AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಬಾಂಗ್ಲಾದೇಶ ನಡುವೆ ಇಂದಿನಿಂದ ಮತ್ತೆ ರೈಲು ಸಂಚಾರ

ಭಾರತ-ಬಾಂಗ್ಲಾದೇಶ ನಡುವೆ ಸಂಚರಿಸುವ ಮೂರನೇ ರೈಲಾದ ಮಿಥಾಲಿ ಎಕ್ಸ್​ಪ್ರೆಸ್​ ಜೂನ್ 1ರಿಂದ ಸಂಚಾರ ಆರಂಭಿಸಲಿದೆ.

ಭಾರತ-ಬಾಂಗ್ಲಾದೇಶ ನಡುವೆ ಇಂದಿನಿಂದ ಮತ್ತೆ ರೈಲು ಸಂಚಾರ
ಕೊಲ್ಕತ್ತಾ-ಢಾಕಾ ರೈಲು
TV9 Web
| Edited By: |

Updated on:May 29, 2022 | 9:26 AM

Share

ಕೊಲ್ಕತ್ತಾ: ಕೊವಿಡ್-19 ಪಿಡುಗಿನ ಕಾರಣದಿಂದ ರದ್ದಾಗಿದ್ದ ಭಾರತ ಮತ್ತು ಬಾಂಗ್ಲಾದೇಶ ನಡುವೆ ರೈಲು ಸಂಚಾರವು (India Bangladesh Train Service) ಇಂದಿನಿಂದ ಮತ್ತೆ ಆರಂಭವಾಗಿದೆ. ಸರ್ಕಾರದ ಈ ನಡೆಯು ಭಾರತ ಮತ್ತು ಬಾಂಗ್ಲಾದೇಶ ಎರಡೂ ದೇಶಗಳ ಜನರಿಗೆ ಅನುಕೂಲ ಕಲ್ಪಿಸಲಿದೆ. ಕೊಲ್ಕತ್ತಾ-ಢಾಕಾ-ಕೊಲ್ಕತ್ತಾ ಮೈತ್ರಿ ಎಕ್ಸ್​ಪ್ರೆಸ್​, ಕೊಲ್ಕತ್ತಾ-ಖುಲ್​ನಾ-ಕೊಲ್ಕತ್ತಾ ಬಂಧನ್ ಎಕ್ಸ್​ಪ್ರೆಸ್​ ರೈಲುಗಳು ಮೇ 29ರಿಂದ ಮತ್ತೆ ಸಂಚಾರ ಆರಂಭಿಸಲಿವೆ ಎಂದು ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲವ್ಯ ಚಕ್ರವರ್ತಿ ಮಾಹಿತಿ ನೀಡಿದರು.

ಭಾರತ-ಬಾಂಗ್ಲಾದೇಶ ನಡುವೆ ಸಂಚರಿಸುವ ಮೂರನೇ ರೈಲಾದ ಮಿಥಾಲಿ ಎಕ್ಸ್​ಪ್ರೆಸ್​ ಜೂನ್ 1ರಿಂದ ಸಂಚಾರ ಆರಂಭಿಸಲಿದ್ದು ನ್ಯೂ ಜಲ್​ಗೈಪುರಿಯಿಂದ ಢಾಕಾಗೆ ಪ್ರಯಾಣ ಬೆಳೆಸಲಿದೆ. ಈ ಮೂರೂ ರೈಲುಗಳ ಎಲ್ಲ ಟಿಕೆಟ್​ಗಳು ಈಗಾಗಲೇ ಮಾರಾಟವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅವಧಿಗೆ ಮೊದಲೇ ನಿಲ್ದಾಣ ತಲುಪಿದ ರೈಲು: ಪ್ರಯಾಣಿಕರ ಡ್ಯಾನ್ಸ್

ನಾವು ಪ್ರಯಾಣಿಸುವಾಗ ಪ್ರತಿ ಬಾರಿಯೂ ನಾವು ತಲುಪಬೇಕಾದ ಸ್ಥಳವನ್ನು ಸರಿಯಾದ ಸಮಯಕ್ಕೆ ತಲುಪುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಬಸ್, ಕ್ಯಾಬ್, ರೈಲಿನಲ್ಲಿ ಓಡಾಡುವಾಗ ಸಮಯದಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಆದರೆ, ರೈಲು ತನ್ನ ನಿಗದಿತ ಸಮಯಕ್ಕಿಂತ 20 ನಿಮಿಷಗಳ ಮೊದಲು ನಿಲ್ದಾಣವನ್ನು ತಲುಪಿದ ಹಿನ್ನೆಲೆಯಲ್ಲಿ ಬಹಳ ಖುಷಿಯಾದ ಪ್ರಯಾಣಿಕರು ರೈಲ್ವೆ ಸ್ಟೇಷನ್​ನಲ್ಲೇ (Railway Station) ಡ್ಯಾನ್ಸ್​ ಮಾಡಿ, ಸಂಭ್ರಮಾಚರಣೆ ಮಾಡಿರುವ ವಿಡಿಯೋ ಇದೀಗ ವೈರಲ್ (Video Viral) ಆಗಿದೆ. ಈ ವಿಡಿಯೋವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಕೂಡ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಾಂದ್ರಾ-ಹರಿದ್ವಾರ ರೈಲು ಬುಧವಾರ ರಾತ್ರಿ 10.15ಕ್ಕೆ ಮಧ್ಯಪ್ರದೇಶದ ರತ್ಲಾಮ್ ನಿಲ್ದಾಣಕ್ಕೆ ಬಂದಾಗ ಖುಷಿಯಾದ ಪ್ರಯಾಣಿಕರು ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಡ್ಯಾನ್ಸ್​ ಮಾಡಿದರು. ಈ ವಿಡಿಯೋವನ್ನು ಸಚಿವ ಅಶ್ವಿನಿ ವೈಷ್ಣವ್ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಪ್ರಯಾಣಿಕರಿಗೆ 10 ನಿಮಿಷಗಳ ಸಾಮಾನ್ಯ ನಿಲುಗಡೆ ಸಮಯಕ್ಕಿಂತ ಸಾಕಷ್ಟು ಹೆಚ್ಚು ಸಮಯ ಸಿಕ್ಕಿದ್ದರಿಂದ ಅವರೆಲ್ಲರೂ ರೈಲಿನಿಂದ ಪ್ಲಾಟ್​ಫಾರ್ಮ್​ಗೆ ಇಳಿದು ಗರ್ಬಾ ನೃತ್ಯ ಪ್ರದರ್ಶಿಸುತ್ತಿರುವುದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:26 am, Sun, 29 May 22

Follow Us
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ