ಮೈಸೂರು: ಅಮೆರಿಕದಲ್ಲಿ ಅಪರಿಚಿತ ಗುಂಡಿನ ದಾಳಿಗೆ ಮೈಸೂರಿನ ಯುವಕ ಬಲಿಯಾಗಿದ್ದಾನೆ. ಮೈಸೂರಿನ ಕುವೆಂಪು ನಗರದ ಯೋಗ ಶಿಕ್ಷಕ ಸುದೇಶ್ ಎಂಬುವವರ ಪುತ್ರ 25 ವರ್ಷ ವಯಸ್ಸಿನ ಅಭಿಷೇಕ್ ಬಲಿಯಾದ ಯುವಕ. ಒಂದೂವರೆ ವರ್ಷದ ಹಿಂದೆ ಓದಲು ಎಂದು ವಿದೇಶಕ್ಕೆ ತೆರಳಿದ್ದ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ಅಲ್ಲದೆ ಬಿಡುವಿನ ವೇಳೆ ಕ್ಯಾಲಿಫೋರ್ನಿಯಾ ಬಳಿಯ ಸನ್ ಬೆರ್ನಾರ್ಡಿನೋ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ.
ನಿನ್ನೆ ಬೆಳಗ್ಗೆ ಕೆಲಸ ಮುಗಿಸಿ ವಾಪಸಾಗುವಾಗ ಗುಂಡಿನ ದಾಳಿ ನಡೆದಿದೆ. ಅಪರಿಚಿತರ ಗುಂಡಿನ ದಾಳಿಗೆ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕ್ಯಾಲಿಫೋರ್ನಿಯಾದಿಂದ ಮೃತದೇಹ ತರಲು ಅಭಿಷೇಕ್ ಕುಟುಂಬಸ್ಥರ ಪರದಾಡುತ್ತಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.