Puri Jagannath Temple: ಆಗಸ್ಟ್ 16ರಿಂದ ಪುರಿ ಜಗನ್ನಾಥ ದೇವಾಲಯ ಓಪನ್; ಭಕ್ತರಿಗೆ ಕೊವಿಡ್ ನೆಗೆಟಿವ್ ವರದಿ ಕಡ್ಡಾಯ
Puri Jagannath Temple Reopen | ಆಗಸ್ಟ್ 16ರಿಂದ ಬೆಳಗ್ಗೆ 7ರಿಂದ ಸಂಜೆ 8 ಗಂಟೆಯವರೆಗೂ ಪುರಿ ಜಗನ್ನಾಥ ದೇವಾಲಯ ತೆರೆದಿರುತ್ತದೆ. ಭಕ್ತರು ಕೊವಿಡ್ ನೆಗೆಟಿವ್ ಆರ್ಟಿ-ಪಿಸಿಆರ್ ವರದಿ ನೀಡುವುದು ಕಡ್ಡಾಯ.
ಪುರಿ: ಕೊವಿಡ್ ಅಟ್ಟಹಾಸದಿಂದ ಮುಚ್ಚಲ್ಪಟ್ಟಿದ್ದ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಪುರಿ ಜಗನ್ನಾಥ ದೇವಸ್ಥಾನ ಆಗಸ್ಟ್ 16ರಿಂದ ಭಕ್ತರಿಗೆ ತೆರೆಯಲಿದೆ. ಆಗಸ್ಟ್ 16ರಿಂದ ಸ್ಥಳೀಯರ ಭಕ್ತರು ಪುರಿ ಜಗನ್ನಾಥನ ದರ್ಶನ ಪಡೆಯಬಹುದು. ಆಗಸ್ಟ್ 23ರ ನಂತರ ಹೊರ ರಾಜ್ಯಗಳ ಭಕ್ತರ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಆಗಸ್ಟ್ 16ರಿಂದ ಬೆಳಗ್ಗೆ 7ರಿಂದ ಸಂಜೆ 8 ಗಂಟೆಯವರೆಗೂ ಪುರಿ ಜಗನ್ನಾಥ ದೇವಾಲಯ ತೆರೆದಿರುತ್ತದೆ. ಭಕ್ತರು ಕೊವಿಡ್ ನೆಗೆಟಿವ್ ಆರ್ಟಿ-ಪಿಸಿಆರ್ ವರದಿ ನೀಡುವುದು ಕಡ್ಡಾಯ. ಈಗಾಗಲೇ 2 ಡೋಸ್ ಕೊರೊನಾ ಲಸಿಕೆ ಪಡೆದವರು ಲಸಿಕೆ ಪಡೆದ ಸರ್ಟಿಫಿಕೆಟ್ ತೋರಿಸಿದರೆ ಸಾಕು. ಒಂದೇ ಡೋಸ್ ಲಸಿಕೆ ಪಡೆದವರು 96 ಗಂಟೆಯೊಳಗಿನ ಕೊವಿಡ್ ನೆಗೆಟಿವ್ ವರದಿಯನ್ನು ತೋರಿಸಬೇಕು.
Jagannath Temple in Puri to re-open for devotees on August 16
Read @ANI Story | https://t.co/qWbrwHCpnV#COVID pic.twitter.com/ZpN3L1Dhd7
— ANI Digital (@ani_digital) August 4, 2021
ಆಗಸ್ಟ್ 16ರಿಂದ 20ರವರೆಗೆ ಕೇವಲ ಪುರಿಯ ಸುತ್ತಮುತ್ತಲಿನ ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಆಗಸ್ಟ್ 23ರಿಂದ ಎಲ್ಲರಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಶನಿವಾರ ಮತ್ತು ಭಾನುವಾರ ಒರಿಸ್ಸಾದಲ್ಲಿ ವೀಕೆಂಡ್ ಕರ್ಫ್ಯೂ ಇರುವುದರಿಂದ ಪುರಿ ಜಗನ್ನಾಥ ಸ್ವಾಮಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹಾಗೇ, ಆಗಸ್ಟ್ 30ರಂದು ಜನ್ಮಾಷ್ಟಮಿ ಉತ್ಸವದ 2 ದಿನಗಳು ಭಕ್ತರಿಗೆ ಪುರಿ ಜಗನ್ನಾಥ ದೇವಾಲಯದ ಪ್ರವೇಶವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ವಾರಾಂತ್ಯದಲ್ಲಿ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಿಗೆ ನಿಷೇಧ; ಹೊಸ ಸಮಯ, ನಿಯಮಗಳ ಮಾಹಿತಿ ಇಲ್ಲಿದೆ
ರಕ್ಷಾಬಂಧನ, ಗಣೇಶ ಚತುರ್ಥಿಗೆ ಪ್ರವಾಸ ಹೋಗೋ ಪ್ಲಾನ್ ಇದೆಯಾ?; ಮಿಸ್ ಮಾಡದೆ ಈ ಸುದ್ದಿ ಓದಿ
(Puri Jagannath temple to reopen from August 16 for Devotees Covid19 Negative Report Mandatory)