ಮಧುಮಗ ದೊಡ್ಡ ಕಾರಿನ ಮೇಲೆ ಉದ್ದೋಉದ್ದ ನಿಂತು ಮದುವೆ ಮೆರವಣಿಗೆ ಹೊರಟ, ಪೊಲೀಸರು ಏನು ಮಾಡಿದರು ನೋಡಿ!
ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಮದುವೆ ಮೆರವಣಿಗೆಯಲ್ಲಿ ನಡು ರಸ್ತೆಯಲ್ಲಿ ದೊಡ್ಡ ಕಾರಿನ ಮೇಲೆ ನಿಂತುಕೊಂಡು ಸಂಚರಿಸುವ ಸಾಹಸ ಮಾಡುತ್ತಿದ್ದ. ಪೊಲೀಸರು ಸ್ಥಳಕ್ಕೆ ಬಂದರು. ಇದೀಗ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಸಹರಾನ್‌ಪುರ, ಮಾರ್ಚ್ 13: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋವೊಂದು ರಾಷ್ಟ್ರೀಯ ಹೆದ್ದಾರಿಯೊಂದರ ಎಸ್‌ಯುವಿ ವಾಹನವೊಂದರ ಮೇಲೆ ವರಮಹಾಶಯ ಮದುವೆಯ ಧರಿಸು ಧರಿಸಿ, ಬಹುತೇಕ ಪ್ರತಿಮೆಯಂತೆ ನಿಂತು ವೈಭವೋಪೇತವಾಗಿ ಸಾಗಿದ್ದಾನೆ. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಮದುವೆಯ ಸಂದರ್ಭದಲ್ಲಿ ವರ ತನ್ನ ಕಾರಿನ ಮೇಲೆ ನಿಂತು ಸಾಗಿದ್ದಾನೆ. ಅದ ಕಂಡು ಸ್ಥಳಕ್ಕೆ ಬಂದ ಪೊಲೀಸರು ಎಸ್‌ಯುವಿ ( SUV) ವಾಹನವನ್ನು ವಶಪಡಿಸಿಕೊಂಡಿದ್ದಾರೆ.
Kaha Milega Itna Content?
In Uttar Pradesh a man was doing this stunt during his wedding procession. The Car has now been seized.. pic.twitter.com/nOojy5DMQ7
— Tanishq Punjabi (@tanishqq9) March 12, 2024
ವರದಿಗಳ ಪ್ರಕಾರ, ಅಂಕಿತ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ನಿನ್ನೆ ಮಂಗಳವಾರ ಸಹರಾನ್‌ಪುರದ (Saharanpur) ಭೈಲಾ ಗ್ರಾಮದಿಂದ ಮೀರತ್‌ನ ಕುಶಾವಲಿ ಗ್ರಾಮದಲ್ಲಿದ್ದ ವಧುವಿನ ಮನೆಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದರು. ಅಷ್ಟೇ ಅಲ್ಲ; ಅಂಕಿತ್ ವಾಹನದ ಮೇಲೆ ನಿಂತಿದ್ದು, ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತನ ಫೋಟೋಗಳನ್ನು ಕ್ಲಿಕ್ಕಿಸಲು ಡ್ರೋನ್ ಬಳಸಲಾಗುತ್ತಿತ್ತು. ಅದಕ್ಕೂ ಪೊಲೀಸರು ಕಡಿವಾಣ ಹಾಕಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ