ಅದಾನಿ, ಬಿಜೆಪಿ ಸಂಸದರ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಾಗ್ದಾಳಿ

Mahua Moitra: ಶನಿವಾರ ಇದಕ್ಕೆ ಪ್ರತಿಕ್ರಿಯಿಸಿದ ಮೊಯಿತ್ರಾ,"ಅವರ ಪಿಎಗಳು ಮತ್ತು ಸಂಶೋಧಕರು/ಇಂಟರ್ನ್‌ಗಳು/ಸಿಬ್ಬಂದಿಗಳು ಐಡಿಗಳನ್ನು ಪ್ರವೇಶಿಸಿದ ಸ್ಥಳದಲ್ಲಿ ಅವರು ಭೌತಿಕವಾಗಿ ಇದ್ದಾರೆ ಎಂಬುದನ್ನು ತೋರಿಸಲು ಸಂಸದರ ಎಲ್ಲಾ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ದಯವಿಟ್ಟು ಎನ್‌ಐಸಿಯನ್ನು ವಿನಂತಿಸಿ.

ಅದಾನಿ, ಬಿಜೆಪಿ ಸಂಸದರ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಾಗ್ದಾಳಿ
ಮಹುವಾ ಮೊಯಿತ್ರಾ
Follow us
ರಶ್ಮಿ ಕಲ್ಲಕಟ್ಟ
|

Updated on:Oct 21, 2023 | 7:52 PM

ದೆಹಲಿ ಅಕ್ಟೋಬರ್ 21: ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​​​​ನಲ್ಲಿ  ತಿರುಗೇಟು ನೀಡಿದ್ದಾರೆ. ಕೈಗಾರಿಕೋದ್ಯಮಿ ದರ್ಶನ್ ಹಿರಾನಂದಾನಿ (Darshan Hiranandani) ಅವರಿಂದ ಲಂಚ ಪಡೆದ ನಂತರ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey) ಅವರು ಮೊಯಿತ್ರಾ ವಿರುದ್ಧ ಭಾರೀ ಆರೋಪಗಳನ್ನು ಮಾಡಿದ್ದರು. ಶನಿವಾರ, ಬಿಜೆಪಿ ನಾಯಕ ಎಕ್ಸ್​​​​ನಲ್ಲಿ ಟಿಎಂಸಿಸಂಸದರ ಸಂಸದೀಯ ಲಾಗಿನ್ ರುಜುವಾತುಗಳನ್ನು ದುಬೈನಲ್ಲಿ ಪ್ರವೇಶಿಸಲಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಈ ಮಾಹಿತಿಯನ್ನು ತನಿಖಾ ಸಂಸ್ಥೆಗಳಿಗೆ ಒದಗಿಸಿದೆ ಎಂದು ಹೇಳಿದ್ದಾರೆ.

ಅದಾನಿ ಗ್ರೂಪ್ ಮೇಲೆ ದಾಳಿ ಮಾಡುವ ಪ್ರಶ್ನೆಗಳನ್ನು ಯಾವ ಆಧಾರದ ಮೇಲೆ ಕೇಳಬಹುದು ಎಂದು ಟಿಎಂಸಿ ಸಂಸದರಿಗೆ ಮಾಹಿತಿ ನೀಡಿರುವುದಾಗಿ ಹಿರಾನಂದಾನಿ ಒಪ್ಪಿಕೊಂಡಿದ್ದಾರೆ. ಮೊಯಿತ್ರಾ ಅವರಿಗೆ “ದುಬಾರಿ ಐಷಾರಾಮಿ ವಸ್ತುಗಳನ್ನು” ನೀಡಿದ್ದೇನೆ. “ಅವಳ ಅಧಿಕೃತ ಬಂಗಲೆಯ ನವೀಕರಣ” ವನ್ನು ಅಂಡರ್‌ರೈಟ್ ಮಾಡಿದ್ದೇನೆ ಎಂದು ಸಹಿ ಮಾಡಿದ ಅಫಿಡವಿಟ್‌ನಲ್ಲಿ ಹಿರಾನಂದಾನಿ ಹೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಸಂಸದೆ ತಮಗೆ ಸಂಸತ್ತಿನ ಲಾಗಿನ್ ಮತ್ತು ಪಾಸ್‌ವರ್ಡ್ ಅನ್ನು ಒದಗಿಸಿದರು ಇದರಿಂದ ಅವರು “ಅವಳ ಪರವಾಗಿ ನೇರವಾಗಿ ಪ್ರಶ್ನೆಗಳನ್ನು ಪೋಸ್ಟ್ ಮಾಡಬಹುದು ಎಂದು ಅಫಿಡವಿಟ್ ನಲ್ಲಿ ಹೇಳಿದ್ದಾರೆ.

ಶನಿವಾರ ಇದಕ್ಕೆ ಪ್ರತಿಕ್ರಿಯಿಸಿದ ಮೊಯಿತ್ರಾ,”ಅವರ ಪಿಎಗಳು ಮತ್ತು ಸಂಶೋಧಕರು/ಇಂಟರ್ನ್‌ಗಳು/ಸಿಬ್ಬಂದಿಗಳು ಐಡಿಗಳನ್ನು ಪ್ರವೇಶಿಸಿದ ಸ್ಥಳದಲ್ಲಿ ಅವರು ಭೌತಿಕವಾಗಿ ಇದ್ದಾರೆ ಎಂಬುದನ್ನು ತೋರಿಸಲು ಸಂಸದರ ಎಲ್ಲಾ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ದಯವಿಟ್ಟು ಎನ್‌ಐಸಿಯನ್ನು ವಿನಂತಿಸಿ. ಸೋರಿಕೆಗಾಗಿ ನಕಲಿ ಪದವಿ ವಾಲಾವನ್ನು ಬಳಸಬೇಡಿ, ಇದನ್ನು ಈಗ ಸಾರ್ವಜನಿಕಗೊಳಿಸಿ ಎಂದಿದ್ದಾರೆ.

ಸಿಬಿಐ ದಾಳಿ ನಡೆಯಲಿರುವ ಬಗ್ಗೆ ಸಂದೇಶ ಕೂಡ ಸಿಕ್ಕಿದೆ. ನಾನು ದುರ್ಗಾ ಪೂಜೆಯಲ್ಲಿ ನಿರತಳಾಗಿದ್ದೇನೆ. ಮನೆಗೆ ಬಂದು ನನ್ನ ಶೂಗಳನ್ನು ಎಣಿಸಲು ನಾನು ಸಿಬಿಐ ಅನ್ನು ಆಹ್ವಾನಿಸುತ್ತೇನೆ. ಆದರೆ ಮೊದಲು ದಯವಿಟ್ಟು ಅದಾನಿ ಭಾರತೀಯರಿಂದ ಕದ್ದ ₹13,000 ಕೋಟಿ ಕಲ್ಲಿದ್ದಲು ಹಣಕ್ಕೆ ಎಫ್‌ಐಆರ್ ದಾಖಲಿಸಿ ಎಂದಿದ್ದಾರೆ.

ಇದನ್ನೂ ಓದಿ: ಹಣಕ್ಕಾಗಿ ದೇಶದ ಭದ್ರತೆಯನ್ನೇ ಅಡಮಾನ ಇರಿಸಿದ ಮಹುವಾ ಮೊಯಿತ್ರಾ; ಬಿಜೆಪಿ ಸಂಸದ ಆರೋಪ

“ಕ್ಷಮಿಸಿ ಮಿಸ್ಟರ್ ಅದಾನಿ. “ಶಾಂತಿ”ಗೆ ಪ್ರತಿಯಾಗಿ ಆರು ತಿಂಗಳವರೆಗೆ ನಿಮ್ಮ ಒಪ್ಪಂದವನ್ನು ನಾನು ತೆಗೆದುಕೊಳ್ಳುತ್ತಿಲ್ಲ. ಮತ ನಾನು ಎರಡನೇ ಒಪ್ಪಂದವನ್ನು ತೆಗೆದುಕೊಳ್ಳುತ್ತಿಲ್ಲ, ಅಲ್ಲಿ ನನಗೆ ನಿಮ್ಮ ಮೇಲೆ ದಾಳಿ ಮಾಡಲು ಅವಕಾಶವಿದೆ ಆದರೆ ಪ್ರಧಾನಿ ಮೇಲೆ ಇಲ್ಲ. ಪ್ರಶ್ನಿಸದೇ ಇರಲು ಅದಾನಿ ನಗದು ನೀಡಿದ್ದಾರೆ. ಈಗ ಅವರು ಪ್ರಶ್ನೆಗಳಿಗೆ ಬಲವಂತವಾದ ನಕಲಿ ಪ್ರಶ್ನೆಗಾಗಿ ನಗದು ಪ್ರಕರಣ ಮಾಡಬೇಕಿದೆ “ಅಜ್ಞಾತ ಎಫ್‌ಪಿಐಗಳು ಅದಾನಿ ಷೇರುಗಳನ್ನು ಹೊಂದಿದ್ದು, ಅದರ ಮೂಲವನ್ನು ಸೆಬಿಯು ಕಂಡುಹಿಡಿಯಲಿಲ್ಲ. ಮುಂಬೈ ವಿಮಾನ ನಿಲ್ದಾಣವನ್ನು ಖರೀದಿಸಲು ಅದಾನಿ ಎಂಎಚ್‌ಎ ಅನುಮತಿಯನ್ನು ಪಡೆಯುತ್ತಾರೆ. ಇದು ರಾಷ್ಟ್ರೀಯ ಭದ್ರತೆಯ ನಿಜವಾದ ಪ್ರಶ್ನೆ. ಪ್ರತಿ ಪಿಎ ಮತ್ತು ಪ್ರತಿ ಎಂಪಿಯ ಪ್ರತಿ ಅನ್ ಚೆಕ್ ಮಾಡದ ಇಂಟರ್ನ್ ತಂಡವು ಸಾರ್ವಜನಿಕವಾಗಿ ಮತ್ತು ಇಚ್ಛೆಯಂತೆ ಪ್ರವೇಶಿಸುವ ಇಮೇಲ್ ಐಡಿಯನ್ನು ಅಲ್ಲ ”ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Sat, 21 October 23