ಮಹಾರಾಷ್ಟ್ರದಲ್ಲಿ ಔರಂಗಜೇಬ್ ಫೋಟೊ ಹಿಡಿದು ನೃತ್ಯ ಮಾಡಿದ 8 ಜನರ ವಿರುದ್ಧ ಪ್ರಕರಣ ದಾಖಲು

| Updated By: ರಶ್ಮಿ ಕಲ್ಲಕಟ್ಟ

Updated on: Jan 16, 2023 | 4:16 PM

ಜನವರಿ 1 ರಂದು ದಾದಾ ಹಯಾತ್ ಖಲಂದರ್ ಅವರ ಉರುಸ್ ಸಮಯದಲ್ಲಿ ಕೆಲವು ಯುವಕರು ಔರಂಗಜೇಬ್ ಅವರ ಫೋಟೋಗಳನ್ನು ಹೊತ್ತುಕೊಂಡು ಘೋಷಣೆಗಳನ್ನು ಕೂಗಿದ್ದರು.

ಮಹಾರಾಷ್ಟ್ರದಲ್ಲಿ ಔರಂಗಜೇಬ್ ಫೋಟೊ ಹಿಡಿದು ನೃತ್ಯ ಮಾಡಿದ 8 ಜನರ ವಿರುದ್ಧ ಪ್ರಕರಣ ದಾಖಲು
ಔರಂಗಜೇಬ್ ಫೋಟೊದೊಂದಿಗೆ ನೃತ್ಯ ಮಾಡಿದ ಜನ
Follow us on

ಮುಂಬೈ:ಮಹಾರಾಷ್ಟ್ರದ (Maharashtra) ವಾಶಿಮ್ ಜಿಲ್ಲೆಯಲ್ಲಿ ಮೊಘಲ್ ದೊರೆ ಔರಂಗಜೇಬ್ (Aurangzeb) ಫೋಟೋದೊಂದಿಗೆ ನೃತ್ಯ ಮಾಡಿದ 8 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ನೃತ್ಯದ ವಿಡಿಯೋ ಭಾನುವಾರ ರಾತ್ರಿ ವೈರಲ್ ಆಗಿದೆ. ಎಬಿಪಿ ನ್ಯೂಸ್‌ಗೆ ನಿಕಟವಾಗಿರುವ ಮೂಲಗಳ ಪ್ರಕಾರ, ಜನವರಿ 14 ರ ರಾತ್ರಿ ಜಿಲ್ಲೆಯ ಮಂಗ್ರುಲ್‌ಪಿರ್‌ನಲ್ಲಿ ದಾದಾ ಹಯಾತ್ ಖಲಂದರ್ ಸಾಹೇಬ್‌ನ ಮೆರವಣಿಗೆ ನಡೆದಿದೆ. ನರ್ತಕರ ಗುಂಪಿನಲ್ಲಿ ಟಿಪ್ಪು ಸುಲ್ತಾನ್, ಔರಂಗಜೇಬ್​​​ನ ಫೋಟೊ ಹಿಡಿದು ಕೆಲವರು ನೃತ್ಯ ಮಾಡಿದ್ದಾರೆ. ವಿಡಿಯೊ ವೈರಲ್ ಆದ ನಂತರ ಪೊಲೀಸರು ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ. ಘಟನೆಯನ್ನು ವಿರೋಧಿಸಿ, ನಗರದ ಸ್ಥಳೀಯ ಹಿಂದೂ ಸಂಘಟನೆಗಳು ಔರಂಗಜೇಬ್ ಅವರ ಪ್ರತಿಕೃತಿಯನ್ನು ದಹಿಸಿದರು. ಅಹಿತಕರ ಘಟನೆಗಳು ನಡೆಯದಂತೆ ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಜನವರಿ 1 ರಂದು ದಾದಾ ಹಯಾತ್ ಖಲಂದರ್ ಅವರ ಉರುಸ್ ಸಮಯದಲ್ಲಿ ಕೆಲವು ಯುವಕರು ಔರಂಗಜೇಬ್ ಅವರ ಫೋಟೋಗಳನ್ನು ಹೊತ್ತುಕೊಂಡು ಘೋಷಣೆಗಳನ್ನು ಕೂಗಿದ್ದರು. ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮಂಗ್ರುಲ್ಪಿರ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Mon, 16 January 23