ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ರೈತರಿಗಾಗಿ ಒಟ್ಟು ರೂ.3,70,128.7 ಕೋಟಿಗಳ ವಿನೂತನ ಯೋಜನೆಗಳ ವಿಶಿಷ್ಟ ಪ್ಯಾಕೇಜ್ ಅನ್ನು ಅನುಮೋದಿಸಿದೆ. ಈ ಯೋಜನೆಗಳ ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಮೂಲಕ ರೈತರ ಒಟ್ಟಾರೆ ಯೋಗಕ್ಷೇಮ ಮತ್ತು ಆರ್ಥಿಕ ಸುಧಾರಣೆಗಾಗಿ ಇರುವುದಾಗಿದೆ. ಈ ಉಪಕ್ರಮಗಳು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಅದೇ ವೇಳೆ ನೈಸರ್ಗಿಕ ಅಥವಾ ಸಾವಯವ ಕೃಷಿಯನ್ನು ಬಲಪಡಿಸುತ್ತದೆ. ಮಣ್ಣಿನ ಉತ್ಪಾದಕತೆಯನ್ನು ಪುನರುಜ್ಜೀವನಗೊಳಿಸುವುದು ಮಾತ್ರವಲ್ಲದೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ.
ತೆರಿಗೆಗಳು ಮತ್ತು ಬೇವಿನ ಲೇಪನ ಶುಲ್ಕಗಳನ್ನು ಹೊರತುಪಡಿಸಿ. 242 ರೂಪಾಯಿಯ 45 ಕೆಜಿ ಬ್ಯಾಗ್ ಅದೇ ಬೆಲೆಯಲ್ಲಿ ನೀಡುವುದಕ್ಕಾಗಿ ಮತ್ತು ರೈತರಿಗೆ ಯೂರಿಯಾದ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಯೂರಿಯಾ ಸಬ್ಸಿಡಿ ಯೋಜನೆಯ ಮುಂದುವರಿಕೆಯನ್ನು ಸಿಸಿಇಎ ಅನುಮೋದಿಸಿತು. ಮೇಲಿನ ಅನುಮೋದಿತ ಪ್ಯಾಕೇಜ್‌ನಲ್ಲಿ ಮೂರು ವರ್ಷಗಳವರೆಗೆ (2022-23 ರಿಂದ 2024-25) ಯೂರಿಯಾ ಸಬ್ಸಿಡಿಗಾಗಿ 3,68,676.7 ಕೋಟಿ ರೂ. ತೆಗೆದಿಡಲಾಗುತ್ತದೆ.
ಇದು 2023-24ರ ಖಾರಿಫ್ ಋತುವಿಗಾಗಿ ಇತ್ತೀಚೆಗೆ ಅನುಮೋದಿಸಲಾದ 38,000 ಕೋಟಿ ರೂ.ಗಳ ಪೋಷಕಾಂಶ ಆಧಾರಿತ ಸಬ್ಸಿಡಿಯನ್ನು ಹೊರತುಪಡಿಸಿರುವುದಾಗಿದೆ. ರೈತರು ಯೂರಿಯಾ ಖರೀದಿಗೆ ಹೆಚ್ಚುವರಿ ಖರ್ಚು ಮಾಡಬೇಕಾಗಿಲ್ಲ. ಇದು ಅವರ ವೆಚ್ಚವನ್ನು ಮಿತಗೊಳಿಸಲು ಸಹಾಯ ಮಾಡುತ್ತದೆ. ಪ್ರಸ್ತುತ, 45ಕೆಜಿ ಬ್ಯಾಗ್ ಯೂರಿಯಾ ಬೆಲೆ 242 ಆಗಿದ್ದು, ಇದರ ನಿಜವಾದ ಬೆಲ 2200 ಆಗಿದೆ.
ಈ ಯೋಜನೆಯು ಸಂಪೂರ್ಣವಾಗಿ ಭಾರತ ಸರ್ಕಾರದಿಂದ ಬಜೆಟ್ ಬೆಂಬಲದ ಮೂಲಕ ಹಣಕಾಸು ಒದಗಿಸುತ್ತದೆ. ಯೂರಿಯಾ ಸಬ್ಸಿಡಿ ಯೋಜನೆಯ ಮುಂದುವರಿಕೆಯು ಸ್ವಾವಲಂಬನೆಯ ಮಟ್ಟವನ್ನು ತಲುಪಲು ಯೂರಿಯಾದ ಸ್ಥಳೀಯ ಉತ್ಪಾದನೆಯನ್ನು ಗರಿಷ್ಠಗೊಳಿಸುತ್ತದೆ.
ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಹೆಚ್ಚಿದ ಕಚ್ಚಾ ವಸ್ತುಗಳ ಬೆಲೆಗಳಿಂದಾಗಿ, ಗೊಬ್ಬರದ ಬೆಲೆಗಳು ವರ್ಷಗಳಲ್ಲಿ ಜಾಗತಿಕವಾಗಿ ಹೆಚ್ಚಾಗುತ್ತಲೇ ಇವೆ.
ನಮ್ಮ ರೈತರನ್ನು ರಕ್ಷಿಸುವ ಪ್ರಯತ್ನದಲ್ಲಿ, ಭಾರತ ಸರ್ಕಾರವು ರಸಗೊಬ್ಬರ ಸಬ್ಸಿಡಿಯನ್ನು ರೂ. 2014-15ರಲ್ಲಿ 73,067 ಕೋಟಿ ರೂ. 2022-23ರಲ್ಲಿ 2,54,799 ಕೋಟಿ ಏರಿಕೆ ಮಾಡಿದೆ. 2025-26 ರ ವೇಳೆಗೆ, ಎಂಟು ನ್ಯಾನೋ ಯೂರಿಯಾ ಸ್ಥಾವರಗಳು 44 ಕೋಟಿ ಬಾಟಲಿಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ 195 ಲಕ್ಷ ಮೆಟ್ರಿಕ್ ಟನ್ ಯೂರಿಯಾಕ್ಕೆ ಸಮನಾಗಿರುತ್ತದೆ. ನ್ಯಾನೊ ರಸಗೊಬ್ಬರವು ನಿಯಂತ್ರಿತ ರೀತಿಯಲ್ಲಿ ಪೋಷಕಾಂಶ ಹೊಂದಿದ್ದು, ವೆಚ್ಚವೂ ಕಡಿಮೆ. ನ್ಯಾನೋ ಯೂರಿಯಾದ ಬಳಕೆಯು ಬೆಳೆ ಇಳುವರಿಯಲ್ಲಿ ಹೆಚ್ಚಳವನ್ನು ತೋರಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ