Car Accident: ಹಿಮಾಚಲ ಪ್ರದೇಶದ ಚಂಬಾದಲ್ಲಿ ಕಣಿವೆಗೆ ಉರುಳಿದ ಕಾರು; ಐವರು ಸಾವು, ಇಬ್ಬರಿಗೆ ಗಾಯ

| Updated By: ಸುಷ್ಮಾ ಚಕ್ರೆ

Updated on: Jul 25, 2022 | 8:28 AM

ಚಂಬಾ ಜಿಲ್ಲೆಯ ತಿಸ್ಸಾ ತಹಸಿಲ್‌ನ ಸತ್ರುಂಡಿ ಬಳಿ ಕಾರು ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಚಂಬಾದ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ.

Car Accident: ಹಿಮಾಚಲ ಪ್ರದೇಶದ ಚಂಬಾದಲ್ಲಿ ಕಣಿವೆಗೆ ಉರುಳಿದ ಕಾರು; ಐವರು ಸಾವು, ಇಬ್ಬರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us on

ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ (Chamba District) ಭಾನುವಾರ ಕಾರೊಂದು ಕಣಿವೆಗೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮಾಚಲ ಪ್ರದೇಶಕ್ಕೆ (Himachal Pradesh) ಪ್ರವಾಸಕ್ಕೆ ತೆರಳಿದ್ದವರು ಈ ಅಪಘಾತದಿಂದ ಶವವಾಗಿದ್ದಾರೆ.

ಚಂಬಾ ಜಿಲ್ಲೆಯ ತಿಸ್ಸಾ ತಹಸಿಲ್‌ನ ಸತ್ರುಂಡಿ ಬಳಿ ಕಾರು ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಚಂಬಾದ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Accident: ಆಂಧ್ರ ಪ್ರದೇಶದಲ್ಲಿ ಅಪಘಾತ; ಬೆಂಗಳೂರಿನ ಇಬ್ಬರು ಪೊಲೀಸ್ ಸಿಬ್ಬಂದಿ, ಚಾಲಕ ಸಾವು

ಅಪಾಘತದಲ್ಲಿ ಮೃತಪಟ್ಟವರನ್ನು ಗುರುದಾಸ್​​ಪುರದವರಾದ ರಾಕೇಶ್ ಕುಮಾರ್, ಅಮರ್ ಜೀತ್ ಸಿಂಗ್, ಮನೋಹರ್, ರಾಜೀವ್ ಶರ್ಮಾ ಮತ್ತು ಚಂಬಾ ಮೂಲದ ಹೇಮ್ ಸಿಂಗ್ ಎಂದು ಗುರುತಿಸಲಾಗಿದೆ.