ಹಸುವಿನ ಹಾಲು ಶ್ರೇಷ್ಠವೋ, ಎಮ್ಮೆ ಹಾಲು ಆರೋಗ್ಯವೋ? ಮೂಳೆಗಳ ಆರೋಗ್ಯಕ್ಕೆ ಯಾವುದು ಉತ್ತಮ?
Cow Milk Vs Buffalo Milk: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, 250 ಮಿಲಿ ಎಮ್ಮೆ ಹಾಲು 412 ಮಿ ಗ್ರಾಂ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಇದು ರಂಜಕ, ಮೆಗ್ನೀಸಿಯಮ್ ಮತ್ತು ಕ್ಲೋರೈಡ್ ಅನ್ನು ಸಹ ಒಳಗೊಂಡಿದೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ.
ಕ್ಯಾಲ್ಸಿಯಂ ಮೂಳೆಯ ಸಾಂದ್ರತೆಯನ್ನು ಸದೃಢಗೊಳಿಸುತ್ತದೆ. ಒಳಗಿನಿಂದ ಮೂಳೆಗಳು ದೃಢಗೊಂಡು ಸಬಲಗೊಳ್ಳುತ್ತದೆ. ಇದು ವಿವಿಧ ಮೂಳೆ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಉದಾಹರಣೆಗೆ ಕೀಲು ನೋವು ಮತ್ತು ಸಂಧಿವಾತದಿಂದ ಬಳಲುತ್ತಿರುವವರು ಹಾಲು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಮತ್ತು ವಿವಿಧ ರೋಗಗಳಿಂದ ರಕ್ಷಿಸಬಹುದು. ಹಾಗಾದರೆ ಕ್ಯಾಲ್ಸಿಯಂ ಸಮೃದ್ಧಿಯಾಗಿರು ಹಸುವಿನ ಹಾಲು ಅಥವಾ ಎಮ್ಮೆ ಹಾಲು.. ಇದ್ರಲ್ಲಿ ಯಾವ ಹಾಲು ನಿಮಗೆ ಉತ್ತಮ? ಹಾಲು ಸೇವನೆಯು ಅನೇಕ ಮೂಳೆ ಅಸ್ವಸ್ಥತೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾದರೆ ಯಾವ ಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಎಮ್ಮೆಯ ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, 250 ಮಿಲಿ ಎಮ್ಮೆ ಹಾಲು 412 ಮಿ ಗ್ರಾಂ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಇದು ರಂಜಕ, ಮೆಗ್ನೀಸಿಯಮ್ ಮತ್ತು ಕ್ಲೋರೈಡ್ ಅನ್ನು ಸಹ ಒಳಗೊಂಡಿದೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ. ಇದಲ್ಲದೇ ಹಾಲಿನಲ್ಲಿರುವ ಕೊಬ್ಬು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.
Also Read: ಮಧುಮಗ ದೊಡ್ಡ ಕಾರಿನ ಮೇಲೆ ಉದ್ದೋಉದ್ದ ನಿಂತು ಮದುವೆ ಮೆರವಣಿಗೆ ಹೊರಟ, ಪೊಲೀಸರು ಏನು ಮಾಡಿದರು ನೋಡಿ!
ಹಸುವಿನ ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ
1 ಕಪ್ ಹಸುವಿನ ಹಾಲಿನಲ್ಲಿ 305 ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಈ ಹಾಲು ಮೂಳೆ ಅಸ್ವಸ್ಥತೆಗಳನ್ನು ತಡೆಯುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು. ಕ್ಯಾಲ್ಸಿಯಂ ಹಾಲಿನಲ್ಲಿ ವ್ಯಾಪಕವಾಗಿ ಲಭ್ಯವಿರುವ ಮೂಲಗಳಲ್ಲಿ ಒಂದಾಗಿದೆ. ಇದು ಕ್ಯಾಲ್ಸಿಯಂ ಅನ್ನು ಸಹ ಬಹಳ ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ. ಹಾಲು ಪ್ರೋಟೀನ್, ವಿಟಮಿನ್ ಎ ಮತ್ತು ವಿಟಮಿನ್ ಡಿ ಉತ್ತಮ ಮೂಲವಾಗಿದೆ.
Also Read: ಈತ ನಿಜಕ್ಕೂ ವಿಚಿತ್ರ ಮನುಷ್ಯನೇ! ಕಠಿಣ ತಪಸ್ಸಿನಂತೆ 5 ವರ್ಷದಿಂದ ವಿಭಿನ್ನ ಆಹಾರ ತಿನ್ನುತ್ತಿದ್ದಾರೆ! ಯಾಕೆ ಗೊತ್ತಾ?
ಹಸು, ಎಮ್ಮೆ..ಯಾವ ಹಾಲಿನಲ್ಲಿ ಕ್ಯಾಲ್ಸಿಯಂ ಹೆಚ್ಚು..?
ಎಮ್ಮೆಯ ಹಾಲಿನಲ್ಲಿ ಹಸುವಿನ ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ ಇದೆ. ನಿಮ್ಮ ಮೂಳೆಗಳನ್ನು ಬಲಪಡಿಸಲು ನೀವು ಎಮ್ಮೆಯ ಹಾಲನ್ನು ಕುಡಿಯಬೇಕು. ಇದು ಪೌಷ್ಟಿಕವಾಗಿದೆ. ವಿವಿಧ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮೂಳೆಗಳು ಆರೋಗ್ಯವಾಗಿರಲು ಎಮ್ಮೆಯ ಹಾಲು ಕುಡಿಯಬೇಕು ಎನ್ನುತ್ತಾರೆ ತಜ್ಞರು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ