ ಹೆಚ್ಚು ಸೆಲೆಬ್ರಿಟಿಗಳು, 30 ಉದ್ಯಮಿಗಳು ಮತ್ತು 80ಕ್ಕೂ ಹೆಚ್ಚು ಭಾಷಣಕಾರರು ಉಪಸ್ಥಿತರಿರುತ್ತಾರೆ.

Pravasi Gujarati Parv 2022: 2024ರೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ; ಪ್ರವಾಸಿ ಗುಜರಾತಿ ಪರ್ವದಲ್ಲಿ ಅಮಿತ್ ಶಾ ಭರವಸೆ
ಗೃಹ ಸಚಿವ ಅಮಿತ್ ಶಾ
TV9 Web
| Edited By: |

Updated on:Oct 15, 2022 | 12:29 PM

Share

ಅಹಮದಾಬಾದ್: ಅನಿವಾಸಿ ಗುಜರಾತಿಗಳು ತಾವು ವಾಸಿಸುವ ಪ್ರತಿಯೊಂದು ದೇಶದ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತಾರೆ. ಗುಜರಾತ್​ನ ಸರ್ವತೋಮುಖ ಅಭಿವೃದ್ಧಿಗೆ ಗುಜರಾತ್​ನ (Gujarat) ಬಿಜೆಪಿ ಸರ್ಕಾರ ಸಾಕಷ್ಟು ಪರಿಶ್ರಮ ವಹಿಸುತ್ತಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಅಭಿವೃದ್ಧಿ ಪರ್ವ ಮುಂದುವರಿದಿದೆ. ಮುಂದಿನ 25 ವರ್ಷಗಳ ಕಾಲ ಸಂಕಲ್ಪ ಮಾಡುವ ಸಮಯವಿದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಗುಜರಾತ್​ನ ಅಹಮದಾಬಾದ್​​ನಲ್ಲಿ ಮೂರು ದಿನಗಳ ‘ಪ್ರವಾಸಿ ಗುಜರಾತಿ ಪರ್ವ-2022’ (Pravasi Gujarati Parv) ಇಂದಿನಿಂದ ಆರಂಭವಾಗಿದೆ. ಈ ಉತ್ಸವಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ.

ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ಕಟ್ಟುವ ವಿಚಾರದಲ್ಲಿ ವಿರೋಧ ಪಕ್ಷಗಳು ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದವು ಎಂದು ವಾಗ್ದಾಳಿ ನಡೆಸಿದ ಅಮಿತ್ ಶಾ, ‘ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸುವ ಬಗ್ಗೆ ನಮ್ಮ ವಿರೋಧಿಗಳು ನಮ್ಮನ್ನು ಹೀಯಾಳಿಸುತ್ತಿದ್ದರು. ನಮ್ಮನ್ನು ಗೇಲಿ ಮಾಡಲು ‘ಮಂದಿರ್ ವಹಿ ಬನಾಯೇಂಗೆ, ಪರ್ ತಿಥಿ ನಹೀ ಬತಾಯೇಂಗೆ’ (ರಾಮ ಮಂದಿರವನ್ನು ಅಲ್ಲಿಯೇ ಕಟ್ಟುತ್ತೇವೆ, ಆದರೆ ಯಾವಾಗ ಕಟ್ಟುತ್ತೇವೆ ಎಂದು ಹೇಳುವುದಿಲ್ಲ) ಎಂದು ಹೇಳುತ್ತಾ ನಮ್ಮನ್ನು ಟೀಕಿಸುತ್ತಿದ್ದರು. ಆದರೆ, ನಮ್ಮ ನಾಯಕ ನರೇಂದ್ರ ಮೋದಿ ಅವರು ದೊಡ್ಡ ಕಾರ್ಯಗಳನ್ನು ಹೇಗೆ ಸಾಧಿಸಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ. ಅವರು ಶಾಂತಿಯುತ ರೀತಿಯಲ್ಲಿ ಮಾತ್ರವಲ್ಲದೆ ಸಂವಿಧಾನದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಾಮ ಮಂದಿರವನ್ನು ನಿರ್ಮಿಸುವ ಅಸಾಧ್ಯವಾದ ಕೆಲಸವನ್ನು ಮಾಡಿದ್ದಾರೆ.  2024ರ ಚುನಾವಣೆಗೂ ಮೊದಲು ಅಯೋಧ್ಯೆಯಲ್ಲಿ ಆಕಾಶದ ಎತ್ತರದ ರಾಮ ಮಂದಿರವು ಸಿದ್ಧವಾಗಲಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.

ಪ್ರವಾಸಿ ಗುಜರಾತಿ ಪರ್ವ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಹಿಮಾಚಲ ಪ್ರದೇಶದಲ್ಲಿ ಇರುವುದರಿಂದ ನಾನು ಅಹಮದಾಬಾದ್​​ನಲ್ಲಿ ನೇರವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲ. ಪ್ರತಿಯೊಬ್ಬರಿಗೂ ಪ್ರವಾಸಿ ಗುಜರಾತಿ ಪರ್ವದ ಶುಭಾಶಯಗಳು. ವಿಶ್ವದಲ್ಲಿ ಎನ್​ಆರ್​​​ಐ ಗುಜರಾತಿಗಳ ಕೊಡುಗೆ ಅಪಾರ. ನಮ್ಮ ಸರ್ಕಾರ ಗುಜರಾತ್​ನಲ್ಲಿ ಅಮೂಲಾಗ್ರ ಬದಲಾವಣೆ ತಂದಿದೆ. ಪ್ರತಿ ಗ್ರಾಮಕ್ಕೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇವೆ.  ಪರಿವಾರವಾದಿ ರಾಜಕೀಯ ಪಕ್ಷಗಳು ದೇಶಕ್ಕಾಗಿ ಏನೂ ಮಾಡಿಲ್ಲ ಎಂದು ಹಿಮಾಚಲ ಪ್ರದೇಶದಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕ ಅಮಿತ್ ಶಾ ಭಾಷಣ ಮಾಡಿದ್ದಾರೆ.

ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೇರಿರುವ ಹೆಮ್ಮೆಯ ಗುಜರಾತಿಗಳು ಈಗ ಒಂದೇ ಸೂರಿನಡಿ ಸೇರುತ್ತಿದ್ದಾರೆ. ‘ಪ್ರವಾಸಿ ಗುಜರಾತಿ ಪರ್ವ’ದಲ್ಲಿ 200ಕ್ಕೂ ಹೆಚ್ಚು ಸೆಲೆಬ್ರಿಟಿಗಳು, 30 ಉದ್ಯಮಿಗಳು ಮತ್ತು 80ಕ್ಕೂ ಹೆಚ್ಚು ಭಾಷಣಕಾರರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದಲ್ಲಿ 30 ಮೆಗಾ ಕಾನ್‌ಕ್ಲೇವ್‌ಗಳು ಮತ್ತು ಸಮ್ಮೇಳನಗಳು ಮತ್ತು ಸುಮಾರು 50 ಕಲಾವಿದರೊಂದಿಗೆ ಮಲ್ಟಿಮೀಡಿಯಾ ಶೋಗಳನ್ನು ಸಹ ಆಯೋಜಿಸಲಾಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ಪ್ರವಾಸಿ ಗುಜರಾತಿ ಪರ್ವ 2022 ಅನ್ನು ಉದ್ಘಾಟಿಸಿದ್ದಾರೆ. ಇದು ಪ್ರಪಂಚದಾದ್ಯಂತದ ಗುಜರಾತಿ ಸಾಧಕರನ್ನು ಒಟ್ಟುಗೂಡಿಸಿ ಮತ್ತು ಆಚರಿಸುವ ವರ್ಷದ ಅತಿದೊಡ್ಡ ಕಾರ್ಯಕ್ರಮವಾಗಿದೆ.

ಇದನ್ನೂ ಓದಿ: Pravasi Gujarati Parv 2022 Live: ಪ್ರವಾಸಿ ಗುಜರಾತಿ ಪರ್ವ ಲೈವ್ ಇವೆಂಟ್

TV9 ನೆಟ್‌ವರ್ಕ್ ಮತ್ತು ಅಸೋಸಿಯೇಷನ್ ​​ಆಫ್ ಇಂಡಿಯನ್ ಅಮೆರಿಕನ್ಸ್ ಇನ್ ನಾರ್ತ್ ಅಮೇರಿಕಾ (AIANA) ಅಹಮದಾಬಾದ್‌ನಲ್ಲಿ ಎನ್‌ಆರ್‌ಐ ಗುಜರಾತಿಗಳಿಗಾಗಿ ಇಂದಿನಿಂದ 3 ದಿನಗಳ ಥಿಂಕ್ ಮತ್ತು ಫನ್ ಫೆಸ್ಟ್ ಅನ್ನು ಆಯೋಜಿಸಲಿದೆ. ಇಂದಿನಿಂದ (ಅಕ್ಟೋಬರ್ 15) ಅ. 17ರವರೆಗೆ ‘ಪ್ರವಾಸಿ ಗುಜರಾತಿ ಪರ್ವ 2022’ ಎಂಬ ಶೀರ್ಷಿಕೆಯ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ದೇಶಗಳಿಂದ ಮತ್ತು ಭಾರತದ 18 ರಾಜ್ಯಗಳಿಂದ 2,500 ಗುಜರಾತಿಗಳು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Pravasi Gujarati Parv ‘ಪ್ರವಾಸಿ ಗುಜರಾತಿ ಪರ್ವ್ 2022’ ಅಕ್ಟೋಬರ್ 15 ರಿಂದ ಅಹಮದಾಬಾದ್‌ನಲ್ಲಿ ಪ್ರಾರಂಭ, ಏನಿದರ ವಿಶೇಷ?

3 ದಿನಗಳ ಈ ಕಾರ್ಯಕ್ರಮ ಟಿವಿ9 ನೆಟ್‌ವರ್ಕ್ ಚಾನೆಲ್‌ಗಳಲ್ಲಿ, ಟಿವಿ ಮತ್ತು ಡಿಜಿಟಲ್‌ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ. ಕ್ರೀಡೆಯಿಂದ ವ್ಯಾಪಾರದಿಂದ ಮನರಂಜನೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗುಜರಾತಿಗಳನ್ನು ಆಚರಿಸಿ, ಜಾಗತಿಕ ವೇದಿಕೆಯಲ್ಲಿ ಗುಜರಾತ್‌ನ ಧ್ವನಿಯಾಗಿ, ಗುಜರಾತ್‌ಗೆ ಹೆಮ್ಮೆ ತರುವ ಯುವ ಸಾಧಕರಿಗೆ ವೇದಿಕೆಯನ್ನು ಒದಗಿಸುತ್ತದೆ. ಗುಜರಾತಿ ಸಂಪ್ರದಾಯಗಳನ್ನು ಪ್ರದರ್ಶಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ.

ಪ್ರವಾಸಿ ಗುಜರಾತಿ ಪರ್ವ್‌ನಲ್ಲಿ TV9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್, ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್, AIANA ಅಧ್ಯಕ್ಷರಾದ ಪ್ರಫುಲ್ ನಾಯಕ್, ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮುಂತಾದವರು ಪಾಲ್ಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:06 pm, Sat, 15 October 22

Follow Us
Web contact
Web contact

TV9 Kannada

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್