AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶ್ನೆಗಾಗಿ ನಗದು ಪ್ರಕರಣ: ಲೋಕಸಭೆಯಿಂದ ತನ್ನ ಉಚ್ಚಾಟನೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ಮಹುವಾ ಮೊಯಿತ್ರಾ

Mahua Moitra: 2023 ರ ಡಿಸೆಂಬರ್ 8 ರಂದು ಲೋಕಸಭೆಯು ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವ ಒಂದು ನಿರ್ಣಯವನ್ನು ಅಂಗೀಕರಿಸಿದ್ದು, ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿತ್ತು. ಇದನ್ನು ಪ್ರಶ್ನಿ ಟಿಎಂಸಿ ನಾಯಕಿ ಸುಪ್ರೀಂ ಮೆಟ್ಟಿಲೇರಿದ್ದಾರೆ.

ಪ್ರಶ್ನೆಗಾಗಿ ನಗದು ಪ್ರಕರಣ: ಲೋಕಸಭೆಯಿಂದ ತನ್ನ ಉಚ್ಚಾಟನೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Dec 11, 2023 | 6:15 PM

Share

ದೆಹಲಿ  ಡಿಸೆಂಬರ್ 11: ಪ್ರಶ್ನೆಗಾಗಿ ನಗದು ಆರೋಪದಲ್ಲಿನ (Cash-for-query case) ಶಿಕ್ಷೆ ಕಾನೂನು ಬಾಹಿರ ಎಂದು ಹೇಳಿರುವ ತೃಣಮೂಲ ಕಾಂಗ್ರೆಸ್ (TMC) ನಾಯಕಿ  ಮಹುವಾ ಮೊಯಿತ್ರಾ (Mahua Moitra) ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯೆಯಾಗಿ (MP) ತನ್ನನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ (Supreme Court) ಮೊರೆ ಹೋಗಿದ್ದಾರೆ.

ಸಂಸತ್ ನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿದ ತಪ್ಪಿತಸ್ಥರೆಂದು ಪರಿಗಣಿಸಿ ನೈತಿಕ ಸಮಿತಿಯ ವರದಿಯನ್ನು ಸಂಸತ್ತಿನ ಕೆಳಮನೆ ಅಂಗೀಕರಿಸಿದ ನಂತರ ಅವರನ್ನು ಲೋಕಸಭೆಯಿಂದ ಹೊರಹಾಕಲಾಯಿತು.

ಉಚ್ಚಾಟನೆಯ ಅಧಿಸೂಚನೆ ಏನು ಹೇಳಿದೆ?

2023 ರ ಡಿಸೆಂಬರ್ 8 ರಂದು ಲೋಕಸಭೆಯು ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವ ಒಂದು ನಿರ್ಣಯವನ್ನು ಅಂಗೀಕರಿಸಿದ್ದು, ಅವರನ್ನು ಲೋಕಸಭೆಯಿಂದ ಉಚ್ಚಾಟಿಸಿತ್ತು. ಮಹುವಾ ಮೊಯಿತ್ರಾ, ಪಶ್ಚಿಮ ಬಂಗಾಳದ ಕೃಷ್ಣನಗರ ಸಂಸದೀಯ ಕ್ಷೇತ್ರದಿಂದ ಚುನಾಯಿತ ಸದಸ್ಯರಾಗಿದ್ದಾರೆ. 8ನೇ ಡಿಸೆಂಬರ್ 2023 ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಮಹುವಾ ಮೊಯಿತ್ರಾ ಅವರ ಲೋಕಸಭೆಯ ಸದಸ್ಯತ್ವವನ್ನು ರದ್ದು ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದರು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ಅದಾನಿ ಗ್ರೂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲು ನಗದು ಮತ್ತು ಉಡುಗೊರೆಗಳ ಬದಲಿಗೆ ಪ್ರಶ್ನೆಗಳನ್ನು ಕೇಳಲು ಟಿಎಂಸಿ ನಾಯಕ ಹೀರಾನಂದಾನಿಯಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ದುಬೆ ಅವರು ತಮ್ಮ ಲೋಕಸಭೆಯ ಲಾಗಿನ್ ರುಜುವಾತುಗಳನ್ನು ಹಿರಾನಂದನಿ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಮೊಯಿತ್ರಾ ಅವರು ದರ್ಶನ್ ಹೀರಾನಂದನಿಯಿಂದ ಲಂಚ ಪಡೆದಿದ್ದಾರೆ ಎಂಬುದಕ್ಕೆ ಅಲ್ಲಗಳೆಯಲಾಗದ ಪುರಾವೆಗಳಿವೆ ಎಂದು ಆರೋಪಿಸಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ಸಲ್ಲಿಸಿದ್ದ ವಕೀಲ ಜೈ ಅನಂತ್ ದೇಹದ್ರಾಯಿ ಅವರು ಸ್ವೀಕರಿಸಿದ ಪತ್ರದ ಆಧಾರದ ಮೇಲೆ ದುಬೆ ಅವರು ಲೋಕಸಭೆ ಸ್ಪೀಕರ್‌ಗೆ ಈ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Explainer: ಪ್ರಶ್ನೆಗಾಗಿ ನಗದು ಆರೋಪದಿಂದ ಹಿಡಿದು ಮಹುವಾ ಮೊಯಿತ್ರಾ ಉಚ್ಛಾಟನೆವರೆಗೆ ಏನೇನಾಯ್ತು?

ಮೊಯಿತ್ರಾ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ಉಚ್ಚಾಟನೆಯ ನಂತರ ತನಗೆ ಅನ್ಯಾಯವಾಗಿದೆ ಮತ್ತು ಲೋಕಸಭೆಯ ನೈತಿಕ ಸಮಿತಿಯು ತನ್ನನ್ನು ಹೊರಹಾಕುವ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ದೆಹಲಿ ಹೈಕೋರ್ಟ್‌ನಲ್ಲಿ ದುಬೆ, ಡೆಹದ್ರಾಯ್ ವಿರುದ್ಧ ಮಾನನಷ್ಟ ಮೊಕದ್ದಮೆ

ಮೊಯಿತ್ರಾ ಅವರು ದುಬೆ ಮತ್ತು ದೆಹದ್ರಾಯಿ ಮತ್ತು ವಿವಿಧ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ, ಅವರು ನಗದು ಪ್ರತಿಯಾಗಿ ಉದ್ಯಮಿ ಹೀರಾನಂದಾನಿ ಅವರ ಇಚ್ಛೆಯ ಮೇರೆಗೆ ಸಂಸತ್ತಿನಲ್ಲಿ ಅದಾನಿ ಗ್ರೂಪ್ ಅನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳಿದರು. ನಂತರ, ಮಾಧ್ಯಮ ಸಂಸ್ಥೆಗಳ ವಿರುದ್ಧ ಈ ಸಮಯದಲ್ಲಿ ಯಾವುದೇ ಪರಿಹಾರವನ್ನು ಒತ್ತಾಯಿಸುವುದಿಲ್ಲ ಎಂದು ಅವರು ಹೈಕೋರ್ಟ್‌ಗೆ ತಿಳಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ