GDP Growth: ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯು ಶೇಕಡಾ 6.8 ಕ್ಕೆ ಇರಲಿದೆ: ಐಎಂಎಫ್ ವರದಿ
ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯು 2023ರಲ್ಲಿ ಶೇಕಡಾ 6.8 ಇರದಲಿದೆ ಎಂದು ಹೇಳಿದೆ.
ಕೊರೊನಾ ಸಾಂಕ್ರಾಮಿಕ ರೋಗ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು, ರಷ್ಯಾ-ಉಕ್ರೇನ್ ಯುದ್ಧದಿಂದ ಜಗತ್ತು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ. ಈ ನಡುವೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ದೇಶದ ಆರ್ಥಿಕತೆಗೆ ಸಂಬಂಧಿಸಿದ ಸುದ್ದಿಯೊಂದು ಹೊರಡಿಸಿದೆ. ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯು 2023ರಲ್ಲಿ ಶೇಕಡಾ 6.8 ಇರದಲಿದೆ ಎಂದು ಹೇಳಿದೆ.
2022 ರ ಜುಲೈನಲ್ಲಿ IMF ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಶೇ 7.4 ಇರಲಿದೆ ಎಂದು ಅಂದಾಜಿಸಿತ್ತು. ಆದರೆ ಅಂದಾಜಿಗಿಂತ 0.6 ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ. 2021-22 ಹಣಕಾಸು ವರ್ಷದಲ್ಲಿ (ಏಪ್ರಿಲ್ 2021 ರಿಂದ ಮಾರ್ಚ್ 2022 ರವರೆಗೆ) ಭಾರತವು ಶೇಕಡಾ 8.7 ರಷ್ಟು ಬೆಳವಣಿಗೆ ಸಾಧಿಸಿತ್ತು.
IMF Growth Forecast: 2023
USA??: 1%Germany??: -0.3%France??: 0.7%Italy??: -0.2%Spain??: 1.2%Japan??: 1.6%UK??: 0.3%Canada??: 1.5%China??: 4.4%India??: 6.1%Russia??: -2.3%Brazil??: 1%Mexico??: 1.2%KSA??: 3.7% Nigeria??: 3%RSA??: 1.1%https://t.co/VBrRHOfbIE #WEO pic.twitter.com/0TDJbgSuka
— IMF (@IMFNews) October 11, 2022
ಜಾಗತಿಕವಾಗಿ ಭಾರತದ ಆರ್ಥಿಕತೆಯನ್ನು ತಾಳೆ ಮಾಡಿ ನೋಡುವುದಾರೆ 2021 ರಲ್ಲಿ ಶೇಕಡಾ 6.0 ರಷ್ಟು ಹೆಚ್ಚಿಸಿಕೊಂಡಿದ್ದು, 2022 ರಲ್ಲಿ ಶೇಕಡಾ 3.2 ಮತ್ತು 2023 ರಲ್ಲಿ ಶೇ.4.4 ರಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಿದೆ. 2022 ಮತ್ತು 2023 ರಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಉಳಿಯಲಿದೆ. IMF ಪ್ರಕಾರ, 2023 ರಲ್ಲಿ ಭಾರತದ GDP ಬೆಳವಣಿಗೆಯ ಮುನ್ಸೂಚನೆಯು 6.1% ಆಗಿರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 pm, Tue, 11 October 22