AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puri Jagannath Temple: 14 ವರ್ಷಗಳ ಕನಸು ನನಸು, ಪುರಿಯ ಜಗನ್ನಾಥ ದೇವರ ದರ್ಶನ ಪಡೆದ ಪಾಕಿಸ್ತಾನದ 45 ಹಿಂದೂ ಭಕ್ತರು

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯದಲ್ಲಿ ಪಾಕಿಸ್ತಾನದಿಂದ ಬಂದಿರುವ 45 ಹಿಂದೂ ಭಕ್ತರು ಜಗನ್ನಾಥ ದೇವರ ದರ್ಶನ ಪಡೆದರು.

Puri Jagannath Temple: 14 ವರ್ಷಗಳ ಕನಸು ನನಸು, ಪುರಿಯ ಜಗನ್ನಾಥ ದೇವರ ದರ್ಶನ ಪಡೆದ ಪಾಕಿಸ್ತಾನದ 45 ಹಿಂದೂ ಭಕ್ತರು
ಪುರಿ ಜಗನ್ನಾಥ ದೇವಾಲಯImage Credit source: Mint
TV9 Web
| Edited By: |

Updated on:Jan 23, 2023 | 9:48 AM

Share

ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯದಲ್ಲಿ ಪಾಕಿಸ್ತಾನದಿಂದ ಬಂದಿರುವ 45 ಹಿಂದೂ ಭಕ್ತರು ಜಗನ್ನಾಥ ದೇವರ ದರ್ಶನ ಪಡೆದರು. ಪಾಕಿಸ್ತಾನದಲ್ಲಿ ನೆಲೆಸಿರುವ 45 ಹಿಂದೂಗಳು ಭಾರತಕ್ಕೆ ಬಂದು ಪುರಿಯ ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡುವ ಅವಕಾಶವನ್ನು ಪಡೆದುಕೊಂಡಿದ್ದು, ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗದೆ ಭಾವುಕರಾದರು ಎಂಬುದು ಗಮನಾರ್ಹ. ದೇವಾಲಯಕ್ಕೆ ಪ್ರವೇಶಿಸುವ ಮೊದಲು ಎಲ್ಲಾ 45 ಭಕ್ತರ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಲಾಯಿತು.

ಪಾಕಿಸ್ತಾನದ ಕರಾಚಿಯಿಂದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಸುಮಾರು 45 ಭಕ್ತರು ದೇವತೆಗಳ ದರ್ಶನ ಪಡೆಯಲು ಪವಿತ್ರ ದೇಗುಲಕ್ಕೆ ಭೇಟಿ ನೀಡಿದರು. ಪ್ರೋಟೋಕಾಲ್‌ನ ಭಾಗವಾಗಿ, ಪ್ರವೇಶದ ಮೊದಲು ಅವರ ಪಾಸ್‌ಪೋರ್ಟ್‌ಗಳನ್ನು ಪರೀಕ್ಷಿಸಲಾಯಿತು. ಈ ಭಕ್ತರು ಜನವರಿ 11 ರಂದು ಕರಾಚಿಯಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಪುರಿ ತಲುಪುವ ಮೊದಲು ಭಾರತದ ವಿವಿಧ ಪ್ರಸಿದ್ಧ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಿದರು.

ದರ್ಶನವು ನಮಗೆ ದೈವಿಕ ಅನುಭೂತಿಯನ್ನು ನೀಡಿತು. ಅನುಭವ ವರ್ಣನಾತೀತವಾಗಿತ್ತು. ಜಗನ್ನಾಥನ ರಥಯಾತ್ರೆಯು 2009 ರಿಂದ ಪ್ರತಿ ವರ್ಷ ಕರಾಚಿಯಲ್ಲಿ ನಡೆಯುತ್ತಿದೆ. 2022 ರಲ್ಲಿ ಕರಾಚಿಯಲ್ಲಿ 14 ನೇ ರಥಯಾತ್ರೆಯನ್ನು ನಡೆಸಲಾಯಿತು, ಸುಮಾರು 14 ವರ್ಷಗಳ ಕಾಲ ಕಾದು ಕೊನೆಗೂ ದೇವಾನುದೇವತೆಗಳ ದರ್ಶನ ಪಡೆದೆವು. ಈ ಅವಕಾಶಕ್ಕಾಗಿ ನಾವು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಭಕ್ತರೊಬ್ಬರು ಹೇಳಿದರು.

ಮೂರು ರಥಗಳ ನಿರ್ಮಾಣಕ್ಕಾಗಿ ಶನಿವಾರ ಒಡಿಶಾದ ನಯಾಗರ್ ಜಿಲ್ಲೆಯ ದಸ್ಪಲ್ಲಾದಿಂದ 104 ಮರದ ದಿಮ್ಮಿಗಳನ್ನು ಕಳುಹಿಸಲಾಗಿದೆ. ವಿಶೇಷ ಧಾರ್ಮಿಕ ವಿಧಿ ವಿಧಾನಗಳ ನಂತರ ಮರದ ದಿಮ್ಮಿಗಳನ್ನು ಮಹಾವೀರ ದೇವಸ್ಥಾನಕ್ಕೆ ಕಳುಹಿಸಲಾಯಿತು. ರಾಮ ನವಮಿಯಂದು ಮರವನ್ನು ಕತ್ತರಿಸಲಾಗುತ್ತದೆ ಮತ್ತು ಅಕ್ಷಯ ತೃತೀಯದಂದು ರಥಗಳ ನಿರ್ಮಾಣವನ್ನು ಪ್ರಾರಂಭಿಸಲಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:47 am, Mon, 23 January 23

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು