ರಾಜಸ್ಥಾನದಲ್ಲಿ ಕಾರು-ಟ್ರಕ್ ಡಿಕ್ಕಿಹೊಡೆದು ಅಪಘಾತ: 5 ಮಂದಿ ಸಾವು

ರಾವತ್ಸರ್-ಸರ್ದರ್ಶಹರ್ ಹೆದ್ದಾರಿಯ ಬಿಸ್ರಾಸರ್ ಗ್ರಾಮದ ಬಳಿ ಶನಿವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ರಾಜಸ್ಥಾನದಲ್ಲಿ ಕಾರು-ಟ್ರಕ್ ಡಿಕ್ಕಿಹೊಡೆದು ಅಪಘಾತ: 5 ಮಂದಿ ಸಾವು
ಸಾಂದರ್ಭಿಕ ಚಿತ್ರ
Updated By: ರಶ್ಮಿ ಕಲ್ಲಕಟ್ಟ

Updated on: Jan 01, 2023 | 1:39 PM

ಜೈಪುರ: ರಾಜಸ್ಥಾನದ (Rajasthan) ಹನುಮಾನ್‌ಗಢ (Hanumangarh)ಜಿಲ್ಲೆಯಲ್ಲಿ ಇಟ್ಟಿಗೆ ಸಾಗಿಸುತ್ತಿದ್ದ ಟ್ರಕ್‌ಗೆ ಕಾರೊಂದು ಡಿಕ್ಕಿ ಹೊಡೆದ (Accident) ಪರಿಣಾಮ ಐವರು ಸಾವಿಗೀಡಾಗಿದ್ದು, ಒಬ್ಬರಿಗೆ ಗಾಯವಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ರಾವತ್ಸರ್-ಸರ್ದರ್ಶಹರ್ ಹೆದ್ದಾರಿಯ ಬಿಸ್ರಾಸರ್ ಗ್ರಾಮದ ಬಳಿ ಶನಿವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಬಿಕಾನೆರ್‌ಗೆ ಕಳುಹಿಸಲಾಗಿದೆ ಎಂದು ಎಂದು ಪಲ್ಲು ಠಾಣಾಧಿಕಾರಿ ಗೋಪಿ ರಾಮ್ ತಿಳಿಸಿದ್ದಾರೆ. ಟ್ರಕ್ ಪಲ್ಲುವಿನಿಂದ ಸರ್ದರ್ಶಹರ್ ಕಡೆಗೆ ಹೋಗುತ್ತಿದ್ದು, ಕಾರು ಬಿಸ್ರಾಸರ್ ಗ್ರಾಮದಿಂದ ಹೆದ್ದಾರಿಗೆ ಬಂದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.


ಮೃತರನ್ನು ರಾಜು ಮೇಘವಾಲ್, ನರೇಶ್ ಕುಮಾರ್, ದನರಾಮ್, ಬಬ್ಲು ಮತ್ತು ಮುರಳಿ ಶರ್ಮಾ ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಶ್ರೀ ರಾಮ್ ಹೇಳಿದ್ದಾರೆ.

ಮತ್ತಷ್ಟು  ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 1:17 pm, Sun, 1 January 23