ತಿಹಾರ್ ಜೈಲಿನಲ್ಲಿ ನಡೆದ ಗ್ಯಾಂಗ್ ವಾರ್‌ನಲ್ಲಿ ಹತ್ಯೆಗೀಡಾದ ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯಾ(Tillu Tajpuriya) ಆಪ್ತ ಅಮಿತ್ ಅಲಿಯಾಸ್ ದಬಾಂಗ್‌ನ ಸಹೋದರ ಮೋಹಿತ್ ಅಲಿಯಾಸ್ ಬಂಟಿ ತಾಜ್‌ಪುರ ಕಲಾನ್‌ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಿಲ್ಲು ತಾಜ್‌ಪುರಿಯಾ ಹತ್ಯೆ ನಂತರ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಅಮಿತ್ ದಬಾಂಗ್ ತಿಲ್ಲು ಗ್ಯಾಂಗ್ನ ಸದಸ್ಯನಾಗಿದ್ದು, ಆತನನ್ನು ಹುಡುಕಿಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.
ಮೃತ ಮೋಹಿತ್ ಶವದ ಬಳಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ, ಸ್ಥಳದಲ್ಲಿ 9 ಎಂಎಂ ಪಿಸ್ತೂಲ್, ಖಾಲಿ ಕಾರ್ಟ್ರಿಡ್ಜ್ ಹಾಗೂ ಸಜೀವ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗಷ್ಟೇ ತಿಹಾರ್ ಜೈಲಿನಲ್ಲಿ ತಿಲ್ಲು ತಾಜ್‌ಪುರಿಯ ಹತ್ಯೆ ನಡೆದಿತ್ತು, ಆ ನಂತರ ದೆಹಲಿಯಲ್ಲಿ ಗ್ಯಾಂಗ್ ವಾರ್ ನಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು, ಅಮಿತ್ ಅಲಿಯಾಸ್ ದಬಾಂಗ್ ತಿಲ್ಲು ಜೊತೆ ನಂಟು ಹೊಂದಿದ್ದ, ಅಣ್ಣನ ವಿಚಾರದಲ್ಲಿ ತಿಲ್ಲುವನ್ನು ಕೊಂದವರು ತಮಗೂ ಬೆದರಿಕೆ ಹಾಕಬಹುದು ಎನ್ನುವ ಭಯದಲ್ಲಿದ್ದ, ಇದಲ್ಲದೆ ಕೌಟುಂಬಿಕ ಕಲಹವೂ ಆತ್ಮಹತ್ಯೆಗೆ ಕಾರಣವಾಗಿರಬಹುದು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ತಿಹಾರ್ ಜೈಲಿನಲ್ಲಿ ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯಾ ಹತ್ಯೆ ಪ್ರಕರಣ: ತಮಿಳುನಾಡಿನ 7 ಪೊಲೀಸರು ಅಮಾನತು
ಬೆಳಗ್ಗೆ 6.15ರ ಸುಮಾರಿಗೆ ಜೈಲಿನ 4 ಕೈದಿಗಳು ತಿಲ್ಲು ತಾಜ್‌ಪುರಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಎಲ್ಲಾ ದಾಳಿಕೋರರು ಗೋಗಿ ಗ್ಯಾಂಗ್‌ನವರು ಎಂದು ಹೇಳಲಾಗುತ್ತಿದೆ, ವಾಸ್ತವವಾಗಿ ರೋಹಿಣಿ ನ್ಯಾಯಾಲಯದಲ್ಲಿ ಜಿತೇಂದ್ರ ಗೋಗಿಯನ್ನು ಕೊಲೆ ಮಾಡಿದ ಆರೋಪವನ್ನು ತಿಲ್ಲು ಎದುರಿಸುತ್ತಿದ್ದ.
ತಿಲ್ಲು ತಾಜ್‌ಪುರಿಯ ವಿರುದ್ಧ ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ರೋಹಿಣಿ ಕೋರ್ಟ್‌ನ ಕೋರ್ಟ್ ಕೊಠಡಿಯಲ್ಲಿ ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿ ಹತ್ಯೆ ಪ್ರಕರಣದಲ್ಲಿ ತಿಲ್ಲು ಕೈವಾಡವಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ