ಸಹರಾನ್‌ಪುರ, ಮಾರ್ಚ್ 13: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋವೊಂದು ರಾಷ್ಟ್ರೀಯ ಹೆದ್ದಾರಿಯೊಂದರ ಎಸ್‌ಯುವಿ ವಾಹನವೊಂದರ ಮೇಲೆ ವರಮಹಾಶಯ ಮದುವೆಯ ಧರಿಸು ಧರಿಸಿ, ಬಹುತೇಕ ಪ್ರತಿಮೆಯಂತೆ ನಿಂತು ವೈಭವೋಪೇತವಾಗಿ ಸಾಗಿದ್ದಾನೆ. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಮದುವೆಯ ಸಂದರ್ಭದಲ್ಲಿ ವರ ತನ್ನ ಕಾರಿನ ಮೇಲೆ ನಿಂತು ಸಾಗಿದ್ದಾನೆ. ಅದ ಕಂಡು ಸ್ಥಳಕ್ಕೆ ಬಂದ ಪೊಲೀಸರು ಎಸ್‌ಯುವಿ ( SUV) ವಾಹನವನ್ನು ವಶಪಡಿಸಿಕೊಂಡಿದ್ದಾರೆ.
Kaha Milega Itna Content?
In Uttar Pradesh a man was doing this stunt during his wedding procession. The Car has now been seized.. pic.twitter.com/nOojy5DMQ7
— Tanishq Punjabi (@tanishqq9) March 12, 2024
ವರದಿಗಳ ಪ್ರಕಾರ, ಅಂಕಿತ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ನಿನ್ನೆ ಮಂಗಳವಾರ ಸಹರಾನ್‌ಪುರದ (Saharanpur) ಭೈಲಾ ಗ್ರಾಮದಿಂದ ಮೀರತ್‌ನ ಕುಶಾವಲಿ ಗ್ರಾಮದಲ್ಲಿದ್ದ ವಧುವಿನ ಮನೆಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದರು. ಅಷ್ಟೇ ಅಲ್ಲ; ಅಂಕಿತ್ ವಾಹನದ ಮೇಲೆ ನಿಂತಿದ್ದು, ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತನ ಫೋಟೋಗಳನ್ನು ಕ್ಲಿಕ್ಕಿಸಲು ಡ್ರೋನ್ ಬಳಸಲಾಗುತ್ತಿತ್ತು. ಅದಕ್ಕೂ ಪೊಲೀಸರು ಕಡಿವಾಣ ಹಾಕಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ