AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪಚುನಾವಣೆ: 5 ವಿಧಾನಸಭೆ, 1 ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ: ಬಂಗಾಳದಲ್ಲಿ ಹೈವೋಲ್ಟೇಜ್ ಕದನ, ತಮಿಳುನಾಡಿನಲ್ಲಿ ವಿಜಯ್​ಗೆ ಟೆಸ್ಟ್

ದೇಶದ 6 ಕ್ಷೇತ್ರಗಳಿಗೆ (5 ವಿಧಾನಸಭೆ, 1 ಲೋಕಸಭೆ) ಉಪಚುನಾವಣೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳದ ನಂದಿಗ್ರಾಮ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಿದೆ. ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ಇದು ಮೊದಲ ಪ್ರಮುಖ ಪರೀಕ್ಷೆಯಾಗಿದೆ. ಅಸ್ಸಾಂನ ನಾಗಾಂವ್ ಕ್ಷೇತ್ರದಲ್ಲೂ ತೀವ್ರ ಸ್ಪರ್ಧೆ ಇದೆ. ಅಕ್ಟೋಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.

ಉಪಚುನಾವಣೆ: 5 ವಿಧಾನಸಭೆ, 1 ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ: ಬಂಗಾಳದಲ್ಲಿ ಹೈವೋಲ್ಟೇಜ್ ಕದನ, ತಮಿಳುನಾಡಿನಲ್ಲಿ ವಿಜಯ್​ಗೆ ಟೆಸ್ಟ್
ಚುನಾವಣೆ Image Credit source: ANI
ನಯನಾ ರಾಜೀವ್
|

Updated on:Oct 06, 2026 | 9:11 AM

Share

ನವದೆಹಲಿ, ಅಕ್ಟೋಬರ್ 06: ದೇಶದ ನಾಲ್ಕು ಪ್ರದೇಶಗಳಲ್ಲಿ ಇಂದು ಆರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಐದು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ, ತಮಿಳುನಾಡಿನ ಮಧುರಾಂತಕಂ ಮತ್ತು ಧಾರಾಪುರಂ, ಪುದುಚೇರಿಯ ಥಟ್ಟಂಚಾವಡಿ ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ ನಾಗಾಂವ್ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಮತಗಳ ಎಣಿಕೆ ಅಕ್ಟೋಬರ್ 9ರಂದು ನಡೆಯಲಿದೆ.

ನಂದಿಗ್ರಾಮದ ಮೇಲೆ ಎಲ್ಲರ ಕಣ್ಣು

ಪಶ್ಚಿಮ ಬಂಗಾಳದ ನಂದಿಗ್ರಾಮ್ ಉಪಚುನಾವಣೆ ಪ್ರಮುಖ ಕ್ಷೇತ್ರವಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ 2026ರ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಮತ್ತು ಭಬಾನಿಪುರ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು. ನಂತರ ಭಬಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮ ಸ್ಥಾನವನ್ನು ತೆರವುಗೊಳಿಸಿದ್ದರಿಂದ ಇಲ್ಲಿ ಉಪಚುನಾವಣೆ ಅನಿವಾರ್ಯವಾಯಿತು.

ಬಿಜೆಪಿ ನಂದಿಗ್ರಾಮ್‌ನಲ್ಲಿ ಹಸಿರಾಣಿ ರಥ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಮತ್ತು ಸಿಪಿಐ ಅಭ್ಯರ್ಥಿ ಸಂತಿಗೋಪಾಲ್ ಗಿರಿ ಕೂಡ ಸ್ಪರ್ಧೆಯಲ್ಲಿದ್ದಾರೆ. ತೃಣಮೂಲ ಕಾಂಗ್ರೆಸ್‌ನಲ್ಲೂ ಬಣಗಳಾಗಿ ಸ್ಪರ್ಧೆ ನಡೆಯುತ್ತಿರುವುದರಿಂದ ಈ ಕ್ಷೇತ್ರದ ಫಲಿತಾಂಶದ ಮೇಲೆ ಗಮನ ಹರಿಸಲಾಗಿದೆ.

ಮತ್ತಷ್ಟು ಓದಿ: ನಂದಿಗ್ರಾಮ ಉಪಚುನಾವಣೆ ಕದನ: ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್‌ಗೆ ಅಕ್ಟೋಬರ್ 21ರವರೆಗೆ ಮಧ್ಯಂತರ ಜಾಮೀನು

ರೆಜಿನಗರದಲ್ಲೂ ಬಹುಕೋನ ಸ್ಪರ್ಧೆ

ರೆಜಿನಗರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಸಿಪಿಐ(ಎಂ), ತೃಣಮೂಲ ಕಾಂಗ್ರೆಸ್‌ನ ವಿವಿಧ ಬಣಗಳು ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಕ್ಷೇತ್ರವೂ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.

ತಮಿಳುನಾಡಿನಲ್ಲಿ ವಿಜಯ್ ಪಕ್ಷಕ್ಕೆ ಮೊದಲ ಪ್ರಮುಖ ಪರೀಕ್ಷೆ

ತಮಿಳುನಾಡಿನ ಮಧುರಾಂತಕಂ ಮತ್ತು ಧಾರಾಪುರಂ ಕ್ಷೇತ್ರಗಳ ಉಪಚುನಾವಣೆ ನಟ-ರಾಜಕಾರಣಿ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)ಗೆ ಮೊದಲ ಪ್ರಮುಖ ಚುನಾವಣಾ ಪರೀಕ್ಷೆಯಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಟಿವಿಕೆ ಜೊತೆಗೆ ಡಿಎಂಕೆ, ಎಐಎಡಿಎಂಕೆ ಮತ್ತು ಸಿಪಿಐ ಸೇರಿದಂತೆ ಹಲವು ಪಕ್ಷಗಳು ಕಣದಲ್ಲಿವೆ. ಹೀಗಾಗಿ ವಿಜಯ್ ನೇತೃತ್ವದ ಪಕ್ಷಕ್ಕೆ ಈ ಉಪಚುನಾವಣೆ ತನ್ನ ಚುನಾವಣಾ ಬೆಂಬಲವನ್ನು ಅಳೆಯುವ ಪ್ರಮುಖ ಅವಕಾಶವಾಗಿದೆ.

ಪೋಸ್ಟ್

ನಾಗಾಂವ್‌ನಲ್ಲಿ ಬಿಜೆಪಿ–ಕಾಂಗ್ರೆಸ್–ಎಐಯುಡಿಎಫ್ ತ್ರಿಕೋನ ಸ್ಪರ್ಧೆ

ಅಸ್ಸಾಂನ ನಾಗಾಂವ್ ಲೋಕಸಭಾ ಕ್ಷೇತ್ರದಲ್ಲೂ ತೀವ್ರ ಸ್ಪರ್ಧೆ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಸಿಬಾಮೋನಿ ಬೋರಾ, ಬಿಜೆಪಿಯಿಂದ ದೇವಶಿಶ್ ಶರ್ಮಾ ಮತ್ತು ಎಐಯುಡಿಎಫ್ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ. ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಸಂಸದ ಪ್ರದ್ಯುತ್ ಬೊರ್ಡೊಲೊಯ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು. 2019 ಮತ್ತು 2024ರಲ್ಲಿ ನಾಗಾಂವ್ ಕ್ಷೇತ್ರವನ್ನು ಗೆದ್ದಿದ್ದ ಕಾಂಗ್ರೆಸ್‌ಗೆ ಸ್ಥಾನ ಉಳಿಸಿಕೊಳ್ಳುವುದು ಪ್ರಮುಖ ಸವಾಲಾಗಿದೆ.

ಪೋಸ್ಟ್

ಪುದುಚೇರಿಯಲ್ಲೂ ಮತದಾನ

ಪುದುಚೇರಿಯ ಥಟ್ಟಂಚಾವಡಿ ಕ್ಷೇತ್ರದಲ್ಲೂ ಇಂದು ಮತದಾನ ನಡೆಯುತ್ತಿದೆ. ಇಲ್ಲಿ ಎಐಎನ್​ಆರ್​ಸಿ ನೇತೃತ್ವದ ಎನ್​ಡಿಎ, ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಪ್ರಮುಖ ಸ್ಪರ್ಧೆ ಇದೆ. ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರು ಕ್ಷೇತ್ರಗಳ ಫಲಿತಾಂಶ ಅಕ್ಟೋಬರ್ 9ರಂದು ಪ್ರಕಟವಾಗಲಿದ್ದು, ವಿವಿಧ ಪಕ್ಷಗಳ ಚುನಾವಣಾ ಬೆಂಬಲಕ್ಕೆ ಇದು ಪ್ರಮುಖ ಸೂಚಕವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:02 am, Tue, 6 October 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More