ಹಿಟ್ ಅಂಡ್ ಡ್ರ್ಯಾಗ್ ಘಟನೆಯಲ್ಲಿ, ಇಬ್ಬರ ನಡುವೆ ಘರ್ಷಣೆಯ ನಂತರ ಟ್ರಕ್ (Truck) ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ಕಾರನ್ನು ಎಳೆದುಕೊಂಡು ಹೋಗಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ (Meerut) ಈ ಅಪಘಾತ ಸಂಭವಿಸಿದೆ. ವಿವರಗಳ ಪ್ರಕಾರ, ಅಪಘಾತದ ಸಮಯದಲ್ಲಿ ಕಾರಿನೊಳಗೆ ನಾಲ್ಕೈದು ಜನರು ಇದ್ದಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರನ್ನು ಟ್ರಕ್ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಬ ಸ್ ಚಾಲಕ ಕಾರನ್ನು ಎಳೆದುಕೊಂಡು ಹೋಗುತ್ತಿದ್ದಾಗ ಎರಡನೇ ವಾಹನಕ್ಕೆ ಡಿಕ್ಕಿ ಹೊಡೆದು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
Truck driver’s revenge after men in car allegedly Insulted him – Meerut, UP.pic.twitter.com/u7Ls4Y6FAH
— Mihir Jha (@MihirkJha) February 12, 2023
ಟ್ರಕ್ ಚಾಲಕ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಕಾರಿನಲ್ಲಿದ್ದವರಲ್ಲಿ ಒಬ್ಬರಾದ ಅನಿಲ್ ಕುಮಾರ್ ಹೇಳಿದ್ದಾರೆ. ಬಸ್ ಚಾಲಕನನ್ನು ಎದುರಿಸಲು ಮುಂದಾದಾಗ ತನ್ನ ಕಾರನ್ನು ಎಳೆದುಕೊಂಡು ಹೋಗಲಾಯಿತು ಎಂದು ಅನಿಲ್ ಹೇಳಿದರು.
ಏತನ್ಮಧ್ಯೆ, ಬಸ್ ಚಾಲಕ ಅಮಿತ್ ಎಂದು ಗುರುತಿಸಲಾಗಿದ್ದು, ಮದ್ಯದ ಅಮಲಿನಲ್ಲಿದ್ದ ಎಂದು ಪರ್ತಾಪುರ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಪೊಲೀಸರು ತಿಳಿಸಿದ್ದಾರೆ.ಆತನನ್ನು ಸ್ಥಳದಲ್ಲೇ ಬಂಧಿಸಿ ಬಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಪಘಾತದ ವೇಳೆ ಬಸ್ ದೆಹಲಿಯತ್ತ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ