ರೈಲಿನಲ್ಲಿ ಹೆಚ್ಚು ಲಗೇಜ್ (luggage) ಕೊಂಡೊಯ್ಯುವುದಕ್ಕೆ ಇನ್ನು ಮುಂದೆ ಹೆಚ್ಚಿನ ಹಣ ತೆರಬೇಕಾಗುತ್ತದೆ. ಹೆಚ್ಚು ಲಗೇಜ್ ಇದ್ದರೆ, ಪ್ರಯಾಣವೂ ಕಿರಿಕಿರಿಯೇ. ಅಂದ ಹಾಗೆ ರೈಲಿನಲ್ಲಿ (Indian Railways) ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್ ಇದ್ದರೆ, ಪಾರ್ಸೆಲ್ ಕಚೇರಿಗೆ ಹೋಗಿ ಲಗೇಜ್ ಅನ್ನು ಬುಕ್ ಮಾಡಬೇಕಿದೆ. ಬಲ್ಲ ಮೂಲಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಚೈನ್ ಎಳೆಯುವ ಘಟನೆಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದನ್ನು ಗಮನಿಸಿ ಮತ್ತು ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿರುವುದರಿಂದ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್ ಅನ್ನು ಸಾಗಿಸುವ ಬಗ್ಗೆ ರೈಲ್ವೆ ಆಡಳಿತವು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ. ರೈಲಿನಲ್ಲಿ ಪ್ರಯಾಣಿಸುವಾಗ ಸಾಮಾನು ಸರಂಜಾಮು ಕೊಂಡೊಯ್ಯಲು ಮಿತಿ ಇದ್ದರೂ, ಹೆಚ್ಚಿನ ಪ್ರಯಾಣಿಕರು ಹೆಚ್ಚಿನ ಲಗೇಜ್‌ನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದು ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ರೈಲ್ವೆ ಯಾವಾಗಲೂ ದೂರ ಪ್ರಯಾಣಕ್ಕೆ ಇರುವ ವಿಶೇಷ ಆಯ್ಕೆಯಾಗಿದೆ. ವಿಮಾನಕ್ಕಿಂತ ಲಗೇಜ್ ತೆಗೆದುಕೊಂಡು ಹೋಗುವುದಕ್ಕಿಂತ ಹೆಚ್ಚು ಲಗೇಜ್ನ್ನು ರೈಲಿನಲ್ಲಿ ಸಾಗಿಸಬಹುದು.ಹಾಗಾಗಿ ಜನರು ಹೆಚ್ಚಿನ ಲಗೇಜ್ ನೊಂದಿಗೆ ದೂರ ಪ್ರಯಾಣ ಮಾಡುತ್ತಾರೆ.
ಆದರೆ ಈಗ ಇದು ರೈಲ್ವೆ ಹಾಗೂ ಸಹ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. “ಸೆಂಟ್ರಲ್ ರೈಲ್ನ ಮುಂಬೈ ವಿಭಾಗದಲ್ಲಿ ಏಪ್ರಿಲ್ 1 ಮತ್ತು 30 ರ ನಡುವೆ ಸುಮಾರು 332 ಅಲಾರಂ ಚೈನ್ ಎಳೆಯುವ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಕೇವಲ 53 ಪ್ರಕರಣಗಳನ್ನು ಸಮರ್ಥಿಸಲಾಗಿದೆ ಎಂದು ಸಿಆರ್‌ನ ಅಧಿಕಾರಿಯೊಬ್ಬರು ಹೇಳಿದ್ಜಾರೆ. ಹೆಚ್ಚುವರಿ ಲಗೇಜ್ ಅನ್ನು ಲೋಡ್ ಮಾಡಲು ಮತ್ತು ಇಳಿಸಲು ಹೆಚ್ಚು ಸಮಯತೆಗೆದುಕೊಳ್ಳುತ್ತದೆ. ಇದಕ್ಕಾಗಿ ಪ್ರಯಾಣಿಕರು ಚೈನ್ ಎಳೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೇ 29 ರಂದು, ರೈಲ್ವೇ ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಪ್ರಯಾಣದ ಸಮಯದಲ್ಲಿ ಹೆಚ್ಚುವರಿ ಲಗೇಜ್‌ನೊಂದಿಗೆ ಪ್ರಯಾಣಿಸದಂತೆ ಜನರಿಗೆ ಸಲಹೆ ನೀಡಿತ್ತು, “ಲಗೇಜ್ ಹೆಚ್ಚು ಇದ್ದರೆ ಪ್ರಯಾಣದ ಆನಂದ ಅರ್ಧದಷ್ಟು ಕಡಿಮೆ ಆಗುತ್ತದೆ! ಹೆಚ್ಚು ಲಗೇಜ್ ಹೊತ್ತುಕೊಂಡು ರೈಲಿನಲ್ಲಿ ಪ್ರಯಾಣಿಸಬೇಡಿ. ಹೆಚ್ಚುವರಿ ಲಗೇಜ್ ಇದ್ದರೆ, ಪಾರ್ಸೆಲ್ ಕಚೇರಿಗೆ ಹೋಗಿ ಲಗೇಜ್ ಬುಕ್ ಮಾಡಿ ಎಂದು ಸಚಿವಾಲಯ ಟ್ವೀಟ್ ಮಾಡಿತ್ತು.
ರೈಲ್ವೇಯ ಈಗಿರುವ ನಿಯಮಗಳ ಪ್ರಕಾರ, ರೈಲಿನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು 40 ರಿಂದ 70 ಕೆಜಿಯಷ್ಟು ಲಗೇಜ್ ಅನ್ನು ಮಾತ್ರ ಸಾಗಿಸಬಹುದು. ರೈಲ್ವೇಯ ಕೋಚ್‌ಗೆ ಅನುಗುಣವಾಗಿ ಅನುಮತಿಸುವ ಲಗೇಜ್‌ನ ತೂಕದ ಪ್ರಮಾಣವೂ ಕೂಡಾ ಬೇರೆ ಬೇರೆ ಆಗಿರುತ್ತದೆ. ಸ್ಲೀಪರ್, ಎಸಿ ಚೇರ್ ಕಾರ್ ಮತ್ತು ಎಸಿ 3 ಟೈಯರ್ ಕೋಚ್‌ಗಳಲ್ಲಿ ಪ್ರಯಾಣಿಕರು 40 ಕೆಜಿ ವರೆಗೆ ಸಾಗಿಸಬಹುದು. 2ನೇ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರು 50 ಕೆಜಿ ಮತ್ತು 1ನೇ ಎಸಿ ದರ್ಜೆಯ ಪ್ರಯಾಣಿಕರು 70 ಕೆಜಿ ವರೆಗೆ ಸಾಗಿಸಬಹುದು. ಸಾಮಾನ್ಯ ವರ್ಗದಲ್ಲಿ ಈ ಮಿತಿ ಕೇವಲ 35 ಕೆ.ಜಿ.
ಯಾರಾದರೂ ಹೆಚ್ಚು ಲಗೇಜ್‌ನೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬಂದರೆ, ಪ್ರಯಾಣದ ದೂರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುವ ದಂಡದೊಂದಿಗೆ ಹೆಚ್ಚುವರಿ ಲಗೇಜ್‌ಗೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:20 pm, Thu, 2 June 22