ತೆಲಂಗಾಣ: ನಿದ್ರೆಗೆ ಜಾರಿದ ಚಾಲಕ, ಪಲ್ಟಿ ಹೊಡೆದ ಬಸ್​, ಹೊತ್ತಿಕೊಂಡ ಬೆಂಕಿ, ಮಹಿಳೆ ಸಜೀವದಹನ

ಚಾಲಕನ ನಿರ್ಲಕ್ಷ್ಯದಿಂದ ಬಸ್​ ಪಲ್ಟಿಯಾಗಿ, ಬೆಂಕಿ ಹೊತ್ತಿಕೊಂಡು ಮಹಿಳೆ ಸುಟ್ಟು ಕರಕಲಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯಲ್ಲಿ ಶನಿವಾರ ಚಿತ್ತೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಮಹಿಳಾ ಪ್ರಯಾಣಿಕರು ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತೆಲಂಗಾಣ: ನಿದ್ರೆಗೆ ಜಾರಿದ ಚಾಲಕ, ಪಲ್ಟಿ ಹೊಡೆದ ಬಸ್​, ಹೊತ್ತಿಕೊಂಡ ಬೆಂಕಿ, ಮಹಿಳೆ ಸಜೀವದಹನ
ಬೆಂಕಿ
Image Credit source: India Today

Updated on: Jan 13, 2024 | 12:15 PM

ಚಾಲಕನ ನಿರ್ಲಕ್ಷ್ಯದಿಂದ ಬಸ್​ ಪಲ್ಟಿಯಾಗಿ, ಬೆಂಕಿ ಹೊತ್ತಿಕೊಂಡು ಮಹಿಳೆ ಸುಟ್ಟು ಕರಕಲಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯಲ್ಲಿ ಶನಿವಾರ ಚಿತ್ತೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಮಹಿಳಾ ಪ್ರಯಾಣಿಕರು ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪೊಲೀಸರ ಪ್ರಕಾರ, ಶನಿವಾರ ಮುಂಜಾನೆ 3 ಗಂಟೆಗೆ ಜಗನ್ ಅಮೆಜಾನ್ ಟ್ರಾವೆಲ್ ಬಸ್ ಹೈದರಾಬಾದ್‌ನಿಂದ ಚಿತ್ತೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಸ್‌ನ ನಿಯಂತ್ರಣ ತಪ್ಪಿದ ಕಾರಣ ಚಾಲಕ ನಿದ್ರೆಗೆ ಜಾರಿದ ಕಾರಣ 40 ಪ್ರಯಾಣಿಕರಿದ್ದ ಖಾಸಗಿ ಬಸ್​ ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ರೈಲ್ವೆ ಎಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ, ಗೇಟ್​ಮ್ಯಾನ್ ಯಶ್​ಪಾಲ್​ ಸಮಯ ಪ್ರಜ್ಞೆಯಿಂದ ನಾರಾರು ಜೀವಗಳು ಅಪಾಯದಿಂದ ಪಾರು

ಕೂಡಲೇ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿದಿದ್ದಾರೆ. ಮಹಿಳೆಯೊಬ್ಬಳು ಬೆಂಕಿಯೊಳಗೆ ಸಿಕ್ಕಿಹಾಕಿಕೊಂಡಿದ್ದರಿಂದ ಕೆಳಗಿಳಿಯಲು ಸಾಧ್ಯವಾಗಲಿಲ್ಲ, ಬಸ್​ ಜೊತೆಯಲ್ಲೇ ಸುಟ್ಟುಹೋಗಿದ್ದಾರೆ. ಮೃತಪಟ್ಟ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ