ಹಿಂದೂ ಹಾಗೂ ಜೈನ ಸಮುದಾಯದ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಮಧ್ಯಪ್ರದೇಶದ ಹೈಕೋರ್ಟ್ ಹೇಳಿದೆ.
ದಾಮೋದರ್ ಗಂಗಾ ಜಮುನಾ ಶಾಲೆಯಲ್ಲಿ ಹಿಜಾಬ್ ಧರಿಸಲು ಒತ್ತಾಯಿಸಿದ ಆರೋಪದ ಮೇಲೆ ಪ್ರಾಂಶುಪಾಲೆ ಹಾಗೂ ಇತರ ಮೂವರ ಮೇಲೆ ದೂರು ದಾಖಲಾಗಿತ್ತು. ಇದೀಗ ಮಧ್ಯಪ್ರದೇಶ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮಕ್ಕಳು ಬಿಂದಿ ಇಡುವುದು ಸೇರಿದಂತೆ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಆಚರಣೆಯನ್ನೂ ತಡೆಯುವಂತಿಲ್ಲ, ಒಂದೊಮ್ಮೆ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದುಗೊಳಿಸುವುದಾಗಿ ನ್ಯಾಯಾಲಯ ಹೇಳಿದೆ. ಗಂಗಾ ಜಮುನಾ ಶಾಲೆಯ ಮುಖ್ಯೋಪಾಧ್ಯಾಯ ಅಸ್ಫಾ ಶೇಖ್, ಶಿಕ್ಷಕ ಅನಾಸ್ ಅತಾರ್ ಮತ್ತು ಪ್ಯೂನ್ ರುಸ್ತಮ್ ಅಲಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.
ಆರೋಪಿಗಳು ಜೂನ್ 11 ರಂದು 295 ಎ, 506, 120 ಬಿ, ಬಾಲಾಪರಾಧಿ ಕಾಯ್ದೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ ಅಡಿಯಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ನರ್ಸರಿಯಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿನಿಯರಿಗೆ ಸಲ್ವಾರ್ ಸೂಟ್ ಮತ್ತು ಸ್ಕಾರ್ಫ್‌ಗಳನ್ನು ಧರಿಸುವಂತೆ ಒತ್ತಾಯಿಸಿದ ಆರೋಪ ಅವರ ಮೇಲಿದೆ.
ಮತ್ತಷ್ಟು ಓದಿ: ಇಂಡೋನೇಷ್ಯಾ: ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂದು 14 ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕರು
ಶಾಲೆಯಲ್ಲಿ ಪ್ರತಿಯೊಬ್ಬರಿಗೂ ಮುಸ್ಲಿಂ ಪ್ರಾರ್ಥನೆ ಮತ್ತು ಉರ್ದು ಭಾಷೆ ಕಲಿಕೆ ಕಡ್ಡಾಯವಾಗಿತ್ತು. ವಿದ್ಯಾರ್ಥಿಗಳು ತಿಲಕವನ್ನು ಹಚ್ಚುವುದನ್ನು ನಿಷೇಧಿಸಲಾಗಿತ್ತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮನೀಶ್ ದತ್, ಡ್ರೆಸ್ ಕೋಡ್ ಅನ್ನು ಶಾಲಾ ಸಮಿತಿ ನಿರ್ಧರಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಮುಖ್ಯವಾಗಿ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿದೆ ಎಂಬ ಆರೋಪವಿದೆ. ಅರ್ಜಿದಾರರು ಭವಿಷ್ಯದಲ್ಲಿ ಈ ಕೃತ್ಯವನ್ನು ಮಾಡಬಾರದು, ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತೆ ಒತ್ತಾಯಿಸಬಾರದು. ಪ್ರೌಢ ಶಿಕ್ಷಣ ಮಂಡಳಿ ನಿಗದಿಪಡಿಸಿದ ಪಠ್ಯಕ್ರಮದ ಪ್ರಕಾರ ಶಿಕ್ಷಣ ನೀಡಬೇಕು, ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡಬೇಕು, ಧಾರ್ಮಿಕ ಶಿಕ್ಷಣವಲ್ಲ. ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದುಗೊಳಿಸಲಾಗುವುದು ಎಂದು ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Thu, 31 August 23