ಸ್ಪೈಸ್‌ಜೆಟ್ (SpiceJet) ವಿಮಾನಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದಕ್ಕಾಗಿ ಬ್ರಿಟಿಷ್ ಏರ್‌ವೇಸ್‌ನ (British Airways) ಟ್ರೈನಿ ಟಿಕೆಟಿಂಗ್ ಏಜೆಂಟ್ ಅನ್ನು ಶುಕ್ರವಾರ ಬಂಧಿಸಲಾಗಿದೆ. SG 8938 (ದೆಹಲಿ-ಪುಣೆ) ವಿಮಾನದಲ್ಲಿ ಕಾರ್ಯನಿರ್ವಹಿಸಲು ನಿಗದಿಯಾಗಿದ್ದ ವಿಮಾನದಲ್ಲಿ ಬಾಂಬ್ ಇರುವ ಕುರಿತು ಸ್ಪೈಸ್‌ಜೆಟ್ ಕಾಯ್ದಿರಿಸುವಿಕೆ ಕಚೇರಿಗೆ ಗುರುವಾರ ಕರೆ ಬಂದಿತ್ತು. ಆ ಸಮಯದಲ್ಲಿ, ವಿಮಾನಕ್ಕಾಗಿ ಪ್ರಯಾಣಿಕರ ಬೋರ್ಡಿಂಗ್ ಪ್ರಾರಂಭವಾಗಿರಲಿಲ್ಲ ಎಂದು ವಿಮಾನಯಾನ ವಕ್ತಾರರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕರೆಯನ್ನು ಅನುಸರಿಸಿ, ವಿಮಾನವನ್ನು ಪ್ರತ್ಯೇಕ ಜಾಗಕ್ಕೆ ಸ್ಥಳಾಂತರಿಸಲಾಗಿದ್ದು ಭದ್ರತಾ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದರು. “ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ನಂತರ ಕರೆಯನ್ನು ಸುಳ್ಳು ಎಂದು ಘೋಷಿಸಲಾಯಿತು” ಎಂದು ವಕ್ತಾರರು ತಿಳಿಸಿದ್ದಾರೆ.
ನಿನ್ನೆ ಕರೆ ಸ್ವೀಕರಿಸಿದ ನಂತರ, ವಿಮಾನಯಾನ ಸಂಸ್ಥೆಗಳು ನಿರ್ಗಮನವನ್ನು ಸ್ಥಗಿತಗೊಳಿಸಿ ಸಂಪೂರ್ಣ ಹುಡುಕಾಟ ನಡೆಸಿದ್ದವು.ಆದರೆ ಅಧಿಕಾರಿಗಳು ವಿಮಾನದಲ್ಲಿ ಯಾವುದೇ ಅನುಮಾನಾಸ್ಪದವಾಗಿ ಕಂಡುಬಂದಿಲ್ಲ. “ಭದ್ರತಾ ಅಧಿಕಾರಿಗಳು ಅದನ್ನು ಕೂಲಂಕಷವಾಗಿ ಪರಿಶೀಲಿಸಿದರು ಮತ್ತು ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ನಂತರ ಕರೆಯನ್ನು ಹುಸಿ ಬಾಂಬ್ ಕರೆ ಎಂದು ಘೋಷಿಸಲಾಯಿತು” ಎಂದು ಸ್ಪೈಸ್ ಜೆಟ್ ವಕ್ತಾರರು ತಿಳಿಸಿದ್ದಾರೆ.
ಕರೆ ಮಾಡಿದವರ ಪತ್ತೆಗೆ ದೆಹಲಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಬ್ರಿಟಿಷ್ ಏರ್‌ವೇಸ್ ಟಿಕೆಟಿಂಗ್ ಕೌಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ 24 ವರ್ಷದ ಅಭಿನವ್ ಪ್ರಕಾಶ್ ಈ ಕರೆ ಮಾಡಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಫುಡ್ ಡೆಲಿವರಿಗೆ ಹೋದಾಗ ನಾಯಿಗೆ ಹೆದರಿ 3ನೇ ಮಹಡಿಯಿಂದ ಹಾರಿದ ಸ್ವಿಗ್ಗಿ ಬಾಯ್
ಪುಣೆಗೆ ವಿಮಾನ ಪ್ರಯಾಣ ಬೆಳೆಸುತ್ತಿದ್ದ ತನ್ನ ಸ್ನೇಹಿತ ಆತನ ಗೆಳತಿಯೊಂದಿಗೆ ಸ್ವಲ್ಪ ಸಮಯ ಕಳೆಯಲು ತಾನು ಕರೆ ಮಾಡಿದ್ದೇನೆ ಎಂದು ಪ್ರಕಾಶ್ ಬಹಿರಂಗಪಡಿಸಿದ್ದಾರೆ.
ದೆಹಲಿ-ಪುಣೆ ಸ್ಪೈಸ್ ಜೆಟ್ ನಿನ್ನೆ ಸಂಜೆ 6.30ಕ್ಕೆ ಐಜಿಐ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ಟೇಕಾಫ್ ಆಗುವ ಕೆಲವೇ ನಿಮಿಷಗಳ ಮೊದಲು, ಸ್ಪೈಸ್ ಜೆಟ್ ರಿಸರ್ವೇಶನ್ ಕಚೇರಿಗೆ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಕರೆ ಬಂದಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Fri, 13 January 23