ಪ್ರಶ್ನೆಗಾಗಿ ನಗದು ಪ್ರಕರಣ: ಅಕ್ಟೋಬರ್ 31 ರಂದು ನೈತಿಕ ಸಮಿತಿಯ ಮುಂದೆ ಹಾಜರಾಗಲು ಮಹುವಾ ಮೊಯಿತ್ರಾಗೆ ಸೂಚನೆ

|

Updated on: Oct 26, 2023 | 6:22 PM

ಇಂದು, ನಾವು ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರನ್ನು ಕರೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆರೋಪಗಳನ್ನು ಆಲಿಸಿದ್ದೇವೆ. ಈಗ, ನಾವು ಅಕ್ಟೋಬರ್ 31 ರಂದು ಸಂಸದ ಮಹುವಾ ಮೊಯಿತ್ರಾ ಅವರ ವಾದವನ್ನು ಮಂಡಿಸಲು ಕರೆದಿದ್ದೇವೆ ಎಂದು ವಿನೋದ್ ಕುಮಾರ್ ಸೋಂಕರ್ ಹೇಳಿದರು

ಪ್ರಶ್ನೆಗಾಗಿ ನಗದು ಪ್ರಕರಣ: ಅಕ್ಟೋಬರ್ 31 ರಂದು ನೈತಿಕ ಸಮಿತಿಯ ಮುಂದೆ ಹಾಜರಾಗಲು ಮಹುವಾ ಮೊಯಿತ್ರಾಗೆ ಸೂಚನೆ
ಮಹುವಾ ಮೊಯಿತ್ರಾ
Follow us on

ದೆಹಲಿ ಅಕ್ಟೋಬರ್ 26: ಪ್ರಶ್ನೆಗಾಗಿ ನಗದು ಪ್ರಕರಣ (Cash for query) ಸಂಬಂಧಿಸಿದಂತೆ ಮಹುವಾ ಮೊಯಿತ್ರಾ(Mahua Moitra) ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಲೋಕಸಭೆಯ ನೈತಿಕ ಸಮಿತಿಯು (Ethics Committee) ಅಕ್ಟೋಬರ್‌ 31ರಂದು ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್‌ ಸಂಸದರಿಗೆ ಸಮನ್ಸ್‌ ನೀಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ನೈತಿಕ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್, ಸಮಿತಿಯು ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೆಹದ್ರಾಯ್ ಅವರನ್ನು ಪ್ರಕರಣದ ವಿಚಾರಣೆಗೆ ಕರೆದಿದೆ.

ಇಂದು, ನಾವು ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರನ್ನು ಕರೆದು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆರೋಪಗಳನ್ನು ಆಲಿಸಿದ್ದೇವೆ. ಈಗ, ನಾವು ಅಕ್ಟೋಬರ್ 31 ರಂದು ಸಂಸದ ಮಹುವಾ ಮೊಯಿತ್ರಾ ಅವರ ವಾದವನ್ನು ಮಂಡಿಸಲು ಕರೆದಿದ್ದೇವೆ ಎಂದು ವಿನೋದ್ ಕುಮಾರ್ ಸೋಂಕರ್ ಹೇಳಿದರು. ಸಂಸದ ಮಹುವಾ ಮೊಯಿತ್ರಾ ಅವರು ಪ್ರಶ್ನೆ ಕೇಳುವುದಕ್ಕಾಗಿ ಲಂಚ ಪಡೆದಿದ್ದಾರೆ ಎಂದು ದೇಹದ್ರಾಯ್ ಆರೋಪಿಸಿದ್ದರು.

ಮಹುವಾ ಮೊಯಿತ್ರಾ ವಿರುದ್ಧ ನಿಶಿಕಾಂತ್ ದುಬೆ  ದೂರಿನ ನಂತರ ತನಿಖೆ

ಗುರುವಾರ ಸಮಿತಿಯ ಮುಂದೆ ನಿಶಿಕಾಂತ್ ದುಬೆ ಮತ್ತು ಜೈ ಅನಂತ್ ದೇಹದ್ರಾಯ್ ಅವರನ್ನು ಕರೆದ ನಂತರ ತೃಣಮೂಲ ಸಂಸದರನ್ನು ವಿಚಾರಣೆಗೆ ಕರೆಯಲಾಗಿದೆ. ನಿಶಿಕಾಂತ್ ದುಬೆ ಅವರ ದೂರಿನ ನಂತರ ಲೋಕಸಭೆಯ ನೈತಿಕ ಸಮಿತಿಯು ಈ ವಿಷಯವನ್ನು ಕೈಗೆತ್ತಿಕೊಂಡಿದೆ.

ಲೋಕಸಭೆಯ ಸ್ಪೀಕರ್‌ಗೆ ನೀಡಿದ ದೂರಿನಲ್ಲಿ ದುಬೆ ಅವರು ಸುಪ್ರೀಂಕೋರ್ಟ್ ವಕೀಲ ದೆಹದ್ರಾಯಿ ಅವರು ಹಂಚಿಕೊಂಡಿದ್ದಾರೆ ಎನ್ನಲಾದ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ. ಒಂದು ಕಾಲದಲ್ಲಿ ಮಹುವಾ ಮೊಯಿತ್ರಾಗೆ ನಿಕಟವಾಗಿದ್ದ ಜೈ ಅನಂತ್ ದೆಹದ್ರಾ ಅವರು ಟಿಎಂಸಿ ಸಂಸದ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ದರ್ಶನ್ ಹಿರಾನಂದಾನಿ ನಡುವಿನ ‘ಲಂಚ ವಿನಿಮಯ’ವನ್ನು ಬಹಿರಂಗಪಡಿಸುವ ದಾಖಲೆಗಳನ್ನು ಹಂಚಿಕೊಂಡಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸುವ ಪ್ರಯತ್ನದಲ್ಲಿ ಅದಾನಿ ಗ್ರೂಪ್ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಅದಾನಿ, ಬಿಜೆಪಿ ಸಂಸದರ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಾಗ್ದಾಳಿ

ದರ್ಶನ್ ಹಿರಾನಂದಾನಿ ಅಫಿಡವಿಟ್

ಅಕ್ಟೋಬರ್ 22 ರಂದು, ಉದ್ಯಮಿ ದರ್ಶನ್ ಹಿರಾನಂದಾನಿ ಅವರು ನೈತಿಕ ಸಮಿತಿಯ ಮುಂದೆ ಅಫಿಡವಿಟ್ ಸಲ್ಲಿಸಿದ್ದು, ಮಹುವಾ ಮೊಯಿತ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾಗೆ ಲಂಚ ನೀಡಿದ್ದೇನೆ ಎಂದು ಉದ್ಯಮಿ ಹೇಳಿಕೊಂಡಿದ್ದಾರೆ. ಟಿಎಂಸಿ ನಾಯಕರು ಹಲವಾರು ಬೇಡಿಕೆಗಳನ್ನು ಮುಂದಿಟ್ಟು ತಮ್ಮ ಬಳಿ ಲಂಚ ಕೇಳಿದರು ಎಂದು ಅವರು ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Thu, 26 October 23