AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pravasi Gujarati Parv ‘ಪ್ರವಾಸಿ ಗುಜರಾತಿ ಪರ್ವ್ 2022’ ಅಕ್ಟೋಬರ್ 15 ರಿಂದ ಅಹಮದಾಬಾದ್‌ನಲ್ಲಿ ಪ್ರಾರಂಭ, ಏನಿದರ ವಿಶೇಷ?

20ಕ್ಕೂ ಹೆಚ್ಚು ದೇಶಗಳು ಮತ್ತು ಭಾರತದ 18 ರಾಜ್ಯಗಳ ಸುಮಾರು 2,500 ಗುಜರಾತಿಗಳು 'ಪ್ರವಾಸಿ ಗುಜರಾತಿ ಪರ್ವ್'ನಲ್ಲಿ ಭಾಗವಹಿಸಲಿದ್ದಾರೆ. 'ಪ್ರವಾಸಿ ಗುಜರಾತಿ ಪರ್ವ್' ಅಕ್ಟೋಬರ್ 15 ರ ಶನಿವಾರದಂದು ಅಹಮದಾಬಾದ್‌ನಲ್ಲಿ ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್ 17 ರವರೆಗೆ ನಡೆಯಲಿದೆ.

Pravasi Gujarati Parv 'ಪ್ರವಾಸಿ ಗುಜರಾತಿ ಪರ್ವ್ 2022' ಅಕ್ಟೋಬರ್ 15 ರಿಂದ ಅಹಮದಾಬಾದ್‌ನಲ್ಲಿ ಪ್ರಾರಂಭ, ಏನಿದರ ವಿಶೇಷ?
Image Credit source: Pravasi Gujarati Parv
TV9 Web
| Edited By: |

Updated on:Oct 11, 2022 | 12:12 PM

Share

TV9 ನೆಟ್‌ವರ್ಕ್ ಮತ್ತು ಅಸೋಸಿಯೇಷನ್ ​​ಆಫ್ ಇಂಡಿಯನ್ ಅಮೆರಿಕನ್ಸ್ ಇನ್ ನಾರ್ತ್ ಅಮೇರಿಕಾ (Association of Indian Americans in North America-AIANA) ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನಲ್ಲಿ ಗುಜರಾತಿನ ಉದ್ಯಮರಂಗ ಮತ್ತು ಹೆಮ್ಮೆಯನ್ನು ಆಚರಿಸಲು ಮೂರು ದಿನಗಳ ಕಾರ್ಯಕ್ರಮವನ್ನು (Pravasi Gujarati Parv 2022) ಆಯೋಜಿಸುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ‘ಪ್ರವಾಸಿ ಗುಜರಾತಿ ಪರ್ವ್’ ಅಕ್ಟೋಬರ್ 15 ರ ಶನಿವಾರದಂದು ಅಹಮದಾಬಾದ್‌ನಲ್ಲಿ ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್ 17 ರವರೆಗೆ ನಡೆಯಲಿದೆ. 20ಕ್ಕೂ ಹೆಚ್ಚು ದೇಶಗಳು ಮತ್ತು ಭಾರತದ 18 ರಾಜ್ಯಗಳಿಂದ ಸುಮಾರು 2,500 ಗುಜರಾತಿಗಳು (Gujaratis) ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರವಾಸಿ ಗುಜರಾತಿ ಪರ್ವ್ ವ್ಯಾಪಾರ ಸಮಾವೇಶಗಳು ಮತ್ತು ಪ್ರದರ್ಶನಗಳಿಂದ ಹಿಡಿದು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸೆಲೆಬ್ರಿಟಿಗಳ ಪ್ರದರ್ಶನಗಳವರೆಗೆ ವಿಶೇಷ ಕಾರ್ಯಕ್ರಮಗಳಿಂದ ತುಂಬಿರುತ್ತದೆ.

ಈ ‘ಪ್ರವಾಸಿ ಗುಜರಾತಿ ಹಬ್ಬ’ವನ್ನು ನಾಲ್ಕು ಕಾರಣಗಳಿಗಾಗಿ ನಡೆಸಲಾಗುತ್ತದೆ: ದೊಡ್ಡಮಟ್ಟದಲ್ಲಿ ವಿದೇಶಿ ನೆಲೆಗಳಲ್ಲಿ ನೆಲೆಸಿರುವ ಗುಜರಾತಿಗಳು ಮತ್ತು ಸ್ಥಳೀಯ ಗುಜರಾತಿಗಳು ನಡುವೆ ಸಂಪರ್ಕವನ್ನು ಸ್ಥಾಪಿಸಲು, ಭಾರತ ಮತ್ತು ವಿದೇಶಗಳಲ್ಲಿ ಗುಜರಾತಿ ಮೂಲದ ಜನರ ನಡುವೆ ಸಂವಹನದ ಚಾನಲ್ ತೆರೆಯಲು, ಗುಜರಾತ್ ರಾಜ್ಯದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವುದನ್ನು ಪ್ರೋತ್ಸಾಹಿಸಲು ಮತ್ತು ಗುಜರಾತಿ ಹೆಮ್ಮೆ ಮತ್ತು ಪರಂಪರೆಯನ್ನು ಆಚರಿಸಲು.

  1. ಪ್ರವಾಸಿ ಗುಜರಾತಿ ಪರ್ವ್ ವ್ಯಾಪಾರ ಸಮಾವೇಶಗಳು ಮತ್ತು ಪ್ರದರ್ಶನಗಳಿಂದ ಹಿಡಿದು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜನಪ್ರಿಯ ಪ್ರದರ್ಶನಗಳವರೆಗೆ ವಿಶೇಷ ಕಾರ್ಯಕ್ರಮಗಳಿಂದ ತುಂಬಿರುತ್ತದೆ.
  2. TV9 ನೆಟ್‌ವರ್ಕ್ ಮತ್ತು ಅಸೋಸಿಯೇಷನ್ ​​ಆಫ್ ಇಂಡಿಯನ್ ಅಮೆರಿಕನ್ಸ್ ಇನ್ ನಾರ್ತ್ ಅಮೆರಿಕ (AIANA) ಗುಜರಾತ್‌ನ ಅಹಮದಾಬಾದ್‌ನಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
  3. 20ಕ್ಕೂ ಹೆಚ್ಚು ದೇಶಗಳು ಮತ್ತು ಭಾರತದ 18 ರಾಜ್ಯಗಳ ಸುಮಾರು 2,500 ಗುಜರಾತಿಗಳು ‘ಪ್ರವಾಸಿ ಗುಜರಾತಿ ಪರ್ವ್’ನಲ್ಲಿ ಭಾಗವಹಿಸಲಿದ್ದಾರೆ. ‘ಪ್ರವಾಸಿ ಗುಜರಾತಿ ಪರ್ವ್’ ಅಕ್ಟೋಬರ್ 15 ರ ಶನಿವಾರದಂದು ಅಹಮದಾಬಾದ್‌ನಲ್ಲಿ ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್ 17 ರವರೆಗೆ ನಡೆಯಲಿದೆ. 

ಇದು ಪ್ರವಾಸಿ ಗುಜರಾತ್ ಪರ್ವ್‌ನ ಮೊದಲ ಆವೃತ್ತಿಯಾಗಿದೆ. ಈ ಈವೆಂಟ್ ಮೂಲಕ ಕೆಳಗಿನವುಗಳನ್ನು ಸಾಧಿಸಲು ಸಂಘಟಕರು ಶ್ರಮಿಸುತ್ತಾರೆ:

ಸಂಪರ್ಕ- ‘ಪ್ರವಾಸಿ ಗುಜರಾತಿ ಪರ್ವ್’ ನಲ್ಲಿ ಕನೆಕ್ಟ್‌ನ ಪ್ರಾಥಮಿಕ ಉದ್ದೇಶವು ಅತ್ಯುತ್ತಮ ಮತ್ತು ಪ್ರಕಾಶಮಾನ ಉದ್ಯಮಿ/ ವ್ಯಾಪಾರಿಗಳನ್ನು ಸಂಯೋಜಿಸುವ ಮೂಲಕ ಉತ್ತಮ ನೆಟ್‌ವರ್ಕಿಂಗ್ ವೇದಿಕೆಯನ್ನು ರಚಿಸುವುದು.

ಸಂವಹನ- ವಿವಿಧ ಸಮುದಾಯಗಳು ಮತ್ತು ಸಂಸ್ಥೆಗಳ ಪ್ರಭಾವಿ ವ್ಯಕ್ತಿಗಳು ಈ ‘ಪ್ರವಾಸಿ ಗುಜರಾತಿ ಪರ್ವ್’ ನಲ್ಲಿ ಸಮಾವೇಶಗಳು ಮತ್ತು ಸಮ್ಮೇಳನಗಳ ಮೂಲಕ ಪರಸ್ಪರ ಸಂವಹನ ನಡೆಸಲು ಒಂದೇ ಸೂರಿನಡಿ ಸೇರುತ್ತಾರೆ.

ಕೊಡುಗೆ ನೀಡಿ- ಈವೆಂಟ್‌ನಲ್ಲಿ ಭಾಗವಿಸುವ ಎಲ್ಲಾ ಪ್ರಮುಖ ವ್ಯಕ್ತಿಗಳು ಗುಜರಾತ್ ಅನ್ನು ಹೊಸ ಎತ್ತರಕ್ಕೆ ಹೇಗೆ ಮುನ್ನಡೆಸುವುದು ಎಂಬುದರ ಕುರಿತು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ವಿನಿಮಯ ಮಾಡಿಕೊಳ್ಳುತ್ತಾರೆ.

ಆಚರಣೆ- ಗುಜರಾತಿ ಕಲೆ ಮತ್ತು ಸಂಸ್ಕೃತಿಯನ್ನು ವಿವಿಧ ಮಾಧ್ಯಮಗಳ ಮೂಲಕ ಆಚರಿಸಲು 2,000 ಕ್ಕೂ ಹೆಚ್ಚು ಜನರು ಸೇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:08 pm, Tue, 11 October 22

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?