Tamil Nadu Crane Collapse: ದೇವಸ್ಥಾನದ ಮೈಲಾರ ಉತ್ಸವದಲ್ಲಿ ಕ್ರೇನ್ ಕುಸಿದು ನಾಲ್ವರು ಸಾವು, 9 ಮಂದಿಗೆ ಗಾಯ
ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಬಿದ್ದು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಭಯಾನಕ ಘಟನೆಯು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ ಮತ್ತು ಕ್ರೇನ್ ಬೀಳುತ್ತಿದ್ದಂತೆ ಜನರು ಭಯಭೀತರಾಗಿದ್ದನ್ನು ಕೂಡ ದೃಶ್ಯಾವಳಿದಲ್ಲಿ ಕಾಣಬಹುದು.
ಅರಕ್ಕೋಣಂ: ಭಾನುವಾರ ರಾತ್ರಿ ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಬಿದ್ದು (crane collapse) ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯು ತಮಿಳುನಾಡು, (Tamil Nadu) ರಾಣಿಪೇಟ್ ಜಿಲ್ಲೆಯ, ಕಿಲಿವೀಡಿ ಮಂಡಿಯಮ್ಮನ ದೇವಸ್ಥಾನದ ಮೈಲಾರ ಉತ್ಸವದಲ್ಲಿ ನಡೆದಿದೆ. ಭಯಾನಕ ಘಟನೆಯು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ ಮತ್ತು ಕ್ರೇನ್ ಬೀಳುತ್ತಿದ್ದಂತೆ ಜನರು ಭಯಭೀತರಾಗಿದ್ದನ್ನು ಕೂಡ ದೃಶ್ಯಾವಳಿದಲ್ಲಿ ಕಾಣಬಹುದು. ದಿ ಹಿಂದೂ ಪ್ರಕಾರ ಈ ಘಟನೆ ರಾತ್ರಿ 8:15 ಕ್ಕೆ ನಡೆದಿದೆ. ಮೃತರನ್ನು ಬಿ.ಜೋತಿಬಾಬು (17) ಎಸ್.ಭೂಪಾಲನ್(40) ಮತ್ತು ಕೆ. ಮುತ್ತುಕುಮಾರ್, (39) ಎಂದು ಪೊಲೀಸರು ಗುರುತಿಸಿದ್ದಾರೆ.
ಸಾಂಪ್ರದಾಯಿಕ ಹಬ್ಬ ಪೊಂಗಲ್ಪ್ರತಿಯ ಪ್ರಯುಕ್ತ ದೇವಾಲಯದ ಉತ್ಸವದ ಸಮಯದಲ್ಲಿ ಭಕ್ತರು ದೇವರಿಗೆ ತಮ್ಮ ಭಕ್ತಿಯನ್ನು ಪ್ರಾರ್ಥನೆ ಮಾಡಲು ಕ್ರೇನ್‌ನಿಂದ ನೇತಾಡುತ್ತಾರೆ ಮತ್ತು ದೇವತೆಗಳಿಗೆ ಹಾರ ಹಾಕುತ್ತಾರೆ. ಈ ವೇಳೆ ಕ್ರೇನ್ ಕುಸಿದು ಈ ಭೀಕರ ಘಟನೆ ನಡೆದಿದೆ.
ಕ್ರೇನ್ ದೇವರ ವಿಗ್ರಹವನ್ನು ಹೊತ್ತೊಯ್ಯುತ್ತಿದ್ದಂತೆ ಗ್ರಾಮಸ್ಥರು ಹೂಮಾಲೆ ಮತ್ತು ಪ್ರಾರ್ಥನೆ ಮಾಡುತ್ತಿದಂತೆ ಕ್ರೇನ್ ಕುಸಿದ್ದು ಬಿದ್ದಿದೆ. ಭೀಕರ ದುರಂತದ ಸಮಯದಲ್ಲಿ, ಕ್ರೇನ್ ಮೇಲೆ ಎಂಟು ವ್ಯಕ್ತಿಗಳು ನೇತಾಡುತ್ತಿದ್ದರು, ಈ ಸಮಯದಲ್ಲಿ ಈ ಘಟನೆ ನಡೆದಿದೆ. ನಂತರ ಕ್ರೇನ್ ಆಪರೇಟರ್ ಕ್ರೇನ್ನ್ನು ನಿಯಂತ್ರಣ ಮಾಡಿದ್ದಾನೆ.
ಇದನ್ನು ಓದಿ:Uttar Pradesh Accident: ಉನ್ನಾವೋ ಬಳಿ ಕಾರು ಹಾಗೂ ಟ್ರಕ್ ನಡುವೆ ಅಪಘಾತ 6 ಮಂದಿ ಸಾವು
ಅಪಘಾತದಲ್ಲಿ ಯುವತಿ ಸೇರಿದಂತೆ ಸುಮಾರು ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಪುನ್ನೈ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅರಕ್ಕೋಣಂ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತ ಸಂಭವಿಸಿದಾಗ ಕ್ರೇನ್‌ನ ಸಮೀಪದಲ್ಲಿ ಸುಮಾರು 1,500 ಭಕ್ತರು ಇದ್ದುದರಿಂದ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಸ್ಥಳೀಯ ಪೊಲೀಸರು ಕ್ರೇನ್ ಆಪರೇಟರ್ ಅನ್ನು ವಶ ಪಡೆದುಕೊಂಡಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:01 am, Mon, 23 January 23