Video: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬಿಎಸ್​ಎಫ್​ ಮಹಿಳಾ ಬೈಕರ್​ಗಳ ರೋಮಾಂಚನಕಾರಿ ಸಾಹಸ ಪ್ರದರ್ಶನ

| Updated By: Lakshmi Hegde

Updated on: Jan 26, 2022 | 5:11 PM

ಗಣರಾಜ್ಯೋತ್ಸವದಲ್ಲಿ ಭಾರತದ ಮಿಲಿಟರಿ ಶಕ್ತಿಯ ಜತೆ ಸಾಂಸ್ಕೃತಿಕ ವೈವಿಧ್ಯತೆ ಪ್ರದರ್ಶನ ನಡೆಯಿತು. ಅದರೊಂದಿಗೆ ಸ್ವಾತಂತ್ರ್ಯ ಬಂದು 75ವರ್ಷ ಆದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಹಲವು ಉಪಕ್ರಮಗಳನ್ನು ಸೇರಿಸಲಾಗಿತ್ತು.

Video: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಬಿಎಸ್​ಎಫ್​ ಮಹಿಳಾ ಬೈಕರ್​ಗಳ ರೋಮಾಂಚನಕಾರಿ ಸಾಹಸ ಪ್ರದರ್ಶನ
ಬಿಎಸ್​ಎಫ್​ ಮಹಿಳಾ ಬೈಕರ್​ಗಳಿಂದ ಸಾಹಸ ಪ್ರದರ್ಶನ
Follow us on

ದೆಹಲಿ: ಇಂದು ಗಣರಾಜ್ಯೋತ್ಸವ ಪರೇಡ್ (Republic Day Parade 2022)​ ಅತ್ಯಂತ ಆಕರ್ಷಕವಾಗಿತ್ತು. ದೇಶದ ಸಂಸ್ಕೃತಿ, ಪರಂಪರೆ ಬಿಂಬಿಸುವ ಸ್ತಬ್ಧ ಚಿತ್ರಗಳ ಜತೆ, ಗಡಿ ಭದ್ರತಾ ಪಡೆಯ ಮಹಿಳಾ ಯೋಧರ (BSF) ಬೈಕ್​ ಸಾಹಸ ಪ್ರದರ್ಶನ ದೇಶದ ಗಮನ ಸೆಳೆದಿದೆ. ಬಿಎಎಸ್​ಎಫ್​​ನ ಸೀಮಾ ಭವಾನಿ ನೇತೃತ್ವದ ಮೋಟಾರ್​ಸೈಕಲ್​ ತಂಡ ರಾಷ್ಟ್ರಪತಿಯವರಿಗೆ ವಂದನೆ ಸಲ್ಲಿಸಿದ್ದು, ಅತ್ಯಂತ ರೋಮಾಂಚನಕಾರಿಯಾಗಿತ್ತು. ಈ ವಿಡಿಯೋವನ್ನು ಕೂಡ ನೋಡಬಹುದಾಗಿದೆ.  

ಇಂದು ಈ ಬೈಕ್​ ತಂಡ ಕಮಾಂಡ್​ ಇನ್​ಸ್ಪೆಕ್ಟರ್​ ಹಿಮಾಂಶು ಸಿರೋಹಿ ಕಮಾಂಡ್​​ನಡಿ ರಾಷ್ಟ್ರಪತಿ ವಂದನೆ ಸಲ್ಲಿಸಿದೆ. ಸಬ್​ ಇನ್ಸ್​ಪೆಕ್ಟರ್​ ಸೋನಿಯಾ ಬನ್ವಾರಿ ಆದೇಶದಡಿ, ಬೈಕ್​​ಮೇಲೆ ಏಕಮಂಡಿಯೂರಿ ಸಾಹಸ ಪ್ರದರ್ಶನ ನಡೆಸಿತು. ಕಾನ್​ಸ್ಟೆಬಲ್​ ಅನಿಮಾ ನೇತೃತ್ವದಲ್ಲಿ ಕುರ್ಚಿ ರೈಡಿಂಗ್​ ನಡೆಯಿತು ಹಾಗೂ ಕಾನ್​​ಸ್ಟೆಬಲ್​ ಪುಷ್ಪಾ ಮತ್ತೊಬ್ಬರು ಸೇರಿ ಫಿಶ್​ ರೈಡಿಂಗ್  ನಡೆಸಿದರು. ಅಷ್ಟೇ ಅಲ್ಲ, ಕಾನ್​ಸ್ಟೆಬಲ್​ ರಜ್ವಿಂದರ್ ಕೌರ್​ ಹಾಗೂ ಇನ್ನೊಬ್ಬರು ಸೇರಿ ಒಂದು ಬದಿಯಿಂದ ಡಬಲ್​ ಬ್ಯಾಕ್​ ರೈಡಿಂಗ್​ ಮಾಡಿದರೆ, ಇನ್ನೊಂದು ಬೈಕ್​​ನಲ್ಲಿ ಕಾನ್​ಸ್ಟೆಬಲ್​ ಅನುಪಮಾ ಕುಮಾರಿ ಮತ್ತು ಇನ್ನೊಬ್ಬರು ಇದೇ ಮಾದರಿಯಲ್ಲಿ ಸಾಹಸ ಪ್ರದರ್ಶಿಸಿದರು. ಏಣಿಯ ಮೇಲೆ ನಿಂತು ಮಾಡುವ ಸಾಹಸವನ್ನು ಕಾನ್​​ಸ್ಟೆಬಲ್​ ಸಂಗೀತಾ ಕುಮಾರಿ ನೇತೃತ್ವದಲ್ಲಿ ಮಾಡಲಾಯಿತು. ಇಲ್ಲಿ ಐದು ಮಹಿಳಾ ಯೋಧರು ಬ್ಯಾಲೆನ್ಸ್​ ಮಾಡಿದ್ದು ರೋಚಕವಾಗಿತ್ತು. ಹಾಗೇ, ಕಾನ್​ಸ್ಟೆಬಲ್​ ಸುಮಿತಾ ಸಿಖ್ದರ್​ ನೇತೃತ್ವದಲ್ಲಿ ನಾಲ್ವರು ರೈಡರ್​ಗಳು ಬ್ಯಾಲೆನ್ಸ್​ ಮಾಡಿದರು. ಈ ವೇಳೆ ಮಹಿಳಾ ಕಾನ್​ಸ್ಟೆಬಲ್​ಗಳು ಬೇಟಿ ಪಡಾವೋ, ಬೇಟಿ ಬಚಾವೋ ಎಂಬಿತ್ಯಾದಿ ಸಂದೇಶಗಳ ಬೋರ್ಡ್​ಗಳನ್ನು ಪ್ರದರ್ಶಿಸಿದರು.

ಇದರೊಂದಿಗೆ ಇನ್ನೂ ವಿಧದ ಸ್ಟಂಟ್​ಗಳನ್ನು ಬಿಎಸ್​ಎಫ್​ ಮಹಿಳಾ ಸಿಬ್ಬಂದಿ ಮಾಡಿದರು. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾರತದ ಮಿಲಿಟರಿ ಶಕ್ತಿಯ ಜತೆ ಸಾಂಸ್ಕೃತಿಕ ವೈವಿಧ್ಯತೆ ಪ್ರದರ್ಶನ ನಡೆಯಿತು. ಅದರೊಂದಿಗೆ ಸ್ವಾತಂತ್ರ್ಯ ಬಂದು 75ವರ್ಷ ಆದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಹಲವು ಉಪಕ್ರಮಗಳನ್ನು ಸೇರಿಸಲಾಗಿತ್ತು. ಕೊವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಗಣರಾಜ್ಯೋತ್ಸವಕ್ಕೆ ಆಗಮಿಸಿದವರ ಸಂಖ್ಯೆ ಕಡಿಮೆ ಆಗಿದ್ದು, ಅನೇಕರು ಆನ್​ಲೈನ್​ ಮೂಲಕವೇ ಸಮಾರಂಭ ವೀಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ, ಸಲ್ಯೂಟ್ ಮಾಡಿದ ಸಚಿವ; ರಾಜೀನಾಮೆಗೆ ಪಟ್ಟು ಹಿಡಿದ ಬಿಜೆಪಿ

Published On - 5:07 pm, Wed, 26 January 22