ಪ್ರೇತಾತ್ಮಗಳಿಂದ ರಕ್ಷಿಸುವೆ ಎಂದು ನಾಟಕವಾಡಿ, ಯುವತಿಯ ಮದುವೆಯಾಗಲು ಯತ್ನಿಸಿದ ದರ್ಗಾ ಮುಖ್ಯಸ್ಥ ಅರೆಸ್ಟ್

ಹೈದರಾಬಾದ್‌ನ ತೊಲಿಚೌಕಿಯ ಮಹಿಳೆ ಮತ್ತು ಅವರ ಕುಟುಂಬವು ನೆಲ್ಲೂರಿನ ರೆಹಮತ್ ದರ್ಗಾದ ಮುಖ್ಯಸ್ಥ ಹಫೀಜ್ ಪಾಷಾ ಅವರಿಂದ ಸಲಹೆ ಕೇಳಲು ಹೋಗಿದ್ದರು.

ಪ್ರೇತಾತ್ಮಗಳಿಂದ ರಕ್ಷಿಸುವೆ ಎಂದು ನಾಟಕವಾಡಿ, ಯುವತಿಯ ಮದುವೆಯಾಗಲು ಯತ್ನಿಸಿದ ದರ್ಗಾ ಮುಖ್ಯಸ್ಥ ಅರೆಸ್ಟ್
ಯುವತಿಯ ಮದುವೆಯಾಗಲು ಯತ್ನಿಸಿದ ದರ್ಗಾ ಮುಖ್ಯಸ್ಥ ಅರೆಸ್ಟ್
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 13, 2023 | 3:03 PM

ನೆಲ್ಲೂರಿನ (Nellore) ರೆಹಮತ್ 52 ವರ್ಷದ ದರ್ಗಾದ ಮುಖ್ಯಸ್ಥನನ್ನು ಫೆಬ್ರವರಿ 12 ರಂದು ಬಂಧಿಸಲಾಗಿದೆ. ಅವರು 18 ವರ್ಷದ ಯುವತಿಯನ್ನು ಮದುವೆಯಾಗಲು ಯತ್ನಿಸಿದ್ದು, ಮದುವೆಯೆಂಬುದು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂದು ಆಕೆಯ ಕುಟುಂಬಕ್ಕೆ ಆತ ಉಚಿತ ಸಲಹೆ ನೀಡಿದ್ದರು. ಮಹಿಳೆ ರೋಗಗ್ರಸ್ತವಾಗಿದ್ದು, ಆಕೆಯ ಆರೋಗ್ಯವು ಹದಗೆಡುತ್ತಿದೆ ಎಂದು ಹಫೀಜ್ ಪಾಶಾ (Hafeez Pasha) ಒತ್ತಡ ಹಾಕತೊಡಗಿದ್ದರು. ತನ್ನನ್ನು ಮದುವೆಯಾದರೆ (Wedding) ಮಾತ್ರ ಕಾಯಿಲೆ (illness) ವಾಸಿಯಾಗುತ್ತದೆ ಮತ್ತು ಪ್ರಾಣ ಉಳಿಯುತ್ತದೆ ಎಂದು ಆಕೆಯ ಮನೆಯವರಿಗೆ ಹೇಳಿದ್ದರು.

ಅದನ್ನು ನಂಬಿದ ಕುಟುಂಬಸ್ಥರು ಹಫೀಜ್ ಪಾಷಾ ಮನವೊಲಿಸಿ, ಮದುವೆಗೆ ವ್ಯವಸ್ಥೆ ಮಾಡಿದ್ದರು. ಆದರೆ, ಅವರು ಮದುವೆಗೆ ಹಾಜರಾಗದ ಕಾರಣ ಮನೆಯವರಿಗೆ ಅನುಮಾನ ಬಂದಿತ್ತು. ಈ ಮಧ್ಯೆ, ಅವರು ಹಲವಾರು ಮಹಿಳೆಯರನ್ನು ಮದುವೆಯಬ ಹೆಸರಿನಲ್ಲಿ ವಂಚಿಸಿರುವುದು ತಿಳಿದುಬಂದಿತು.

ಇದನ್ನೂ ಓದಿ: Oommen Chandy: ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಅನಾರೋಗ್ಯ; ಬೆಂಗಳೂರಿನ ಆಸ್ಪತ್ರೆಗೆ ರವಾನೆ

ಸುದ್ದಿಗಾರರೊಂದಿಗೆ ಮಾತನಾಡಿದ ಲಾಂಗರ್‌ಹೌಜ್‌ ಪೊಲೀಸ್ ಇನ್ಸ್​​ಪೆಕ್ಟರ್​​ ಶ್ರೀನಿವಾಸ್‌, ”ನಮ್ಮ ಠಅಣಾ ವ್ಯಾಪ್ತಿಯಲ್ಲಿ ತಬಸುಮ್ ಫಾತಿಮಾ ಎಂಬ ಬಾಲಕಿ ದೂರು ನೀಡಿದ್ದು, ನೆಲ್ಲೂರು ರೆಹಮತಾಬಾದ್ ದರ್ಗಾದ ಹಫೀಜ್ ಪಾಷಾ ಮದುವೆಯ ಹೆಸರಿನಲ್ಲಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತೊಲಿಚೌಕಿಯ ಫಾತಿಮಾ ನೆಲ್ಲೂರು ದರ್ಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಫೀಜ್ ಪಾಷಾ ಮೂರು ವರ್ಷಗಳಿಂದ ಮದುವೆಯಾಗುವುದಾಗಿ ಹೇಳಿದ ನಂತರ ಹೈದರಾಬಾದ್ ತೊಲಿಚೌಕಿಯ ಫಂಕ್ಷನ್ ಹಾಲ್‌ನಲ್ಲಿ ಮದುವೆ ಏರ್ಪಡಿಸಿದ್ದರು. ಹಫೀಜ್ ಪಾಷಾ ಈ ಹಿಂದೆ 7 ಮದುವೆಗಳನ್ನು ಮಾಡಿಕೊಂಡಿದ್ದರು ಎಂದು ಹುಡುಗಿಯ ಸಂಬಂಧಿಕರು ಹೇಳುತ್ತಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Mon, 13 February 23