ರಾಜ್ಯಸಭೆಯಲ್ಲಿ ಖಾಲಿ ಇರುವ 6 ಸ್ಥಾನಗಳಿಗೆ ಅಕ್ಟೋಬರ್ 4ರಂದು ಉಪಚುನಾವಣೆ (Rajya Sabha Bypolls) ನಡೆಸಲಾಗುವುದು ಎಂದು ಇಂದು ಚುನಾವಣಾ ಆಯೋಗ (Election Commission) ಘೋಷಿಸಿದೆ. ತಮಿಳುನಾಡಿನ ಎರಡು ರಾಜ್ಯಸಭಾ ಸ್ಥಾನ, ಪಶ್ಚಿಮ ಬಂಗಾಳದ ಒಂದು, ಅಸ್ಸಾಂ, ಮಧ್ಯಪ್ರದೇಶ, ಪುದುಚೇರಿ ಮತ್ತು ಮಹಾರಾಷ್ಟ್ರಗಳ ತಲಾ ಒಂದು ಸೀಟ್ಗಾಗಿ ಅಕ್ಟೋಬರ್ 4ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದರಲ್ಲೀಗ ಆರು ಸೀಟುಗಳು ಈಗಾಗಲೇ ಖಾಲಿ ಇದೆ. ಅದರಲ್ಲಿ ಪುದುಚೇರಿಯಲ್ಲಿ ಇನ್ನೂ ಖಾಲಿ ಆಗಿಲ್ಲ. ಆದರೆ ಪುದುಚೇರಿ ರಾಜ್ಯಸಭಾ ಸದಸ್ಯ ಎನ್. ಗೋಪಾಲಕೃಷ್ಣ ಅಕ್ಟೋಬರ್ 6ರಂದು ನಿವೃತ್ತ ಗೊಳ್ಳಲಿದ್ದು, ಆ ಸ್ಥಾನಕ್ಕೂ ಕೂಡ ಮುಂಚಿತವಾಗಿಯೇ, ಅಂದರೆ ಅಕ್ಟೋಬರ್ 4ರಂದು ಚುನಾವಣೆ ನಡೆಯಲಿದೆ ಎಂದು ಎಲೆಕ್ಷನ್ ಕಮಿಷನ್ ತಿಳಿಸಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ ಮತ್ತು ಅಸ್ಸಾಂ ನಿಂದ ಆಯ್ಕೆಯಾಗಿದ್ದ ರಾಜ್ಯ ಸಭಾ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಖಾಲಿ ಆಗಿದ್ದರೆ, ಮಹಾರಾಷ್ಟ್ರದಲ್ಲಿ, ರಾಜ್ಯಸಭಾ ಸದಸ್ಯ ರಾಜೀವ್ ಶಂಕರರಾವ್ ಸತಾವ್ ಮೃತರಾದ ಹಿನ್ನೆಲೆಯಲ್ಲಿ ಖಾಲಿಯಾಗಿತ್ತು. ಪಶ್ಚಿಮ ಬಂಗಾಳದ ಮಾನಸ್ ರಂಜನ್ ಭುನಿಯಾ, ಅಸ್ಸಾಂ ರಾಜ್ಯ ಸಭಾ ಸದಸ್ಯ ಬಿಸ್ವಜಿತ್ ದೈರ್ಮರ್ಯ, ತಮಿಳುನಾಡಿನ ಕೆ.ಪಿ.ಮುನುಸಾಮಿ ಮತ್ತು ಆರ್.ವೈಥಿಲಿಂಗಮ್ ಮತ್ತು ಮಧ್ಯಪ್ರದೇಶದ ಥಾವರ್ಚಾಂದ್ ಗೆಹ್ಲೋಟ್ ರಾಜೀನಾಮೆ ನೀಡಿದವರಾಗಿದ್ದಾರೆ.
ರಾಜ್ಯಸಭೆಯ ಒಟ್ಟು 7 ಸ್ಥಾನಗಳಿಗೆ ಉಪಚುನಾವಣೆ ನಡೆಯುವ ಜತೆಗೆ, ಬಿಹಾರದ ವಿಧಾನಪರಿಷತ್ನಲ್ಲಿರುವ ಒಂದು ಖಾಲಿ ಸ್ಥಾನಕ್ಕೂ ಅಕ್ಟೋಬರ್ 4ರಂದೇ ಉಪಚುನಾವಣೆ ನಡೆಯಲಿದೆ ಎಂದು ಇಸಿ ತಿಳಿಸಿದೆ. ಎಂಎಲ್ಸಿ ತನ್ವೀರ್ ಅಕ್ತರ್ ಮೇ 9ರಂದು ಮೃತರಾದ ಬಳಿಕ ಈ ಸೀಟ್ ಖಾಲಿಯಾಗಿತ್ತು. ಈ ಎಲ್ಲ ಉಪಚುನಾವಣೆಗಳ ಫಲಿತಾಂಶ ಅಕ್ಟೋಬರ್ 4ರಂದು ಸಂಜೆಯೇ ಘೋಷಣೆಯಾಗಲಿದೆ.
‘ದೇಶವಿರೋಧಿ’ ಉಪನ್ಯಾಸ, ಟೀಕೆಗಳು ಬೇಡ: ಸಿಬ್ಬಂದಿಗಳಿಗೆ ಸೂಚನೆ ನೀಡಿದ ಕೇರಳದ ಸೆಂಟ್ರಲ್ ಯುನಿವರ್ಸಿಟಿ
(Bypolls to 7 Rajya Sabha seats on October 4 announced By Election Commission)
Published On - 12:50 pm, Thu, 9 September 21