ಮಗಳು ಹುಟ್ಟಿದ ನೆನಪಿಗೆ ಶ್ರೀಗಂಧದ ಗಿಡ ನೆಡ್ತಾರೆ, ಆ ಮರವನ್ನೇ ಮಾರಾಟ ಮಾಡಿ ಆಕೆಯ ಮದುವೆ ಮಾಡ್ತಾರೆ, ಹೀಗೊಂದು ವಿಭಿನ್ನ ಪರಂಪರೆ

ಅಯ್ಯೋ ಹೆಣ್ಣುಮಗು ಹುಟ್ಟಿದೆ ಖರ್ಚು ಹೆಚ್ಚು, ಇನ್ನೆಷ್ಟು ವರದಕ್ಷಿಣೆ ಕೊಡಬೇಕಾಗುತ್ತೋ ಎಂದು ಮಗು ಹುಟ್ಟಿದಾಗಿನಿಂದ ಮದುವೆಯಾಗುವವರೆಗೂ ಜರಿಯುತ್ತಲೇ ಇರುತ್ತಾರೆ. ಆದರೆ ಬಿಹಾರದ ಈ ಹಳ್ಳಿಯಲ್ಲಿದೆ ವಿಭಿನ್ನ ಸಂಪ್ರದಾಯ. ಹೆಣ್ಣು ಮಗು ಹುಟ್ಟಿದೆ ಎಂದು ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ, ಹೆಣ್ಣು ಮಗು ಹುಟ್ಟಿದ ಮನೆಯ ಹೊರಗೆ ಒಂದು ಶ್ರೀಗಂಧದ ಗಿಡವನ್ನು ನೆಡುತ್ತಾರೆ, ಅದು ಬೃಹತ್ ಮರವಾಗಿ ಬೆಳೆಯುವಷ್ಟರಲ್ಲಿ ಇತ್ತ ಮಗಳು ಕೂಡ ಮದುವೆಯ ವಯಸ್ಸಿನವಳಾಗಿರುತ್ತಾಳೆ. ಆಗ ಮರವನ್ನು ಕಡಿದು ಮಾರಾಟ ಮಾಡಿ ಅದೇ ದುಡ್ಡಿನಲ್ಲಿ ಖುಷಿಯಿಂದ ಮಗಳ ಮದುವೆ ಮಾಡಿಕೊಡುತ್ತಾರೆ.

ಮಗಳು ಹುಟ್ಟಿದ ನೆನಪಿಗೆ ಶ್ರೀಗಂಧದ ಗಿಡ ನೆಡ್ತಾರೆ, ಆ ಮರವನ್ನೇ ಮಾರಾಟ ಮಾಡಿ ಆಕೆಯ ಮದುವೆ ಮಾಡ್ತಾರೆ, ಹೀಗೊಂದು ವಿಭಿನ್ನ ಪರಂಪರೆ
ಮೀರಾ ದೇವಿ
Follow us
ನಯನಾ ರಾಜೀವ್
|

Updated on: Aug 31, 2023 | 1:59 PM

ಅಯ್ಯೋ ಹೆಣ್ಣುಮಗು ಹುಟ್ಟಿದೆ ಖರ್ಚು ಹೆಚ್ಚು, ಇನ್ನೆಷ್ಟು ವರದಕ್ಷಿಣೆ ಕೊಡಬೇಕಾಗುತ್ತೋ ಎಂದು ಮಗು ಹುಟ್ಟಿದಾಗಿನಿಂದ ಮದುವೆಯಾಗುವವರೆಗೂ ಜರಿಯುತ್ತಲೇ ಇರುತ್ತಾರೆ. ಆದರೆ ಬಿಹಾರದ ಈ ಹಳ್ಳಿಯಲ್ಲಿದೆ ವಿಭಿನ್ನ ಸಂಪ್ರದಾಯ. ಹೆಣ್ಣು ಮಗು ಹುಟ್ಟಿದೆ ಎಂದು ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ, ಹೆಣ್ಣು ಮಗು ಹುಟ್ಟಿದ ಮನೆಯ ಹೊರಗೆ ಒಂದು ಶ್ರೀಗಂಧದ ಗಿಡವನ್ನು ನೆಡುತ್ತಾರೆ, ಅದು ಬೃಹತ್ ಮರವಾಗಿ ಬೆಳೆಯುವಷ್ಟರಲ್ಲಿ ಇತ್ತ ಮಗಳು ಕೂಡ ಮದುವೆಯ ವಯಸ್ಸಿನವಳಾಗಿರುತ್ತಾಳೆ. ಆಗ ಮರವನ್ನು ಕಡಿದು ಮಾರಾಟ ಮಾಡಿ ಅದೇ ದುಡ್ಡಿನಲ್ಲಿ ಖುಷಿಯಿಂದ ಮಗಳ ಮದುವೆ ಮಾಡಿಕೊಡುತ್ತಾರೆ.

ಗ್ರಾಮದ ಜನರು ಈ ಸಂಪ್ರದಾಯವನ್ನು ಅನುಸರಿಸುತ್ತಾರೆ ಮತ್ತು ನೆಟ್ಟ ಶ್ರೀಗಂಧದ ಮರವನ್ನು ರಕ್ಷಿಸುತ್ತಾರೆ. ಮಾಹಿತಿಯ ಪ್ರಕಾರ, ಈ ಸಂಪ್ರದಾಯವು ಬಿಹಾರದ ವೈಶಾಲಿ ಜಿಲ್ಲೆಯ ಬಿದೂರ್‌ಪುರದಿಂದ ಬಂದಿದೆ. ಪಕೋಲಿ ಎಂಬ ಹೆಸರಿನ ಗ್ರಾಮವಿದೆ, ಈ ಗ್ರಾಮದಲ್ಲಿ ನೀವು ಅನೇಕ ಜನರ ಮನೆಗಳ ಹೊರಗೆ ಶ್ರೀಗಂಧದ ಗಿಡಗಳನ್ನು ನೆಡುವುದನ್ನು ಕಾಣಬಹುದು.

ಈ ಕುರಿತು ಗ್ರಾಮದ ಮಹಿಳೆ ಮೀರಾದೇವಿ ಅವರೊಂದಿಗೆ ಚರ್ಚಿಸಿದಾಗ, ಈ ಗ್ರಾಮದಲ್ಲಿ ಸುಮಾರು 700 ಮನೆಗಳಿವೆ. ಪ್ರತಿ ಬಾಗಿಲಲ್ಲೂ ಒಂದರಿಂದ ನಾಲ್ಕು ಶ್ರೀಗಂಧದ ಮರಗಳನ್ನು ನೆಡಲಾಗಿದೆ. ಮಗಳ ಮದುವೆಗೆ ಹಣವಿಲ್ಲದಿದ್ದರೆ, ಹುಟ್ಟಿದ ಸಮಯದಲ್ಲಿ ನೆಟ್ಟ ಮರವನ್ನು ಮಾರಾಟ ಮಾಡುವ ಮೂಲಕ ಅವಳ ಮದುವೆಗೆ ಖರ್ಚು ಮಾಡಲಾಗುವುದು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಒಂದೇ ರಾತ್ರಿಯಲ್ಲಿ ಬೆಂಗಳೂರಿನ ಸಿಎಂಟಿಐ ಕ್ಯಾಂಪಸ್‌ನಿಂದ 23 ಶ್ರೀಗಂಧದ ಮರಗಳ ಕಳ್ಳತನ

ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಅತ್ಯಂತ ಶ್ರೇಯಸ್ಸು ಭಾವಿಸುವ ಮೀರಾದೇವಿ, ಶ್ರೀಗಂಧದ ಗಿಡವನ್ನು ನೆಟ್ಟರೆ ಅದಕ್ಕೂ ಪುಣ್ಯ ಬರುತ್ತದೆ ಎಂದು ನಮ್ಮ ಪೂರ್ವಜರು ಹೇಳುತ್ತಾರೆ. ಹೆಣ್ಣು ಮಗುವಿನ ಜನನದೊಂದಿಗೆ ಶ್ರೀಗಂಧದ ಗಿಡವನ್ನು ನೆಡಲು ಇದು ಕಾರಣವಾಗಿದೆ. ಯಾರದೋ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಶ್ರೀಗಂಧದ ಗಿಡವನ್ನು 5-6 ತಿಂಗಳ ನಂತರ ನೆಟ್ಟು ಅದನ್ನು ಯಾರೂ ಕದಿಯದಂತೆ, ಹಾನಿ ಮಾಡದಂತೆ ಸಂರಕ್ಷಿಸುತ್ತಾರೆ.

ಮೀರಾದೇವಿಯವರ ಮನೆಯ ಹೊರಗೆ ನಾಲ್ಕು ಶ್ರೀಗಂಧದ ಗಿಡಗಳನ್ನು ನೆಡಲಾಗಿದೆ. ಮೀರಾದೇವಿ ಅವರ ಮೊಮ್ಮಗಳು ಹುಟ್ಟಿದಾಗ ಈ ಗಿಡಗಳನ್ನು ನೆಡಲಾಗಿದೆ. ತಮ್ಮ ಗ್ರಾಮದಲ್ಲಿ ಹಲವು ತಲೆಮಾರುಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ