ನವದೆಹಲಿ: 34,000 ಕೋಟಿ ರೂ. ಡಿಎಚ್‌ಎಫ್‌ಎಲ್ ಬ್ಯಾಂಕ್ ವಂಚನೆಗೆ (DHFL Bank Fraud) ಸಂಬಂಧಿಸಿದ ತನಿಖೆಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಧೀರಜ್ ವಾಧವನ್ (Dheeraj Wadhawan) ಅವರನ್ನು ಬಂಧಿಸಿದೆ. 2022ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧೀರಜ್ ವಾಧವನ್ ಅವರ ಮೇಲೆ ಈಗಾಗಲೇ ಸಿಬಿಐ ಚಾರ್ಜ್‌ಶೀಟ್ ದಾಖಲಿಸಿದೆ. ಯೆಸ್ ಬ್ಯಾಂಕ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಧೀರಜ್ ವಾಧವನ್ ಅವರನ್ನು ಈ ಹಿಂದೆ ಸಿಬಿಐ ಬಂಧಿಸಿತ್ತು. ಅವರು ಜಾಮೀನಿನ ಮೇಲೆ ಹೊರಗಿದ್ದರು.
17 ಬ್ಯಾಂಕ್‌ಗಳ ಒಕ್ಕೂಟಕ್ಕೆ 34,000 ಕೋಟಿ ರೂ. ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಡಿಎಚ್‌ಎಫ್‌ಎಲ್ ಪ್ರಕರಣವನ್ನು ದಾಖಲಿಸಿದ್ದು, ಇದು ದೇಶದ ಅತಿದೊಡ್ಡ ಬ್ಯಾಂಕಿಂಗ್ ಸಾಲ ವಂಚನೆಯಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) 22 ಲಕ್ಷ ರೂ. ಮೌಲ್ಯದ ಬಾಕಿ ವಸೂಲಿ ಮಾಡಲು ಮಾಜಿ ಡಿಎಚ್‌ಎಫ್‌ಎಲ್ ಪ್ರವರ್ತಕರಾದ ಧೀರಜ್ ಮತ್ತು ಕಪಿಲ್ ವಾಧವನ್ ಅವರ ಬ್ಯಾಂಕ್ ಖಾತೆಗಳು, ಷೇರುಗಳು ಮತ್ತು ಮ್ಯೂಚುವಲ್ ಫಂಡ್ ಹೋಲ್ಡಿಂಗ್‌ಗಳನ್ನು ಲಗತ್ತಿಸಲು ಆದೇಶಿಸಿತ್ತು.
ಇದನ್ನೂ ಓದಿ: ಮೆಡಿಕಲ್ ಸೀಟು ಹಂಚಿಕೆಯಲ್ಲಿ 800 ಕೋಟಿ ರೂ. ಹಗರಣ ಆರೋಪ: ಖರ್ಗೆ ಅಳಿಯ ವಿರುದ್ಧ ದೂರು
ಧೀರಜ್ ವಾಧವನ್ ಅವರಿಂದ ಬಾಕಿ ಉಳಿದಿರುವ ತಲಾ 10.6 ಲಕ್ಷ ರೂ.ಗಳು ಆರಂಭಿಕ ದಂಡದ ಮೊತ್ತ, ಬಡ್ಡಿ ಮತ್ತು ವಸೂಲಾತಿ ವೆಚ್ಚವನ್ನು ಒಳಗೊಂಡಿರುತ್ತವೆ. 2023ರ ಜುಲೈ ತಿಂಗಳಲ್ಲಿ ನಿಯಂತ್ರಕರು ಡಿಹೆಚ್‌ಎಫ್‌ಎಲ್‌ನ (ಈಗ ಪಿರಮಲ್ ಫೈನಾನ್ಸ್ ಎಂದು ಕರೆಯಲ್ಪಡುವ) ಪ್ರವರ್ತಕರಾಗಿದ್ದ ವಾಧವಾನ್ ಸಹೋದರರಿಗೆ ತಲಾ 10 ಲಕ್ಷ ರೂ. ದಂಡವನ್ನು ವಿಧಿಸಿದರು.
DHFL director Dheeraj Wadhawan arrested by CBI in Rs 34,000-crore bank fraud case, sent to judicial custody: Officials
— Press Trust of India (@PTI_News) May 14, 2024
ಕಪಿಲ್ ವಾಧವನ್ ಡಿಎಚ್‌ಎಫ್‌ಎಲ್‌ನ ಅಧ್ಯಕ್ಷ ಮತ್ತು ಎಂಡಿ ಆಗಿದ್ದರೆ, ಧೀರಜ್ ವಾಧವನ್ ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ಇಬ್ಬರೂ DHFL ಮಂಡಳಿಯಲ್ಲಿದ್ದರು. ಇದರ ಜೊತೆಗೆ, ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಕೋರಿ ಧೀರಜ್ ವಾಧವನ್ ಸಲ್ಲಿಸಿದ ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ ಕಳೆದ ಶನಿವಾರ ಸಿಬಿಐಗೆ ನೋಟಿಸ್ ನೀಡಿತ್ತು.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ DGP ದರ್ಜೆಯ ಅಧಿಕಾರಿಯ ಮಗನ ವಿಚಾರಣೆ
ವೈದ್ಯಕೀಯ ಕಾರಣ ನೀಡಿ ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಅವರು ಮುಂಬೈನ ತಮ್ಮ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೋಟಿಸ್ ಜಾರಿ ಮಾಡಿದ್ದು, ಉತ್ತರ ನೀಡುವಂತೆ ಸೂಚಿಸಿದ್ದಾರೆ.
Central Bureau of Investigation (CBI) arrested DHFL director Dheeraj Wadhawan from Mumbai on Monday. He was allegedly involved in Rs 34,000 crore bank fraud case. Wadhawan was produced before a court in Delhi today and has been sent to judicial custody: CBI officials
— ANI (@ANI) May 14, 2024
ಧೀರಜ್ ವಾಧವನ್ ಅವರನ್ನು ಸೋಮವಾರ ಮುಂಬೈನಲ್ಲಿ ಬಂಧಿಸಲಾಯಿತು. ಮಂಗಳವಾರ ಅವರನ್ನು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಆ ಉದ್ಯಮಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Tue, 14 May 24