AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Frog: ಮನೆಯೊಳಕ್ಕೆ ಬಂದ ಕಪ್ಪೆಯನ್ನು ಸಾಯಿಸಿ, ಸಾಂಬಾರ್ ಮಾಡಿಟ್ಟ ಅಪ್ಪ; ಅದನ್ನು ತಿಂದು ಮೃತಪಟ್ಟ ಪುಟ್ಟ ಮಗಳು, ಮನೆ ಮಂದಿ ಅಸ್ವಸ್ಥ

Odisha: ಕಳೆದ ವಾರ 40 ವರ್ಷ ವಯಸ್ಸಿನ ಬುಡಕಟ್ಟು ಸಮುದಾಯದ ಮುಂಡಾ ಅವರ ಮನೆಗೆ ಕಪ್ಪೆ ಪ್ರವೇಶಿಸಿದೆ. ತಂದೆ ಅದರ ಮೇಲೆ ಕೋಪಗೊಂಡು ಅದನ್ನು ಕೊಂದು ಅಡುಗೆ ಮಾಡಿದರು. ಬಳಿಕ ಅದನ್ನು ಕುಟುಂಬಸ್ಥರಿಗೆ ಸೇವಿಸಲು ಹೇಳಿದರು.

Frog: ಮನೆಯೊಳಕ್ಕೆ ಬಂದ ಕಪ್ಪೆಯನ್ನು ಸಾಯಿಸಿ, ಸಾಂಬಾರ್ ಮಾಡಿಟ್ಟ ಅಪ್ಪ; ಅದನ್ನು ತಿಂದು ಮೃತಪಟ್ಟ ಪುಟ್ಟ ಮಗಳು, ಮನೆ ಮಂದಿ ಅಸ್ವಸ್ಥ
ಮನೆಯೊಳಕ್ಕೆ ಬಂದ ಕಪ್ಪೆಯನ್ನು ಸಾಯಿಸಿ, ಸಾಂಬಾರ್ ಮಾಡಿಟ್ಟ ಅಪ್ಪ
TV9 Web
| Edited By: |

Updated on: Feb 13, 2023 | 1:13 PM

Share

ಮನೆಯಪೊಳಕ್ಕೆ ಬಂದ ಕಪ್ಪೆಯನ್ನು (frog) ಕೊಂದ ತಂದೆ (father), ಮನೆ ಮಂದಿಗೆಲ್ಲ ಅದರಿಂದ ಸಾಂಬಾರ್​ ಮಾಡಿಟ್ಟಿದ್ದಾನೆ. ಅದನ್ನು ತಿಂದು ಮೃತಪಟ್ಟ ಪುಟ್ಟ ಮಗಳು (Daughter), ಮನೆ ಮಂದಿಯೆಲ್ಲ ಅಸ್ವಸ್ಥಗೊಂಡಿದ್ದಾರೆ. ಘಟನೆ ಸಂಬಂಧ ಬಾಮೆಬೇರಿ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿಯ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಪ್ಪೆಯೊಂದು ಮನೆಯೊಳಗೆ ಬಂತು ಎಂದು ಕೋಪಗೊಂಡ ಅಪ್ಪ ಅದನ್ನು ಕೊಂದು ಕುದಿಸಿ, ಮನೆ ಮಂದಿಗೆಲ್ಲ ಅದರಿಂದ ಸಾಂಬಾರ್​ ಮಾಡಿಟ್ಟಿದ್ದಾನೆ. ಅದನ್ನು ತಿಂದ ಆರು ವರ್ಷದ ಮಗು ಸಾವನ್ನಪ್ಪಿದೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಬುಡಕಟ್ಟು ಜನಾಂಗದ ಮನೆ ಯಜಮಾನ ಮನೆಗೆ ಬಂದಿದ್ದ ಕಪ್ಪೆಯನ್ನು ಕೊಂದು ಅಡುಗೆ ಮಾಡಿದ್ದಾನೆ.

ನಂತರ ಅದನ್ನು ಸೇವಿಸಿದ ಆರು ವರ್ಷದ ಸುಮಿತ್ರಾ ಮುಂಡಾ ಸಾವನ್ನಪ್ಪಿದ್ದಾಳೆ. ಅಲ್ಲದೆ ಇನ್ನೊಂದು 4 ವರ್ಷದ ಮುನ್ನಿ ಎಂಬ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಕಿಯೋಂಜಾರ್ ಜಿಲ್ಲೆಯ ಜೋಡಾ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ಈ ಕಪ್ಪೆ ಸಾಂಬಾರ್ ತಿಂದ ತಂದೆ ಮುನ್ನಾ ಮುಂಡಾ ಕೂಡ ಅಸ್ವಸ್ಥರಾಗಿದ್ದಾರೆ. ಈ ಸುದ್ದಿ ತಿಳಿದ ಪೊಲೀಸರು ಕಿಯೋಂಜಾರ್‌ನಿಂದ 70 ಕಿಮೀ ದೂರದಲ್ಲಿರುವ ಬಾಮೆಬರಿ ಪೊಲೀಸ್ ಠಾಣೆ ವ್ಯಾಪ್ತಿಯ ಗುರ್ದಾ ಎಂಬ ಹಳ್ಳಿಗೆ ಭೇಟಿ ನೀಡಿದರು. ಘಟನೆಯನ್ನು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ವಿವರಿಸಿದ್ದಾರೆ.

ಕಳೆದ ವಾರ 40 ವರ್ಷ ವಯಸ್ಸಿನ ಬುಡಕಟ್ಟು ಸಮುದಾಯದ ಮುಂಡಾ ಅವರ ಮನೆಗೆ ಕಪ್ಪೆ ಪ್ರವೇಶಿಸಿದೆ. ತಂದೆ ಅದರ ಮೇಲೆ ಕೋಪಗೊಂಡು ಅದನ್ನು ಕೊಂದು ಅಡುಗೆ ಮಾಡಿದರು. ಬಳಿಕ ಅದನ್ನು ಕುಟುಂಬಸ್ಥರಿಗೆ ಸೇವಿಸಲು ಹೇಳಿದರು. ಸ್ವಲ್ಪ ಹೊತ್ತಿನ ನಂತರ ಮನೆ ಮಂದಿಗೆಲ್ಲ ವಾಂತಿಯಾಗಿ ಪ್ರಜ್ಞೆತಪ್ಪಿದರು. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಕಿಯೋಂಜಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆರು ವರ್ಷದ ಬಾಲಕಿ ಸುಮಿತ್ರಾ ಮೃತಪಟ್ಟಿದ್ದಾಳೆ.

ಘಟನೆ ಸಂಬಂಧ ಬಾಮೆಬೇರಿ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಬಾಲಕಿಯ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಬಾಮೆಬೇರಿ ಪೊಲೀಸ್ ಠಾಣೆ ಪ್ರಭಾರಿ ಅಧಿಕಾರಿ ಸ್ವರೂಪ್ ರಂಜನ್ ನಾಯಕ್ ತಿಳಿಸಿದ್ದಾರೆ.

ಕಪ್ಪೆಗಳ ದೇಹದಲ್ಲಿರುವ ಪರೋಟಿಡ್ ಗ್ರಂಥಿಯು ಪರಭಕ್ಷಕಗಳಿಂದ ರಕ್ಷಿಸಲು ವಿಷವನ್ನು ಹೊಂದಿರುತ್ತದೆ. ಇದು ಕಪ್ಪೆಯನ್ನು ತಿನ್ನುವವರ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಕೆಲವು ಕಪ್ಪೆಗಳ ಚರ್ಮವೂ ವಿಷಕಾರಿಯಾಗಿರುತ್ತದೆ ಎಂದು ಇಲ್ಲಿನ ವಿಎಸ್‌ಎಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಸಂಜೀಬ್ ಮಿಶ್ರಾ ಹೇಳಿದ್ದಾರೆ.