ರಸ್ತೆಯಲ್ಲಿ ದಿಢೀರನೆ ಕಾರು ನಿಲ್ಲಿಸಿ, ಏಕಾಏಕಿ ಬಾಗಿಲು ತೆರೆದ ಚಾಲಕ: ಪಕ್ಕದಲ್ಲಿಯೇ ಬೈಕ್ ಮೇಲೆ ಹೋಗುತ್ತಿದ್ದ ಮಗು… ಬಾರದ ಲೋಕಕ್ಕೆ ಪಯಣ

| Updated By: ಸಾಧು ಶ್ರೀನಾಥ್​

Updated on: Jun 02, 2023 | 3:31 PM

Car Accident: ಅಲ್ಪಸ್ವಲ್ಪ ಡ್ರೈವಿಂಗ್ ಕಲಿತಿದ್ದರೂ ಸಾಕು.. ಡ್ರೈವರ್ ಸೀಟಿನಲ್ಲಿ ಕುಳಿತುಬಿಡುತ್ತಾರೆ ಬೇಜವಾಬ್ದಾರಿ ಜನ. ಕನಿಷ್ಠ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಈಗ ಹೋದ ಜೀವಕ್ಕೆ ಯಾರು ಹೊಣೆ? ಆ ತಾಯಿಯ ಸಂಕಟವನ್ನು ದೂರ ಮಾಡುವವರು ಯಾರು?

ರಸ್ತೆಯಲ್ಲಿ ದಿಢೀರನೆ ಕಾರು ನಿಲ್ಲಿಸಿ, ಏಕಾಏಕಿ ಬಾಗಿಲು ತೆರೆದ ಚಾಲಕ: ಪಕ್ಕದಲ್ಲಿಯೇ ಬೈಕ್ ಮೇಲೆ ಹೋಗುತ್ತಿದ್ದ ಮಗು... ಬಾರದ ಲೋಕಕ್ಕೆ ಪಯಣ
ಬೈಕ್ ಮೇಲೆ ಹೋಗುತ್ತಿದ್ದ ಮಗು... ಬಾರದ ಲೋಕಕ್ಕೆ ಪಯಣ
Follow us on

ಅಸಡ್ಡೆ, ಬೇಜವಾಬ್ದಾರಿ, ನಿರ್ಲರ್ಕ್ಷ್ಯದ ಪರಮಾವಧಿ ಇದು. ಅವನು ಕಾರನ್ನು ರಸ್ತೆಯಲ್ಲಿ ದಿಢೀರನೆ ನಿಲ್ಲಿಸಿಬಿಟ್ಟ. ಹಿಂದೆ ಬರುತ್ತಿದ್ದ ವಾಹನಗಳತ್ತ ಗಮನ ಹರಿಸದೆ ಬಾಗಿಲು ತೆರೆದು ಕೆಳಗಿಳಿದಿದ್ದ ಆ ಕಾರು ಚಾಲಕ (Car Accident). ಇದರಿಂದ ಹಿಂದಿನಿಂದ ಬೈಕ್ ನಲ್ಲಿ ಮಗುವಿನೊಂದಿಗೆ ತೆರಳುತ್ತಿದ್ದ ದಂಪತಿ ಶಶಿರೇಖಾ ಮತ್ತು ಸೈಯದ್ ಅಪಘಾತಕ್ಕೀಡಾಗಿದ್ದಾರೆ (Bike Mishap). ಕಾರಿನ ಬಾಗಿಲು ತಾಯಿ ಮತ್ತು ಮಗುವಿಗೆ (baby girl) ಬಡಿದಿದೆ. ಧನಲಕ್ಷ್ಮಿ (2) ಎಂಬ ಮುದ್ದಾದ ಮಗು ತೀವ್ರ ಗಾಯಗೊಂಡು ಮೃತಪಟ್ಟಿದ್ದಾಳೆ. ತಾಯಿ ಶಶಿರೇಖಾ ಸ್ಥಿತಿ ಚಿಂತಾಜನಕವಾಗಿದೆ. ಹೈದರಾಬಾದ್‌ನ ಎಲ್‌ಬಿ ನಗರದಲ್ಲಿ (ಲಾಲ್ ಬಹದ್ದೂರ್ ಶಾಸ್ತ್ರಿ ನಗರ) ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ.

ಅಲ್ಪಸ್ವಲ್ಪ ಡ್ರೈವಿಂಗ್ ಕಲಿತಿದ್ದರೂ ಸಾಕು.. ಡ್ರೈವರ್ ಸೀಟಿನಲ್ಲಿ ಕುಳಿತುಬಿಡುತ್ತಾರೆ ಬೇಜವಾಬ್ದಾರಿ ಜನ. ಕನಿಷ್ಠ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಈಗ ಹೋದ ಜೀವಕ್ಕೆ ಯಾರು ಹೊಣೆ? ಆ ತಾಯಿಯ ಸಂಕಟವನ್ನು ದೂರ ಮಾಡುವವರು ಯಾರು? ಇಷ್ಟಕ್ಕೂ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಆ ತಾಯಿ ಸುರಕ್ಷಿತವಾಗಿ ಮನೆಗೆ ಬರುತ್ತಾರಾ? ಚಿಕ್ಕ ಕುಟುಂಬವೊಂದು ಕ್ಷಣ ಮಾತ್ರದಲ್ಲಿ ಇಷ್ಟು ದೊಡ್ಡ ದುರಂತವನ್ನು ಎದುರಿಸಿದ್ದು ಕಾರು ಚಾಲಕನ ತಪ್ಪಲ್ಲವೇ..?

Also Read: ಫಸ್ಟ್​​​ ನೈಟ್​​​ ನಡೆಯುವುದಕ್ಕೂ ಮುನ್ನ, ಶೋಭನದ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಹೌದು ತಪ್ಪು ತಪ್ಪೇ.. ಅದಕ್ಕೇ ಜನ ಸಿಟ್ಟು ಮಾಡಿಕೊಂಡರೆ ತನಗೆ ಉಳಿಗಾಲವಿಲ್ಲ ಅಂತಾ ಆ ಬೇಜವಾಬ್ದಾರಿ ಚಾಲಕ ಕಾರನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾನೆ. ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿದ್ದಕ್ಕೆ ನೆಟ್ಟಿಗರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದಿದ್ದಾರೆ. ಈ ಮಧ್ಯೆ, ಹಯಾತ್​​ ನಗರ ಪೊಲೀಸರು (Hayathnagar Police) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ