ಅಲಪ್ಪುಳ: ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಕೇರಳದ ( Kerala) ಅಲಪ್ಪುಳ (Alappuzha) ಜಿಲ್ಲೆಯ ಅಂಬಲಪುಳ ಬಳಿ ಸೋಮವಾರ ನಸುಕಿನ ವೇಳೆ ನಡೆದಿದೆ. ಇವರಲ್ಲಿ ನಾಲ್ವರು ತಿರುವನಂತಪುರಂ ಮೂಲದವರಾಗಿದ್ದು, ನಗರದ ಇಸ್ರೋ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಆಂಧ್ರಪ್ರದೇಶದಿಂದ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಐವರು ಪ್ರಯಾಣಿಸುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಮತ್ತೊಬ್ಬರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನು ಓದಿ:Odisha Bus Accident: ಆಯತಪ್ಪಿ ಸೇತುವೆಯಿಂದ ಕೆಳಗೆ ಹಾರಿದ ಬಸ್, ಇಬ್ಬರು ಸಾವು, ಹಲವರಿಗೆ ಗಾಯ
Kerala | 5 youths killed in an accident after their car collided with a lorry that was going towards Thiruvananthapuram near Ambalappuzha in Alappuzha dist. 4 of them died on spot while 1 died in hospital. Incident happened late at night on national highway: Ambalappuzha Police
— ANI (@ANI) January 23, 2023
ಅಂಬಲಪುಳ ಪೊಲೀಸರ ಪ್ರಕಾರ, ಐವರು ಕಾರಿನಲ್ಲಿದ್ದರು. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ಇಸ್ರೋ ಕ್ಯಾಂಟೀನ್ ನಡೆಸುತ್ತಿದ್ದು, ಅವರಲ್ಲಿ ನಾಲ್ವರು ತಿರುವನಂತಪುರಂ ಮೂಲದವರು ಮತ್ತು ಒಬ್ಬರು ಕೇರಳದ ಕೊಲ್ಲಂ ಜಿಲ್ಲೆಯವರು. ಮೃತರನ್ನು ಪ್ರಸಾದ್, ಶಿಜು, ಅಮಲ್, ಸಚಿನ್ ಮತ್ತು ಸುಮೋದ್ ಎಂದು ಗುರುತಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು, ಘಟನೆ ಮತ್ತು ತೆಗೆದುಕೊಂಡ ಕ್ರಮದ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ನೀಡಬೇಕಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:47 am, Mon, 23 January 23